ಮಂಗಳವಾರ, ಏಪ್ರಿಲ್ 29, 2025
HomeCrimeಕಾರಿನೊಳಗೆ ಟೆಕ್ಕಿ ವಿಚಿತ್ರ ಆತ್ಮಹತ್ಯೆ : ಜೀವಕ್ಕೆ ಮುಳುವಾಯ್ತು ಗೂಗಲ್ ಸರ್ಜ್

ಕಾರಿನೊಳಗೆ ಟೆಕ್ಕಿ ವಿಚಿತ್ರ ಆತ್ಮಹತ್ಯೆ : ಜೀವಕ್ಕೆ ಮುಳುವಾಯ್ತು ಗೂಗಲ್ ಸರ್ಜ್

- Advertisement -

ಬೆಂಗಳೂರು (Bangalore) : : ಆತ್ಮಹತ್ಯೆ ಮಾಡಿಕೊಳ್ಳಲು ಜನ ನಾನಾ ಐಡಿಯಾಗಳನ್ನು ಮಾಡ್ತಾರೆ. ಆದ್ರೆ ಇಲ್ಲೊಬ್ಬ ಪ್ರತಿಷ್ಠಿತ ಸಾಫ್ಟವೇರ್ ಕಂಪೆನಿಯ ಉದ್ಯೋಗಿಯೋರ್ವ (software engineer commits suicide) ಸಾರ್ವಜನಿಕರ ಸಮ್ಮುಖದಲ್ಲೇ ಕಾರಿನೊಳಗೆ ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೈಟ್ರೋಜನ್ ಪೈಪ್ ಮೂಗಿಗೆ ಸಿಕ್ಕಿಸಿಕೊಂಡು ಸಾವನ್ನಪ್ಪಿರುವುದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಆತ ಆತ್ಮಹತ್ಯೆ ಮಾಡಿಕೊಳ್ಳಲು ಗೂಗಲ್ ಸರ್ಚ್‌ (Google search) ಮಾಡಿದ್ದ ಅನ್ನೋ ಅಂಶ ಇದೀಗ ಬಯಲಾಗಿದೆ.

ಬೆಂಗಳೂರು ನಗರದ ಕುರುಬರಹಳ್ಳಿ ಜಂಕ್ಷನ್ ಬಳಿಯಲ್ಲಿ ಈ ಘಟನೆ ನಡೆದಿದೆ. ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿ ವಿಜಯ ಕುಮಾರ್ (51 ವರ್ಷ) ಎಂಬಾತನೇ ಸಾವನ್ನಪ್ಪಿರುವ ಟೆಕ್ಕಿ. ಮಹಾಲಕ್ಷ್ಮೀ ಲೇಔಟ್ ನಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದ ವಿಜಯ್ ಕುಮಾರ್ ಕಳೆದ ಕೆಲವು ಸಮಯದಿಂದಲೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ತನ್ನ ಅನಾರೋಗ್ಯ ಸಮಸ್ಯೆ ಮನೆಯವರಿಗೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ಫ್ಲ್ಯಾನ್ ಮಾಡಿಕೊಂಡಿದ್ದ ವಿಜಯ್ ಕುಮಾರ್ ನೈಟ್ರೋಜನ್ ಸಿಲಿಂಡರ್ ಖರೀದಿ ಮಾಡಿಕೊಂಡಿದ್ದರು. ಮನೆಯಲ್ಲಿ ಕಾರನ್ನು ಸರ್ವಿಸ್ ಗೆ ಕೊಟ್ಟು ಬರುವುದಾಗಿ ಹೇಳಿದ್ದ ವಿಜಯ ಕುಮಾರ್, ಕುರುಬರಹಳ್ಳಿ ಜಂಕ್ಷನ್ ಬಳಿಯಲ್ಲಿ ಬರುತ್ತಿದ್ದಂತೆಯೇ ಕಾರನ್ನು ನಿಲ್ಲಿಸಿದ್ದಾರೆ. ಸಾರ್ವಜನಿಕರಲ್ಲಿ ತನಗೆ ಸುಸ್ತಾಗುತ್ತಿದೆ. ಹೀಗಾಗಿ ನಾನು ಮಲಗುತ್ತೇನೆ ಎಂದು ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ವಿಜಯ್ ಕುಮಾರ್ ಕಾರಿಗೆ ಕವರ್ ಮುಚ್ಚುವಂತೆ ಸಾರ್ವಜನಿಕರ ಬಳಿಯಲ್ಲಿ ಮನವಿ ಮಾಡಿಕೊಂಡಿದ್ದಾನೆ.

