Suratkal 4 SSLC Students Death : ಮಂಗಳೂರು : ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆ ಬರೆದು ಶಾಲೆಯಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ನಡೆದಿದೆ. ಸುರತ್ಕಲ್‌ನ ವಿದ್ಯಾದಾಯಿನಿ ಶಾಲೆಯ (vidyadayinee high school surathkal) ವಿದ್ಯಾರ್ಥಿಗಳ ಶವ ಇದೀಗ ಹಳೆಯಂಗಡಿಯ ಬಳಿಯಲ್ಲಿ ಪತ್ತೆಯಾಗಿದೆ.
ಸುರತ್ಕಲ್ ನಿವಾಸಿಗಳಾಗಿರುವ ಯಶ್ವಿತ್, ರಾಘವೇಂದ್ರ, ನಿರೂಪ್, ಅನ್ವಿತ್ ಎಂಬ ವಿದ್ಯಾರ್ಥಿಗಳೇ ಮೃತಪಟ್ಟವರು ಎಂದು ಗುರುತಿಸಲಾಗಿದೆ. ನಾಲ್ವರು ವಿದ್ಯಾರ್ಥಿಗಳು ಕೂಡ ಸುರತ್ಕಲ್‌ನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಾಗಿದ್ದರು. ಪೂರ್ವ ಸಿದ್ದತಾ ಪರೀಕ್ಷೆ ನಡೆದ ನಂತರದಲ್ಲಿ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು.

ಈ ಕುರಿತು ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೋಷಕರು ಹಾಗೂ ಪೊಲೀಸರು ಎಲ್ಲೆಡೆಯಲ್ಲಿಯೂ ಹುಡುಕಾಟ ನಡೆಸಿದ್ದರು. ಆದರೆ ರಾತ್ರಿಯ ವೇಳೆಯಲ್ಲಿ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಸಮೀಪದಲ್ಲಿನ ರೈಲ್ವೆ ಸೇತುವೆಯ ಕೆಳಭಾಗದ ನದಿಯ ಬಳಿಯಲ್ಲಿ ಮಕ್ಕಳ ಶಾಲೆಯ ಬ್ಯಾಗ್, ಯೂನಿಫಾರ್ಮ್ ಪತ್ತೆಯಾಗಿತ್ತು.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಹಣ ವರ್ಗಾವಣೆ ಹೊಸ ಸೂತ್ರ, ಹಣ ಸಿಗದೇ ಇರುವವರಿಗೂ ಇಲ್ಲಿದೆ ಗುಡ್‌ನ್ಯೂಸ್
ನಂತರ ನದಿಯಲ್ಲಿ ಹುಡುಕಾಟ ನಡೆಸಲಾಗಿದ್ದು, ನದಿಯಲ್ಲಿ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ. ನಾಲ್ವರು ವಿದ್ಯಾರ್ಥಿಗಳ ಮೃತದೇಹವನ್ನು ನದಿಯಿಂದ ಹೊರಗೆ ತೆಗೆಯಲಾಗಿದ್ದು, ಮಂಗಳೂರು ನಗರದ ವೆನ್‌ಲಾಕ್ ಆಸ್ಪತ್ತೆಯಲ್ಲಿ ಮರಣೋತ್ತರ ಕಾರ್ಯವನ್ನು ನಡೆಸಲಾಗಿದೆ.

ಸುರತ್ಕಲ್ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಶಾಲೆಯಿಂದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಪ್ರಕರಣ ಕರಾವಳಿಯಾದ್ಯಂತ ಬಾರೀ ಸಂಚಲನ ಉಂಟಾಗಿತ್ತು.
ಇದನ್ನೂ ಓದಿ : ಇದು ಹನುಮನ ಮೊದಲ ದೇವಾಲಯ – ಇಲ್ಲಿ ತೀರ್ಥ ಸೇವಿಸಿದ್ರೆ ಸರ್ಪದೋಷ ಪರಿಹಾರ
Suratkal: 4 SSLC students who were missing from school were dead body found in river near Haleyangadi