Sexual harassment: 17 ವರ್ಷದ ಹುಡುಗಿಯ ಮೇಲೆ ತಂದೆ, ಚಿಕ್ಕಪ್ಪ ಹಾಗೂ ಅಜ್ಜನಿಂದಲೇ ಅತ್ಯಾಚಾರ

ಮುಂಬೈ: (Sexual harassment) 17 ವರ್ಷದ ಹುಡುಗಿಯ ಮೇಲೆ ಸ್ವಂತ ತಂದೆ, ಚಿಕ್ಕಪ್ಪ ಹಾಗೂ ಅಜ್ಜನಿಂದಲೇ ಹಲವು ಬಾರಿ ಅತ್ಯಾಚಾರವೆಸಗಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಬಾಲಕಿ ಪ್ರಸ್ತುತ ಓದುತ್ತಿರುವ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ(Sexual harassment)ದ ಕುರಿತು ವಿಶಾಖಾ ಸಮಿತಿಯ ಸದಸ್ಯರ ಎದುರು ಹುಡುಗಿ ತನಗಾದ ದೌರ್ಜನ್ಯದ ಕುರಿತು ಹೇಳಿಕೊಂಡಿದ್ದಾಳೆ. ಇದಾದ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಇದೀಗ ನಗರದಲ್ಲಿದ್ದ ಸಂತ್ರಸ್ತೆಯ ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಯು , 2016 ಮತ್ತು 2018 ರ ನಡುವೆ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿದ್ದಾಗ, ತನ್ನ ಚಿಕ್ಕಪ್ಪ ಅನೇಕ ಬಾರಿ ಅತ್ಯಾಚಾರವೆಸಗಿದ್ದು, ಅಜ್ಜ ತುಂಬಾನೆ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ನಂತರದಲ್ಲಿ 2018 ರಲ್ಲಿ ಪುಣೆಗೆ ಬಂದ ನಂತರ ತನಗಾದ ಲೈಂಗಿಕ ಕಿರುಕುಳದ ಕುರಿತು ಚೀಟಿಯಲ್ಲಿ ಬರೆದು ತನ್ನ ತಂದೆಗೆ ತಿಳಿಸಿದ್ದಳು. ಆದರೆ ಇದರ ವಿರುದ್ದ ಧ್ವನಿಯೆತ್ತುವ ಬದಲಾಗಿ ಆಕೆಯ ತಾಯಿ ಮನೆಯಲ್ಲಿ ಇಲ್ಲದ ವೇಳೆ ತಂದೆ ಕೂಡ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ತಿಳಿಸಿದ್ದಾಳೆ. ಇದೀಗ ಬಾಲಕಿಯ ತಂದೆ , ಅಜ್ಜ ಮತ್ತು ಚಿಕ್ಕಪ್ಪನ ವಿರುದ್ದ ಪ್ರಕರಣ ದಾಖಲಿಸಿದ್ದೇವೆ ಮತ್ತು ಘಟನೆ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ : Collision between vehicles: ಕಾರುಗಳ ನಡುವೆ ಡಿಕ್ಕಿ: 5 ಸಾವು, ಮೂವರು ಗಂಭೀರ ಗಾಯ

ಇದನ್ನೂ ಓದಿ : Sexual assault against minor: ಉಡುಪಿ : ಬಾಲಕಿಗೆ ಲೈಂಗಿಕ ದೌರ್ಜನ್ಯ, ಅಪರಾಧಿಗೆ 10 ವರ್ಷ ಜೈಲು, 20 ಸಾವಿರ ರೂ. ದಂಡ

ಇದನ್ನೂ ಓದಿ : Mysterious death: ರಾತ್ರಿ ಮಲಗಿದವಳು ಬೆಳಿಗ್ಗೆ ನೋಡುವಾಗ ಸಜೀವ ದಹನವಾಗಿದ್ದಳು ; ಕಾರಣ ನಿಗೂಢ

ಈ ಘಟನೆಯ ಕುರಿತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ(ಪೋಕ್ಸೊ) ಅಡಿಯಲ್ಲಿ ಮೂವರ ವಿರುದ್ದ ದೂರು ದಾಖಲಿಸಲಾಗಿದೆ.

(Sexual harassment) A 17-year-old girl was raped many times by her own father, uncle and grandfather in Pune.

Comments are closed.