Student Rape: ವಿದ್ಯಾರ್ಥಿನಿಯನ್ನು ಅಪಹರಿಸಿ ಯುವಕರಿಂದ ಅತ್ಯಾಚಾರ: ಆರೋಪಿಗಳಿಗಾಗಿ ಹುಡುಕಾಟ

ಸಿಂಧನೂರು: (Student Rape) ಒಂಬತ್ತು ವರ್ಷದ ಬಾಲಕಿಯೋರ್ವಳನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಘಟನೆ ಹೊಸಪೇಟೆಯ ಸಿಂಧನೂರು ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿಂದನೂರು ನಿವಾಸಿಯಾಗಿರುವ ವಿದ್ಯಾರ್ಥಿನಿಯು ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

ವಿದ್ಯಾರ್ಥಿನಿಯು (Student Rape) ನ.25ರಂದು ತನ್ನ ತಾಯಿಯ ತವರೂರಾದ ಹೊಸ ಪೇಟೆಗೆ ಹೋಗಿದ್ದಳು. ಪುನಃ ನ.27 ರಂದು ಹೊಸಪೇಟೆಯಿಂದ ಸಿಂಧನೂರಿಗೆ ವಾಪಸ್‌ ಬರುವ ವೇಳೆ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಅಪ್ರಾಪ್ತೆಯನ್ನು ಆರೋಪಿ ಸಚಿನ್‌ ಮತ್ತು ಆತನ ಗೆಳೆಯ ಇಬ್ಬರೂ ಸೇರಿ ಅಪಹರಿಸಿದ್ದಾರೆ. ತದನಂತರಲ್ಲಿ ಇಬ್ಬರು ಆರೋಪಿಗಳು ಮಧ್ಯಪಾನ ಮಾಡಿದ್ದು, ಗಂಗಾವತಿಯಿಂದ ಹೊಸಪೇಟೆಗೆ ಹೋಗುವ ವೇಳೆ ಮಾರ್ಗಮಧ್ಯದಲ್ಲಿ ಕಾರಿನಲ್ಲೆ ಸಚಿನ್‌ ಎಂಬಾತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ ಆತನ ಸ್ನೇಹಿತ ಕೂಡ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇಬ್ಬರು ಕುಡಿದ ಮತ್ತಿನಲ್ಲಿ ಈ ರೀತಿಯ ಹೇಯ ಕೃತ್ಯ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ತಾಯಿ ಸಿಂಧನೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಚಿನ್‌ ಹಾಗೂ ಆತನ ಸ್ನೇಹಿತ ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ : Fake suicide drama: ಅಪ್ಪ- ಅಮ್ಮನ ಸಾವಿಗೆ ಸೇಡು ತೀರಿಸಿಕೊಳ್ಳಲು ಮಗಳು ಮಾಡಿದ್ದು ಖತರ್ನಾಕ್ ಪ್ಲ್ಯಾನ್: ಈಕೆಯ ಮಾಸ್ಟರ್ ಮೈಂಡ್ ಹಿಂದಿತ್ತು ಹಿಂದಿ ಸೀರಿಯಲ್..!

ಇದನ್ನೂ ಓದಿ : Rape and Murder Case: ಅಪ್ಪನ ಮೇಲಿನ ಸೇಡಿಗೆ ಮಗಳ ಮೇಲೆ ಅತ್ಯಾಚಾರವೆಸಗಿ ಕೊಂದ ಆರೋಪಿ

ಇದನ್ನೂ ಓದಿ : Mine collapse: ಛತ್ತೀಸ್‌ಗಢ ಗಣಿ ಕುಸಿತ: 7 ಸಾವು

ಇದನ್ನೂ ಓದಿ : Series Accident: ಗಾಂಜಾ ನಶೆಯಲ್ಲಿ ಡ್ರೈವಿಂಗ್, ಸರಣಿ ಅಪಘಾತ ನಡೆಸಿ ಎಸ್ಕೇಪ್ :12kM ಚೇಸಿಂಗ್ ಮಾಡಿ ಚಾಲಕನ ಸೆರೆ ಹಿಡಿದ ಸ್ಥಳೀಯರು

(Student Rape) The incident of abducting and raping a nine-year-old girl took place near Sindanur in Hospet, and it came to light late. The student, who is a resident of Sindanur, is studying in class 9 in a school.

Comments are closed.