ಕಾರಿನ ಹಿಂಬದಿ ಸೀಟ್ ನಲ್ಲಿ ಕುಳಿತುಕೊಂಡು ತಲೆಗೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ನೈಟ್ರೋಜನ್ ಗ್ಯಾಸ್ ಅನ್ನು ಬಾಯಿ ಹಾಗೂ ಮೂಗಿಗೆ ಹಾಯಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿಜಯ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗಮಧ್ಯದಲ್ಲಿಯೇ ವಿಜಯ ಕುಮಾರ್ ಸಾವನ್ನಪ್ಪಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Taj Mahal : 1 ಕೋಟಿ ರೂ. ಟ್ಯಾಕ್ಸ್ ಕಟ್ಟಿ, ಇಲ್ಲದಿದ್ರೆ ಸೀಜ್ : ತಾಜಮಹಲ್‌ಗೆ ನೋಟಿಸ್ ಜಾರಿ

ಇದನ್ನೂ ಓದಿ : ಶಿಕ್ಷಕರು ಮಕ್ಕಳೊಂದಿಗೆ ಸೂಕ್ಷ್ಮವಾಗಿ ವರ್ತಿಸಿ : ಅರಿವು ಕಾರ್ಯಕ್ಕೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಸೂಚನೆ

ಆತ್ಮಹತ್ಯೆಗೆ ಗೂಗಲ್ ಸರ್ಜ್ !

ವಿಜಯಕುಮಾರ್ ಕಳೆದ ಹಲವು ಸಮಯಗಳಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಗೂಗಲ್ ನಲ್ಲಿ ಸಾಕಷ್ಟು ಸರ್ಜ್ ಮಾಡಿದ್ದಾರೆ. ಯಾವ ರೀತಿಯಲ್ಲಿ ಆರೋಗ್ಯ ಸಮಸ್ಯೆ ಎದುರಾಗಲಿದೆ. ಇದರಿಂದ ಕುಟುಂಬಸ್ಥರು ಯಾವ ರೀತಿಯ ತೊಂದರೆಗೆ ಒಳಗಾಗಲಿದ್ದಾರೆ ಅನ್ನೋದನ್ನೂ ಸರ್ಜ್ ಮಾಡಿದ್ದರು. ಇದರಿಂದಾಗಿ ಸಾಕಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದ ವಿಜಯ್ ಕುಮಾರ್ ನೋವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನೆಯವರ ಬಳಿಯಲ್ಲಿಯೂ ಆಗಾಗ ಹೇಳಿಕೊಳ್ಳುತ್ತಿದ್ದರು. ಆದರೆ ಮನೆಯವರು ಸಾಕಷ್ಟು ಬಾರಿ ಸಮಾಧಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆತ್ಮಹತ್ಯೆಗೆ ಕುರಿತಂತೆ ಗೂಗಲ್ ನಲ್ಲಿ ಸಾಕಷ್ಟು ಸರ್ಜ್ ಮಾಡಿದ್ದರು ಎನ್ನಲಾಗುತ್ತಿದೆ.

ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಅತೀ ಬುದ್ದಿವಂತರು !

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಟೆಕ್ಕಿಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲಸದ ಒತ್ತಡ, ಅನಾರೋಗ್ಯ ಸಮಸ್ಯೆ ಇಂದು ಆತ್ಮಹತ್ಯೆಗೆ ಕಾರಣವಾಗುತ್ತಿದೆ. ಈ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ.

Strange software engineer commits suicide inside the car in Bangalore Google search causes death

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular