small boy died: ಬೀದಿ ನಾಯಿಗಳಿಂದ ಹಲ್ಲೆ: 4 ವರ್ಷದ ಬಾಲಕ ಸಾವು

ಶಿವಮೊಗ್ಗ: (small boy died) ಬೀದಿ ನಾಯಿಗಳ ದಾಳಿಗೆ ಸಿಲುಕಿ 4 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಭದ್ರಾವತಿ ತಾಲೂಕಿನ ದೊಣಬಘಟ್ಟದಲ್ಲಿ ಇಂದು ನಡೆದಿದೆ. ಸೈಯದ್ ಮದನಿ ಎಂಬಾತನೇ ಮೃತ ಬಾಲಕನಾಗಿದ್ದಾನೆ. ಬುದವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೀದಿಗಳಲ್ಲಿ ಓಡಾಡಲು ಹೇದರುವಂತ ಪರಿಸ್ಥಿತಿ ಎದುರಾಗಿದೆ. ಹಲವರು ಬೀದಿನಾಯಿಗಳ ದಾಳಿಗೆ ಒಳಗಾಗಿ ಸಾವನ್ನಪ್ಪಿರುವ (small boy died) ಉದಾಹರಣೆಗಳು ಇವೆ. ಶಿವಮೊಗ್ಗದಲ್ಲಿ ಅಂತಹದೇ ಒಂದು ಘಟನೆ ನಡೆದಿದೆ.

ನಿನ್ನೆ (ಬುದವಾರ) ಸಂಜೆ 4 ಗಂಟೆಯ ಸುಮಾರಿಗೆ ಮೃತ ಬಾಲಕನ ತಂದೆ ಜಮೀನಿಗೆ ಹೋಗಿದ್ದರು. ಈ ವೇಳೆ ಬಾಲಕ ತಂದೆಯನ್ನ ಹಿಂಬಾಲಿಸಿಕೊಂಡು ಹೋಗಿದ್ದಾನೆ. ಹೀಗೆ ತಂದೆಯನ್ನು ಹಿಂಬಾಲಿಸಿಕೊಂಡು ಹೋಗುವಾಗ 7 ರಿಂದ 8 ಬೀದಿ ನಾಯಿಗಳ ಹಿಂಡು ಬಾಲಕನ ಮೇಲೆ ದಾಳಿ ನಡೆಸಿವೆ. ನಾಯಿಗಳ ದಾಳಿಗೆ ಬಾಲಕ ತೀವ್ರ ಗಾಯಗೊಂಡಿದ್ದಾನೆ ಹಾಗೂ ಅಸ್ವಸ್ಥನಾಗಿದ್ದಾನೆ. ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಬಾಲಕನನ್ನು ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸೈಯದ್ ಮದನಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ.

ಇದನ್ನೂ ಓದಿ : M-bomb blast: ಮಂಗಳೂರು ಬಾಂಬ್‌ ಸ್ಪೋಟ: ಉಗ್ರ ಶಾರೀಖ್ ಹಣದ ಮೂಲದ ಬಗ್ಗೆ ಅಧಿಕಾರಿಗಳಿಂದ ತನಿಖೆ

ಇದನ್ನೂ ಓದಿ : Rape case: ಅತ್ಯಾಚಾರಗೈದ ಮಲತಂದೆ ರಕ್ಷಣೆಗೆ ನಿಂತ ಸಂತ್ರಸ್ತೆ: ಪಟ್ಟು ಬಿಡದ ನ್ಯಾಯಾಧೀಶರು ಮಾಡಿದ್ದೇನು ಗೊತ್ತಾ?

ನಾಯಿಗಳ ದಾಳಿಯ ವೇಳೆ ಬಾಲಕನ ತಂದೆ ಸ್ವಲ್ಪ ದೂರದಲ್ಲೆ ಗದ್ದೆಯೊಂದರಲ್ಲಿ ಭತ್ತ ಕಟಾವು ಮಾಡಿಸುತ್ತಿದ್ದರು. ಭತ್ತ ಕಟಾವು ಮಾಡುತ್ತಿದ್ದ ಯಂತ್ರದ ಶಬ್ದಕ್ಕೆ ನಾಯಿಯಿಂದ ದಾಳಿ ನಡೆದಿದ್ದು ತಿಳಿಯಲಿಲ್ಲ ಎಂಬುದಾಗಿ ತಿಳಿಸಿದ್ದಾರೆ.

(small boy died) The incident in which a 4-year-old boy died after being attacked by stray dogs took place today in Donbaghatta of Shimoga’s Bhadravati taluk. The dead boy is Syed Madani. The incident took place around 4 pm on Wednesday.

Comments are closed.