shooting attack: ಚಂಚಲ್ ಪಾರ್ಕ್ ಪ್ರದೇಶದ ಕೇಬಲ್ ಕಚೇರಿಯೊಳಗೆ ಗುಂಡಿನ ದಾಳಿ: ಓರ್ವನಿಗೆ ಗಾಯ

ನವದೆಹಲಿ: (shooting attack) ಚಂಚಲ್ ಪಾರ್ಕ್ ಪ್ರದೇಶದಲ್ಲಿನ ಕೇಬಲ್ ಕಚೇರಿಯೊಳಗೆ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂಚಲ್ ಪಾರ್ಕ್ ಪ್ರದೇಶದಲ್ಲಿನ ಕೇಬಲ್ ಕಚೇರಿಯೊಳಗೆ ಮುಸುಕುದಾರಿ ದಾಳಿಕೋರರು ನುಗ್ಗಿದ್ದು, ಕಚೇರಿಯಲ್ಲಿನ ಮುಂಭಾಗದ ಮೇಜಿನ ಬಳಿ ಕುಳಿತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ವ್ಯಕ್ತಿಗೆ ಗಾಯಗಳಾಗಿದ್ದು, ಆರೋಪಿಗಳು ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಪೂರ್ಣ ಸಿಸಿಟಿವಿ ದೃಶ್ಯಾವಳಿಗಳನ್ನು ಸುದ್ದಿ ಸಂಸ್ಥೆ ANI ಹಂಚಿಕೊಂಡಿದ್ದು, ಇದರಲ್ಲಿ ಇಬ್ಬರು ಪುರುಷರು – ಒಬ್ಬ ಪುದೀನ ಹಸಿರು ಮತ್ತು ಇನ್ನೋರ್‌ ದುಷ್ಕರ್ಮಿ ಬಿಳಿ ಕರವಸ್ತ್ರದಿಂದ ಅಸ್ಪಷ್ಟವಾಗಿ ಮುಖವನ್ನು ಮುಚ್ಚಿಕೊಳ್ಳುತ್ತಿದ್ದು, ನಂತರ ತಮ್ಮ ಕೈಯಲ್ಲಿ ಪಿಸ್ತೂಲ್‌ ಹಿಡಿದು ಕಚೇರಿ ಒಳಗೆ ಪ್ರವೇಶಿಸಿದ್ದಾರೆ. ಇದ್ದಕ್ಕಿದ್ದಂತೆ ಕಚೇರಿಯಲ್ಲಿ ಕುಳಿತಿದ್ದ ಮೂವರು ಪುರುಷರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ನಂತರ ಇಬ್ಬರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಆರೋಪಿಯನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.

ಕಾರು ಅಪಘಾತದಲ್ಲಿ 3 ವರ್ಷದ ಬಾಲಕಿ ಸಾವು: ವಾಯುಪಡೆ ಅಧಿಕಾರಿಯ ಪುತ್ರ ಅರೆಸ್ಟ್‌

ಅರ್ಜನ್ ವಿಹಾರ್‌ನಲ್ಲಿ ಮನೆಕೆಲಸ ಮಾಡಲು ತೆರಳುತ್ತಿರುವ ತಾಯಿಯ ಜೊತೆಗೆ ಬಾಲಕಿ ಹೋಗುತ್ತಿದ್ದಳು. ಈ ವೇಳೆ ಭಾರತೀಯ ವಾಯುಪಡೆಯ ಅಧಿಕಾರಿಯ ಪುತ್ರ ಸಮರ್ಕ್ ಮಲಿಕ್ ಕಾರಿನಲ್ಲಿ ತೆರಳುತ್ತಿದ್ದು, ತಾಯಿಯ ಜೊತೆ ತೆರಳುತ್ತಿದ್ದ ಬಾಲಕಿಗೆ ಢಿಕ್ಕಿ ಹೊಡೆದಿದ್ದಾನೆ. ನಂತರ ಚಾಲಕ ಸಮರ್ಕ್ ಗಾಯಗೊಂಡ ಬಾಲಕಿಯನ್ನು ಆಕೆಯ ತಾಯಿಯೊಂದಿಗೆ ದೆಹಲಿ ಕ್ಯಾಂಟ್ ಆಸ್ಪತ್ರೆ ಮತ್ತು ಡಿಡಿಯು ಆಸ್ಪತ್ರೆಗೆ ಕರೆದೊಯ್ದರು. ಹೆಚ್ಚಿನ ಚಿಕಿತ್ಸೆಗೆ ಆರ್ಎಂಎಲ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆ ಬಾಲಕಿ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ತಾಯಿ ಅಪಘಾತದ ಬಗ್ಗೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗ್ರೂಪ್ ಕ್ಯಾಪ್ಟನ್ ಮಗನನ್ನು ಬಂಧಿಸಿದ್ದಾರೆ. ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಕಾರು ಅಪಘಾತದಲ್ಲಿ 3 ವರ್ಷದ ಬಾಲಕಿ ಸಾವು: ವಾಯುಪಡೆ ಅಧಿಕಾರಿಯ ಪುತ್ರ ಅರೆಸ್ಟ್‌

shooting attack: Shooting inside cable office in Chanchal Park area: One injured

Comments are closed.