Ayra Yash : ಐರಾ ಯಶ್‌ಗೆ 4ನೇ ವರ್ಷದ ಹುಟ್ಟುಹಬ್ಬ : ಐರಾಗೆ ಸ್ಪೆಷಲ್ ವಿಶ್ ಮಾಡಿದ ಅಮ್ಮ ರಾಧಿಕಾ ಪಂಡಿತ್

ಕನ್ನಡ ಚಿತ್ರರಂಗದ ಖ್ಯಾತ ದಂಪತಿಗಳಾದ ಯಶ್‌ ಮತ್ತು ರಾಧಿಕಾ ಪಂಡಿತ್‌ ಅವರ ಮುದ್ದಿನ ಮಗಳು ಐರಾ ಯಶ್‌ಗೆ (Ayra Yash) ನಾಲ್ಕನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ಮಕ್ಕಳು ಕೂಡ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಸ್ಟಾರ್‌ ಮಕ್ಕಳ ಎಲ್ಲಾ ಚಟುವಟಿಕೆಗಳನ್ನು ಅಭಿಮಾನಿಗಳು ಗಮನಿಸುತ್ತಾ ಇರುತ್ತಾರೆ. ಸ್ಟಾರ್‌ ನಟ – ನಟಿಯರಿಗೆ ಇದಷ್ಟೇ ಅಭಿಮಾನಿಗಳು ಅವರ ಮಕ್ಕಳಿಗೂ ಇದ್ದಾರೆ. ಇದೀಗ ನಟಿ ರಾಧಿಕಾ ಪಂಡಿತ್‌ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಬಹಳ ಕ್ಯೂಟ್‌ ಆಗಿ ಮಾಡಿದ್ದಾರೆ.

ರಾಧಿಕಾ ತಮ್ಮ ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ” ನನ್ನ ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಮಗಳ ಪೋಟೋಗೆ ಕ್ಯಾಪ್ಶನ್‌ ಬರೆದಿದ್ದು, ಕ್ಯೂಟ್‌ ಆದ ಪೋಟೋವನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಐರಾ ತನ್ನ ಅಜ್ಜ-ಅಜ್ಜಿ ಜೊತೆಗೆ ಇರುವ ಪೋಟೋವನ್ನು ಕೂಡ ಸ್ಟೋಟಿಯಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್‌ ಹಂಚಿಕೊಂಡ ಪೋಟೋದಲ್ಲಿ ಪುಟ್ಟ ಐರಾಳ ಮುದ್ದಾದ ಪೋಟೋವನ್ನು ನೋಡಬಹುದಾಗಿದೆ.

ಯಶ್‌ ಮಗಳು ಹುಟ್ಟಿನಿಂದ ಎಲ್ಲೆಡೆ ಸುದ್ದಿಯಲ್ಲಿದ್ದಾಳೆ. ಹಾಗಾಗಿ ಕೆಜಿಎಫ್‌ ಸ್ಟಾರ್‌ ಯಶ್‌ ಪುತ್ರಿ ಈಗ ಎಲ್ಲರಿಗೂ ಪರಿಚಿತಳಾಗಿದ್ದಾಳೆ.ರಾಧಿಕಾ ಪಂಡಿತ್‌ ಅವರು ಅವರ ಮಗಳು ಹಾಗೂ ಮಗನ ಪೋಟೋ ಮತ್ತು ವಿಡಿಯೋವನ್ನು ಯಾವಗಲೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.ಈಗ ನಟಿ ಹಂಚಿಕೊಂಡ ಪೋಟೋಕ್ಕೆ ಅಭಿಮಾನಿಗಳು ಐರಾಳಿಗೆ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.

ಇದನ್ನೂ ಓದಿ : Zubin Nautiyal Injured:ಮೆಟ್ಟಿಲಿನಿಂದ ಬಿದ್ದ ಬಾಲಿವುಡ್ ಖ್ಯಾತ ಗಾಯಕ ಜುಬಿನ್‌ ನೌಟಿಯಾಲ್‌ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Sreeleela : 7 ತೆಲುಗು ಸಿನಿಮಾಕ್ಕೆ ಸಹಿ ಹಾಕಿದ ಭರಾಟೆ ಬೆಡಗಿ ಶ್ರೀಲೀಲಾ

ಇದನ್ನೂ ಓದಿ : Ranjani Raghavan : “ಸ್ವೈಪ್‌ ರೈಟ್‌” ಕಾದಂಬರಿ ಬರೆದ ಕನ್ನಡತಿ ಖ್ಯಾತಿಯ ರಂಜನಿ ರಾಘವನ್‌

ರಾಧಿಕಾ ಪಂಡಿತ್‌ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಹಿಟ್‌ ಸಿನಿಮಾಗಳನ್ನು ಮಾಡುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ. ಮದುವೆ ನಂತರ ಮಕ್ಕಳು ಸಂಸಾರ ಎಂದು ಬ್ಯುಸಿಯಾಗಿರುವ ರಾಧಿಕಾ ಪಂಡಿತ್‌ ಅವರನ್ನು ಮತ್ತೆ ತೆರೆ ಮೇಲೆ ಕಾಣಲು ಅವರ ಅಭಿಮಾನಿಗಳು ಕಾದಿದ್ದಾರೆ. ರಾಧಿಕಾ ಪಂಡಿತ್‌ ಮತ್ತೆ ಯಾವಾಗ ಯಾವ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವುದಕ್ಕೆ ಕಾದು ನೋಡಬೇಕಿದೆ.

Ayra Yash 4th Birthday: Mom Radhika Pandit Wishes Ira Special

Comments are closed.