Sexual Assault : ಆಸ್ಪತ್ರೆಯ ಶವಾಗಾರದಲ್ಲಿ ಸಿಬ್ಬಂಧಿಯಿಂದ ಲೈಂಗಿಕ ದೌರ್ಜನ್ಯ : ಡೀನ್‌ಗೆ ದೂರು ಹಿಂದೂ ಜಾಗರಣ ವೇದಿಕೆ

ಕೊಡಗು : ಆಸ್ಪತ್ರೆಯ ಶವಾಗಾರದ ಸಿಬ್ಬಂದಿಯೋರ್ವ ಶವಾಗಾರದಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ (Sexual Assault )ಎಸಗಿರುವುದರ ಜೊತೆಗೆ ಶವಗಳ ಜೊತೆಗೆ ವಿಕೃತಿ ಮೆರೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯ ಶವಾಗಾರದಲ್ಲಿ ನಡೆದಿರುವ ಕುರಿತು ಆರೋಪ ಕೇಳಿಬಂದಿದ್ದು, ಶವಗಾರದ ಸಿಬ್ಬಂದಿ ಸೈಯದ್ ಹುಸೇನ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಶವಾಗಾರಕ್ಕೆ ಆಹ್ವಾನಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಹಿಂದೂ ಜಾಗರಣಾ ವೇದಿಕೆ ಆಸ್ಪತ್ರೆಯ ಡೀನ್ ಡಾ.ಕಾರ್ಯಪ್ಪ ಅವರಿಗೆ ದೂರು ನೀಡಿದೆ.

ಸೈಯದ್ ಹುಸೇನ್ ಶವಾಗಾರಕ್ಕೆ ಬರುವ ಮಹಿಳೆಯ ಶವದ ಬೆತ್ತಲೆ ಪೋಟೋಗಳನ್ನು ತನ್ನ ಮೊಬೈಲ್ ನಲ್ಲೇ ಸೆರೆ ಹಿಡಿದಿದ್ದಾನೆ. ಆತನ ಮೊಬೈಲ್ ನಲ್ಲಿ ಮೃತ ಮಹಿಳೆಯರ ನಗ್ನ ಪೋಟೋಗಳು ಪತ್ತೆಯಾಗಿವೆ. ಅಲ್ಲದೇ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳನ್ನು ಶವಗಾರದಲ್ಲಿ ಲೈಂಗಿಕ ಕ್ರೀಯೆಗೆ ಆಹ್ವಾನಿಸಿರುವ ದಾಖಲೆಗಳು ಆತನ ಮೊಬೈಲ್ ನಲ್ಲಿ ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.

ಆಸ್ಪತ್ರೆಯಲ್ಲಿನ ಹತ್ತಾರು ಮಹಿಳೆಯರಿಗೆ ಕರೆ ಮಾಡಿರುವ ಮಾಡಿರುವ ಸೈಯದ್ ಅರ್ಧಗಂಟೆಯ ಕಾಲ ಬರುವಂತೆ ವಿನಂತಿಸಿದ್ದಾನೆ. ಆದ್ರೆ ಮಹಿಳಾ ಸಿಬ್ಬಂದಿ ಶವಾಗಾರಕ್ಕೆ ಬರಲು ಭಯವಾಗುತ್ತದೆ ಎನ್ನಲಾಗುತ್ತಾರೆ. ಆದರೆ ಇದಕ್ಕೆ ಸೈಯದ್ ಏನೂ ಆಗುವುದಿಲ್ಲ, ನಮಗೆ ಪ್ರತ್ಯೇಕ ಕೊಠಡಿ ನೀಡಿದ್ದಾರೆ. ಬನ್ನಿ ಎಂದು ಮಹಿಳೆಯಲ್ಲಿ ಪಟ್ಟು ಹಿಡಿದಿದ್ದಾನೆ. ಒಂದೊಮ್ಮೆ ಬಾರದೇ ಇದ್ರೆ ತಾನೇ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಬೆದರಿಸಿದ್ದಾನೆ. ಅಲ್ಲದೇ ಆಸ್ಪತ್ರೆಯ ಅಂಡರ್ ಪಾಸ್ ಬಳಿಗೆ ಬರಲು ತಿಳಿಸಿದ್ದಾನೆ. ಹೀಗಾಗಿ ಆತ ಮಾರ್ಚ್ ತಿಂಗಳಲ್ಲಿ ಹಲವು ಮಹಿಳೆಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.

