Cucumber Juice Reduce BellyFat:ಹೊಟ್ಟೆಯ ಬೊಜ್ಜು ಕರಗಿಸಲು ಕುಡಿಯಿರಿ ಸೌತೆಕಾಯಿ ಜ್ಯೂಸ್

(Cucumber Juice Reduce BellyFat)ಸಾಮಾನ್ಯವಾಗಿ ಸೌತೆಕಾಯಿಯನ್ನು ಊಟದ ಸಮಯದಲ್ಲಿ ಕತ್ತರಿಸಿಕೊಂಡು ತಿನ್ನುತ್ತಾರೆ. ಇದು ಆರೋಗ್ಯಕ್ಕೆ ಅಷ್ಟೇ ಅಲ್ಲದೆ ಸೌಂಧರ್ಯ ಕಾಪಾಡಿಕೊಳ್ಳುವುದಕ್ಕೂ ಸಹಕಾರಿಯಾಗಿದೆ. ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚಾಗುತ್ತಿದ್ದಂತೆ ಆರೋಗ್ಯದ ಮೇಲೆ ಇನ್ನಷ್ಟು ಪರಿಣಾಮವನ್ನು ಬೀರುತ್ತದೆ ಹಾಗಾಗಿ ಸೌತೆಕಾಯಿಯನ್ನು ತಿನ್ನುವುದರಿಂದ ದೇಹವನ್ನು ತಂಪಾಗಿರಿಸುವುದಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಸೌತೆಕಾಯಿ ಜ್ಯೂಸ್‌ ಕುಡಿಯುವುದರಿಂದ ಹೊಟ್ಟೆಯ ಬೊಜ್ಜು ಕರಗಿಸುವುದಕ್ಕೆ ಸಹಾಯ ಮಾಡುತ್ತದೆ.

(Cucumber Juice Reduce BellyFat)ಬೇಕಾಗುವ ಸಾಮಾಗ್ರಿಗಳು:

  • ಸೌತೆಕಾಯಿ
  • ಶುಂಠಿ
  • ಅನಾನಸ್(ಪೈನಾಪಲ್)‌
  • ನಿಂಬೆಹಣ್ಣು
  • ನೀರು

ಮಾಡುವ ವಿಧಾನ:
ಮಿಕ್ಸಿ ಜಾರಿಯಲ್ಲಿ ಒಂದು ಲೋಟ ನೀರು ,ತುಂಡರಿಸಿದ ಅರ್ಧ ಸೌತೆಕಾಯಿ, ಒಂದು ಕಪ್‌ ಅನಾನಸ್‌, ತುಂಡರಿಸಿದ ಅರ್ಧ ಶುಂಠಿ ಮತ್ತು ನಿಂಬೆರಸವನ್ನು ಹಾಕಿ ರುಬ್ಬಿ ಜ್ಯೂಸ್‌ ಮಾಡಿಕೊಂಡು ಕುಡಿಯಬೇಕು. ಹೀಗೆ ಪ್ರತಿನಿತ್ಯ ಕುಡಿಯುತ್ತಾ ಬಂದರೆ ಹೊಟ್ಟೆ ಬೊಜ್ಜು ಕರಗುತ್ತದೆ.

ಸೌತೆಕಾಯಿಯಲ್ಲಿ ವಿಟಮಿನ್‌ ಬಿ, ಸಿ, ಕೆ, ಪೊಟಾಷಿಯಂ ಮತ್ತು ಕಾಪರ್‌ ಅಂಶ ಹೆರಳವಾಗಿ ಇರುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ. ಸೌತೆಕಾಯಿಯನ್ನು ಆಹಾರದೊಂದಿಗೆ ಸೇವಿಸುವುದರಿಂದ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಈ ಸಮಸ್ಯೆಯಿಂದ ದೂರವಿರಬಹುದು. ಇದರ ರಸವನ್ನು ಮುಖಕ್ಕೆ ಹಚ್ಚುವುದರಿಂದ ಸುಕ್ಕು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

ಸೌತೆಕಾಯಿ ಅಧಿಕ ಜಲಾಂಶ ಮತ್ತು ಕ್ಯಾಲರಿಯನ್ನು ಒಳಗೊಂಡಿರುವುದರಿಂದ ಸೌತೆಕಾಯಿಗಳನ್ನು ಸೂಪುಗಳ ಮತ್ತು ಸಲಾಡ್‌ ಗಳ ರೂಪದಲ್ಲಿ ಸೇವನೆ ಮಾಡಿದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸುಲಭವಾಗುತ್ತದೆ.ಪ್ರತಿನಿತ್ಯ ಮೀತವಾಗಿ ಸೌತೆಕಾಯಿಯನ್ನು ಸೇವಿಸುವುದರಿಂದ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸೌತೆ ಕಾಯಿಯಲ್ಲಿ ಕೀಲುಗಳ ಆರೋಗ್ಯವನ್ನು ಸುಧಾರಿಸುವಂತಹ ಶಕ್ತಿ ಇದೆ. ಮತ್ತು ಸೌತೆಕಾಯಿಯನ್ನು ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:Home Remedies for Stretch Mark : ಪ್ರೆಗ್ನೆನ್ಸಿ ನಂತರದ ಸ್ಟ್ರೆಚ್‌ ಮಾರ್ಕ್‌ಗೆ ಇಲ್ಲಿದೆ ಮನೆಮದ್ದು

ಇದನ್ನೂ ಓದಿ:Hair fall solutions :ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ?ಹಾಗಿದ್ದರೆ ಈ ಮೂರು ಪದಾರ್ಥಗಳನ್ನು ಸೇವಿಸಿ

ಇದನ್ನೂ ಓದಿ:Eye infection : ಕರಾವಳಿಯಲ್ಲಿ ಹರಡುತ್ತಿದೆ ಕೆಂಗಣ್ಣು ಬೇನೆ : ಮಕ್ಕಳನ್ನು ಕಾಡುತ್ತಿದೆ ಮದ್ರಾಸ್ ಐ

ಸೌತೆಕಾಯಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕುಕುರ್ಬಿಟೈನ್‌ ಎಂಬ ವಿಷಕಾರಿ ಅಂಶವಿರುವುದರಿಂದ ಅವಶ್ಯಕತೆಗಿಂತ ಹೆಚ್ಚು ಸೌತೆಕಾಯಿಯನ್ನು ತಿನ್ನುವುದರಿಂದ ಟಾಕ್ಸಿಕ್‌ ಅಂಶ ನಿಮ್ಮ ದೇಹವನ್ನು ಸೇರುತ್ತದೆ. ಇದರಿಂದ ನಿಮ್ಮ ಲೀವರ್‌ ಮತ್ತು ಮೂತ್ರಪಿಂಡಕ್ಕೆ ತೊಂದರೆಯಾಗಬಹುದು ಹಾಗಾಗಿ ಇದನ್ನು ಮೀತವಾಗಿ ತಿಂದರೆ ದೇಹಕ್ಕೆ ಉತ್ತಮ. ಸೌತೆಕಾಯಿಯನ್ನು ರಾತ್ರಿಯ ಸಮಯದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಇರುತ್ತದೆ ಹಾಗಾಗಿ ಇದನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಸಮಯದಲ್ಲಿ ಸೇವಿಸಿದರೆ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ.

Drink cucumber juice to dissolve belly fat: how to prepare the cucumber juice

Comments are closed.