Leopard attack-4 death: ಮೈಸೂರಿನಲ್ಲಿ ಹೆಚ್ಚಿದ ಚಿರತೆ ಹಾವಳಿ: ಎರಡು ದಿನದಲ್ಲಿ 4 ಸಾವು

ಮೈಸೂರು: (Leopard attack-4 death) ನಗರದಲ್ಲಿ ಚಿರತೆಗಳ ದಾಳಿ ದಿನೇ ದಿನೇ ಹೆಚ್ಚಿತ್ತಿದ್ದು, ಜನತೆ ಚಿರತೆ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ. ಈಗಾಗಲೇ ಟಿ. ನರಸಿಪುರದಲ್ಲಿ ಚಿರತೆ ದಾಳಿಯಿಂದ ನಾಲ್ಕು ಜನ ಜೀವ ಕಳೆದುಕೊಂಡಿದ್ದು, ಇದೀಗ ಇನ್ನೋರ್ವ ವ್ಯಕ್ತಿ ಚಿರತೆ ದಾಳಿಗೆ ಸಿಲುಕಿ ಗಾಯಗೊಂಡಿದ್ದಾರೆ.

ನಿನ್ನೆಯ ದಿನ ಹನ್ನೊಂದು ವರ್ಷದ ಬಾಲಕನೋರ್ವನನ್ನು ಚಿರತೆ ಹೊತ್ತೊಯ್ದಿದ್ದು, ಬಾಲಕನನ್ನು ಕೊಂದು ಹಾಕಿತ್ತು. ಇದಕ್ಕೂ ಮೊದಲು ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದ್ದು, ಇದರಿಂದಾಗಿ ಮಹಿಳೆ ಸಾವಿಗೀಡಾಗಿದ್ದರು. ಇದರಿಂದಾಗಿ ಮೈಸೂರಿನ ಜನತೆ ಬೆಚ್ಚಿಬಿದ್ದಿದ್ದು, ಚಿರತೆ ಸೆರೆಗೆ ಆಗ್ರಹಿಸಿ ಜನರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಕೊನೆಗೂ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮುಂದಾಗಿದ್ದು, ಬಾಲಕನನ್ನು ಕೊಂದ ತಾಯಿ ಚಿರತೆ ಬೋನಿಗೆ ಬಿದ್ದಿದೆ. ಇದರಿಂದಾಗಿ ಟಿ. ನರಸಿಪುರದ ಜನತೆ ನಿಟ್ಟುಸಿರು ಬಿಟ್ಟಿದ್ದರು.

ತಾಯಿ ಚಿರತೆ ಬೋನಿಗೆ ಬಿದ್ದಿದ್ದು, ಇದರ ನಡುವೆಯೇ ಇನ್ನೊಂದು ಚಿರತೆಯ ದಾಳಿ ಪ್ರಕರಣ ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಹಸು ಮೇಯಿಸುತ್ತಿರುವಾಗ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ದಾಳಿಯಿಂದ ಶಿವಕುಮಾರ್‌ ಎನ್ನುವವರು ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿರತೆ ದಾಳಿ ನಡೆಸಿದ್ದ ವೇಳೆ ಶಿವಕುಮಾರ್‌ ಅವರು ಕೂಗಾಡಿದ್ದಾರೆ. ಇದನ್ನು ಕೇಳಿ ಆಸುಪಾಸಿನಲ್ಲಿದ್ದವರು ಸ್ಥಳಕ್ಕೆ ಓಡಿಬಂದಿದ್ದು, ಈ ವೇಳೆ ಚಿರತೆ ಪರಾರಿಯಾಗಿದೆ. ಹೀಗಾಗಿ ಚಿರತೆಯ ದಾಳಿಯಿಂದ ವ್ಯಕ್ತಿಯ ಜೀವ ಉಳಿದಿದೆ. ಮೈಸೂರಿನಾದ್ಯಂತ ಚಿರತೆ ದಾಳಿ ಹೆಚ್ಚುತ್ತಿದ್ದು, ಸಾಕು ಪ್ರಾಣಿಗಳನ್ನು ಬಿಡದೇ ಕೊಲ್ಲುತ್ತಿವೆ. ಇದೀಗ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಯವರು ಎಚ್ಚೆತ್ತುಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿರತೆ ಸಿಕ್ಕಲ್ಲಿ ಗುಂಡಿಟ್ಟು ಕೊಲ್ಲುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ : Chikkamagaluru serial accident: ಚಿಕ್ಕಮಗಳೂರಲ್ಲಿ ಭೀಕರ ಸರಣಿ ಅಪಘಾತ : 20 ವಿದ್ಯಾರ್ಥಿಗಳಿಗೆ ಗಾಯ

ಇದನ್ನೂ ಓದಿ : ಆನ್‌ಲೈನ್‌ ಕೆಲಸ ನೀಡುವುದಾಗಿ ಬ್ರಹ್ಮಾವರದ ಯುವಕನಿಗೆ ಗೂಗಲ್ ಪೇ ಮೂಲಕ 1.40 ಲಕ್ಷ ರೂ. ವಂಚನೆ

Leopard attack-4 death: Leopard attack increased in Mysore: 4 deaths in two days

Comments are closed.