ಅಮೇರಿಕಾದಲ್ಲಿ ಭಾರತದ ವಿದ್ಯಾರ್ಥಿಯೊಬ್ಬನ್ನು ಗುಂಡಿಕ್ಕಿ ಹತ್ಯೆ

ಅಮರಾವತಿ : ಅಮೆರಿಕದ ಓಹಿಯೋ ರಾಜ್ಯದಲ್ಲಿ ಶಂಕಿತ ದರೋಡೆ ಪ್ರಕರಣವೊಂದರಲ್ಲಿ ಆಂಧ್ರಪ್ರದೇಶದ (Student From Andhra Pradesh) ವಿದ್ಯಾರ್ಥಿಯೊಬ್ಬನನ್ನು ಅಪರಿಚಿತ ವ್ಯಕ್ತಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ. ವಿದೇಶಕ್ಕೆ ಉನ್ನತ ಶಿಕ್ಷಣಕ್ಕೆಂದು ತೆರಳಿದ ಯುವಕ ಗುಂಡು ಏಟಿನಿಂದ ಮೃತಪಟ್ಟಿದ್ದಾನೆ.

ಮೃತ ದುರ್ದೈವಿ ಆಂಧ್ರಪ್ರದೇಶದ ಏಲೂರು ಮೂಲದ ವೀರ ಸಾಯೇಶ್ (25) ಎಂದು ಗುರುತಿಸಲಾಗಿದೆ. ವೀರ ಸಾಯೇಶ್ ಗುರುವಾರ ಬೆಳಿಗ್ಗೆ ಕೊಲಂಬಸ್‌ನ ಫ್ರಾಂಕ್ಲಿಂಟನ್‌ನ ವೆಸ್ಟ್ ಬ್ರಾಡ್ ಸ್ಟ್ರೀಟ್‌ನಲ್ಲಿರುವ ಇಂಧನ ಕೇಂದ್ರದಲ್ಲಿ ಕೊಲೆಯಾಗಿರುತ್ತಾರೆ. ಆತನ ಕುಟುಂಬಕ್ಕೆ ದೊರೆತ ಮಾಹಿತಿಯ ಪ್ರಕಾರ, ದುಷ್ಕರ್ಮಿ ಸಾಯೇಶ್ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಶೆಲ್ ಇಂಧನ ಕೇಂದ್ರದಲ್ಲಿ ಸ್ಥಳೀಯ ಕಾಲಮಾನ ಪ್ರಕಾರ ಮಧ್ಯಾಹ್ನ 12.50 ಕ್ಕೆ ಗುಂಡು ಹಾರಿಸಿದ್ದಾನೆ.

ತನ್ನ ಸ್ನಾತಕೋತ್ತರ ಕೋರ್ಸ್‌ನಲ್ಲಿ ಓದುತ್ತಿದ್ದ ಮತ್ತು ಇಂಧನ ಕೇಂದ್ರದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಸಾಯೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ಹೋಗುವುದರ ಒಳಗೆ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಸ್ವಲ್ಪ ಸಮಯದ ನಂತರ ಸಂತ್ರಸ್ತ ಸಾವನ್ನಪ್ಪಿದರು ಎಂದು ಘೋಷಿಸಲಾಗಿದೆ. ಕೊಲಂಬಸ್ ಪೊಲೀಸರು ಶಂಕಿತನ ಫೋಟೋಗಳನ್ನು ಹಂಚಿಕೊಂಡಿದ್ದು, ಅವನ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಜನರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ICICI Bank data leak : ಕ್ರೆಡಿಟ್ ಕಾರ್ಡ್ ನಿಂದ ಪಾಸ್ ಪೋರ್ಟ್ ವರೆಗೆ ಲಕ್ಷಾಂತರ ಬಳಕೆದಾರರ ಮಾಹಿತಿ ಸೋರಿಕೆ!

ಇದನ್ನೂ ಓದಿ : ಸುಡಾನ್ ಸಂಘರ್ಷ : ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ

ಗುಂಡಿನ ದಾಳಿಯ ಹಿಂದಿನ ಉದ್ದೇಶವನ್ನು ಇನ್ನೂ ಸ್ಥಾಪಿಸಲಾಗಿಲ್ಲವಾದರೂ, ಇದು ದರೋಡೆಯ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡ ಸಾಯೀಶ್, ಅಧ್ಯಯನಕ್ಕಾಗಿ ನವೆಂಬರ್ 2021 ರಲ್ಲಿ ಯುನೈಟೆಡ್ ಸ್ಟೇಟ್ಸ್ಗೆ ಹೋಗಿದ್ದಾನೆ. ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು, ಅವರು ಇಂಧನ ಕೇಂದ್ರದಲ್ಲಿ ಅರೆಕಾಲಿಕ ಉದ್ಯೋಗವನ್ನೂ ಮಾಡಿಕೊಂಡಿದ್ದರು. ಏಲೂರಿನಲ್ಲಿ ನೆಲೆಸಿರುವ ಅವರ ತಾಯಿ ಮತ್ತು ಅಣ್ಣನಿಗೆ ಮಾಹಿತಿ ಸಿಕ್ಕಾಗ ಬೆಚ್ಚಿಬಿದ್ದಿದ್ದಾರೆ. ಪಾರ್ಥೀವ ಶರೀರವನ್ನು ಮನೆಗೆ ತರಲು ಸಹಾಯ ಮಾಡುವಂತೆ ಅವರು ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ.

Student From Andhra Pradesh : An Indian student was shot dead in America

Comments are closed.