ಮಹಿಳೆಯ ಮನೆಗೆ ನುಗ್ಗಿ ಸಿಕ್ಕಿ ಬಿದ್ದ ಕಾಮುಕ :

ಸೈಯದ್ ಹುಸೇನ್ ಇತ್ತೀಚೆಗೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೋರ್ವರ ಮನೆಗೆ ರಾತ್ರಿ ವೇಳೆಯಲ್ಲಿ ನುಗ್ಗಲು ಯತ್ನಿಸಿದ್ದ. ಈ ವೇಳೆಯಲ್ಲಿ ಸ್ಥಳೀಯರು ಆತನನ್ನು ಹಿಡಿದು ಮೊಬೈಲ್ ಪಡೆದುಕೊಂಡಿದ್ದರು. ಈ ವೇಳೆಯಲ್ಲಿ ಮೊಬೈಲ್ ಪರಿಶೀಲನೆ ನಡೆಸಿದ ವೇಳೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಆತನ ಮೊಬೈಲ್ ನಲ್ಲಿ ಮೃತಪಟ್ಟಿರುವ ಮಹಿಳೆಯರು ಹಾಗೂ ಯುವತಿಯರ ನಗ್ನ ಪೋಟೋಗಳನ್ನು ಮಾರ್ಚ್ ನಲ್ಲೇ ಅಕ್ರಮವಾಗಿ ತೆಗೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಮ್ಯಗೇರನ ಬೆಳ್ಯಪ್ಪ ಅವರು ಆಸ್ಪತ್ರೆಯ ಡೀನ್ ಡಾ. ಕಾರ್ಯಪ್ಪ ಅವರಿಗೆ ದೂರು ನೀಡಿದ್ದು, ಸಿಬ್ಬಂದಿಯ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹಿಂದೂ ಜಾಗರಣಾ ವೇದಿಕೆಯ ದೂರಿನ ಆಧಾರದ ಮೇಲೆ ಡೀನ್ ಕರಿಯಪ್ಪ ಮಡಿಕೇರಿ ನಗರ ಪೋಲಿಸ್ ಠಾಣೆಯಲ್ಲಿ ಸೈಯದ್ ಹುಸೇನ್ ವಿರುದ್ದ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿಲ್ಲ. ಆದರೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಡಿ ಗ್ರೂಫ್ ಉದ್ಯೋಗಿ ಸೈಯದ್ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ.

ಕೋವಿಡ್ ವೇಳೆ ಸನ್ಮಾನ ಸ್ವೀಕರಿಸಿದ್ದ ಸೈಯದ್ ಹುಸೇನ್ :

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸೈಯದ್ ಹುಸೇನ್ ಕೋವಿಡ್‌ನಿಂದ ಸಾವನ್ನಪ್ಪಿದ 300 ಕ್ಕೂ ಹೆಚ್ಚು ಜನರ ಶವಗಳನ್ನು ಶವಾಗಾರದಲ್ಲಿ ಸುರಕ್ಷಿತವಾಗಿ ಪ್ಯಾಕ್ ಮಾಡಿದ್ದರು. ಬಿಡುವಿಲ್ಲದ ಕೆಲಸದಿಂದಾಗಿ ಅವರು ಜನರ ಮೆಚ್ಚುಗೆಗೆ ಪಾತ್ರರಾದರು. ಹಾಗಾಗಿ ವಿವಿಧ ಸಂಘಟನೆಗಳು ಅವರನ್ನು ಸನ್ಮಾನಿಸಿವೆ. ಆದರೆ ವ್ಯಕ್ತಿಯ ವಿರುದ್ದ ಇದೀಗ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : School vehicle overturned : ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಾಹನ ಪಲ್ಟಿ : ಓರ್ವ ಮಹಿಳೆ ಸಾವು

ಇದನ್ನೂ ಓದಿ : Crime Case : ಬಿರಿಯಾನಿ ನೀಡಿದ್ದೇ ತಡವಾಯ್ತು : ಮೂವರಿಂದ ರೆಸ್ಟೋರೆಂಟ್ ಸಿಬ್ಬಂದಿಗೆ ಥಳಿತ

ಇದನ್ನೂ ಓದಿ : Crime News : ಬಿರಿಯಾನಿಯಲ್ಲಿ ಪಾಲು ಕೇಳಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪತಿ !

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಕರಿಯಪ್ಪ ಮಾತನಾಡಿ, ಘಟನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಹಿಂದೂ ಜಾಗರಣ ವೇದಿಕೆ ಈ ಬಗ್ಗೆ ನಮಗೆ ದೂರು ನೀಡಿದೆ. ಈ ಘಟನೆ ನಡೆದಿದ್ದರೆ ವಿಷಾದಿಸುತ್ತೇವೆ. ಪ್ರಕರಣದ ತನಿಖೆ ನಡೆಸುವಂತೆ ಮಡಿಕೇರಿ ನಗರ ಪೊಲೀಸರಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

Sexual assault by staff in hospital mortuary: complaint to dean Hindu Jagran Forum

Comments are closed.