Shraddha Walker murder case: 3,000 ಪುಟಗಳ ಚಾರ್ಜ್‌ಶೀಟ್‌ ಸಿದ್ದಪಡಿಸಿದ ದೆಹಲಿ ಪೊಲೀಸರು

ದೆಹಲಿ: (Shraddha Walker murder case) ಇಡೀ ದೇಶದಲ್ಲೇ ಸದ್ದು ಮಾಡಿದ್ದ ಶ್ರದ್ದಾ ವಾಕರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲಾ ವಿರುದ್ದ ದೆಹಲಿ ಪೊಲೀಸರು ಮೂರು ಸಾವಿರ ಪುಟಗಳ ಚಾರ್ಜ್‌ ಶೀಟ್‌ ಅನ್ನು ಸಿದ್ದಪಡಿಸಿದ್ದಾರೆ. ಜನವರಿ ಅಂತ್ಯದೊಳಗೆ ಕೋರ್ಟ್‌ ದೆಹಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.

ದೆಹಲಿಯಲ್ಲಿ ಲೊಇವ್‌ ಇನ್‌ ರಿಲೇಷನ್‌ ಶಿಪ್‌ ನಲ್ಲಿದ್ದ ಶ್ರದ್ದಾ ವಾಕರ್‌ ಹತ್ಯೆಗೈದು ಆಕೆಯ ದೇಹವನ್ನು ಮೂವತ್ತೈದು ತುಂಡುಗಳಾಗಿ ಕತ್ತರಿಸಿ ಹಾಕಿದ ಭೀಕರ ಘಟನೆ ನಡೆದಿತ್ತು. ಇದು ಇಡೀ ದೇಶವನ್ನೇ ಒಂದೊಮ್ಮೆ ಬೆಚ್ಚಿಬೀಳಿಸಿತ್ತು. ಇದೀಗ ಮೂಲಗಳ ಪ್ರಕಾರ, ನೂರು ಸಾಕ್ಷಿಗಳನ್ನು ಹೊರತುಪಡಿಸಿ, ಮೂರು ಸಾವಿರಕ್ಕೂ ಹೆಚ್ಚು ಪುಟಗಳ ಕರಡು ಚಾರ್ಜ್‌ ಶೀಟ್‌ ಗೆ ಫೋರೆನ್ಸಿಕ್‌ ಮತ್ತು ಎಲೆಕ್ಟ್ರಾನಿಕ್‌ ಸಾಕ್ಷ್ಯಗಳನ್ನು ಆಧಾರವಾಗಿ ಚಾರ್ಜ್‌ ಶೀಟ್‌ ಅನ್ನು ಸಿದ್ದಪಡಿಸಲಾಗಿದೆ. ಸಿದ್ದ ಪಡಿಸಿದ ಚಾರ್ಜ್‌ ಶೀಟ್‌ ಅನ್ನು ಜನವರಿ ಅಂತ್ಯದೊಳಗೆ ಕೋರ್ಟ್‌ ಗೆ ಸಲ್ಲಿಸುವ ಸಾಧ್ಯತೆಗಳು ಇವೆ.

ಇದೀಗ ದೆಹಲಿ ಪೊಲೀಸರು ಸಿದ್ದಪಡಿಸಿರುವ ಚಾರ್ಜ್‌ ಶೀಟ್‌ ಅನ್ನುಕಾನೂನು ತಜ್ಞರು ಪರಿಶೀಲಿಸುತ್ತಿದ್ದು, ಛತ್ತರ್‌ ಪುರದ ಅರಣ್ಯದಿಂದ ಪತ್ತೆಯಾಗಿರುವ ಮೂಳೆಗಳು ಮತ್ತು ಅವುಗಳ ಡಿಎನ್‌ ಎ ವರದಿಯು ಶ್ರದ್ದಾ ಅವರ ಮೂಳೆಗಳೆ ಎಂದು ಹೇಳಿದೆ ಎನ್ನುವುದಾಗಿ ಪೊಲೀಸರು ಚಾರ್ಜ್‌ ಶೀಟ್‌ ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಅಫ್ತಾಬ್‌ ನ ತಪ್ಪೊಪ್ಪಿಗೆ ಹಾಗೂ ನಾರ್ಕೋ ಪರೀಕ್ಷೆಯ ವರದಿಯನ್ನು ಕೂಡ ಚಾರ್ಜ್‌ ಶೀಟ್‌ ನಲ್ಲಿ ಸೇರಿಸಲಾಗಿದೆ.

ಕಳೆದ ವರ್ಷ ಮೇ 18 ರಂದು ಆರೋಪಿ ಅಫ್ತಾಬ್‌ ಪೂನಾವಾಲಾ ದೆಹಲಿಯ ಛತ್ತರ್‌ ಪುರ ಪ್ರದೇಶದಲ್ಲಿ ಶ್ರದ್ದಾ ವಾಕರ್‌ ಳನ್ನು ಕತ್ತು ಹಿಸುಕಿ ಕೊಂದು ನಂತರ ದೇಹವನ್ನು ಹಲವು ತುಂಡುಗಳನ್ನಾಗಿ ಮಾಡಿ ಕೆಲವು ದಿನ ಫ್ರಿಡ್ಜ್‌ ನೊಳಗೆ ಇಟ್ಟಿದ್ದನು.

ಇದನ್ನೂ ಓದಿ : Consumption of pesticides: ಕೀಟನಾಶಕ ಬೆರೆಸಿ ಮದ್ಯ ಸೇವನೆ : ಇಬ್ಬರ ಸಾವು

ಇದನ್ನೂ ಓದಿ : Assault by police – video viral:‌ ಸೈಕಲ್‌ನಿಂದ ಬಿದ್ದ ವೃದ್ದ ಶಿಕ್ಷಕ: ಅಮಾನುಷವಾಗಿ ಥಳಿಸಿದ ಲೇಡಿ ಪೊಲೀಸರು

ಇದನ್ನೂ ಓದಿ : Chikkamagaluru serial accident: ಚಿಕ್ಕಮಗಳೂರಲ್ಲಿ ಭೀಕರ ಸರಣಿ ಅಪಘಾತ : 20 ವಿದ್ಯಾರ್ಥಿಗಳಿಗೆ ಗಾಯ

Shraddha Walker murder case: Delhi Police prepares 3,000-page charge sheet

Comments are closed.