terrorist organization ISIS:ನಿಷೇಧಿತ ಐಎಸ್​ ಉಗ್ರ ಸಂಘಟನೆಯೊಂದಿಗೆ ನಂಟು ಶಂಕೆ : ಹಣ್ಣಿನ ವ್ಯಾಪಾರಿ ಬಂಧನ

ಕೊಪ್ಪಳ : terrorist organization ISIS: ನಿಷೇಧಿತ ಐಸಿಸ್​ ಉಗ್ರ ಸಂಘಟನೆಯ ಜೊತೆಯಲ್ಲಿ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊಪ್ಪಳದ ಗಂಗಾವತಿ ಮೂಲದ ಬಾಳೆ ಹಣ್ಣಿನ ವ್ಯಾಪಾರಿಯಾಗಿರುವ ಶಬ್ಬೀರ್​ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ ತಡರಾತ್ರಿ ಶಬ್ಬೀರ್​ ಎಂಬಾತನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಬ್ಬೀರ್​ ಹೋಲ್​ಸೇಲ್​ ಹಣ್ಣಿನ ವ್ಯಾಪಾರಿಯಾಗಿದ್ದು ಗಂಗಾವತಿಯ ಬನ್ನಿಗಿಡ ಕ್ಯಾಂಪ್​​ನಲ್ಲಿ ಅಂಗಡಿ ಇಟ್ಟುಕೊಂಡಿದ್ದಾನೆ,


ಬಾಳೆ ಹಣ್ಣಿನ ವ್ಯಾಪಾರವನ್ನು ಮಾಡು ಶಬ್ಬೀರ್​ ಹಣ್ಣು ವ್ಯಾಪಾರದ ನೆಪದಲ್ಲಿ ಶಿವಮೊಗ್ಗದ ಹಲವೆಡೆ ಸಂಪರ್ಕ ಹೊಂದಿದ್ದ. ಬಂಧಿತ ಶಬ್ಬೀರ್ ಮೊಬೈಲ್​ನಲ್ಲಿರುವ ಡಾಟಾವನ್ನು ಗಮನಿಸಿದ ಶಿವಮೊಗ್ಗ ಪೊಲೀಸರು ನಿನ್ನೆ ತಡರಾತ್ರಿ ಹಣ್ಣಿನ ಅಂಗಡಿಯಲ್ಲಿಯೇ ಈತನನ್ನು ಬಂಧಿಸಿದ್ದಾರೆ. ಈ ಘಟನೆ ಬಳಿಕ ಗಂಗಾವತಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.


ಓರ್ವ ಹಣ್ಣಿನ ವ್ಯಾಪಾರಿ ಐಎಸ್​ ಸಂಘಟನೆಯ ಜೊತೆಯಲ್ಲಿ ನಂಟು ಹೊಂದಿದ್ದನಾ ಎಂಬ ವಿಚಾರವನ್ನು ಕೇಳಿ ಗಂಗಾವತಿ ಜನತೆ ಬೆಚ್ಚಿ ಬಿದ್ದಿದ್ದಾರೆ . ಗಂಗಾವತಿ ನಿಷೇಧಿತ ಉಗ್ರರ ತಾಣವಾಗಿ ಬದಲಾಗುತ್ತಿದೆಯಾ ಎಂಬ ಅನುಮಾನ ಕೂಡ ಶುರುವಾಗಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಗಂಗಾವತಿಯಲ್ಲಿ ಇನ್ನೂ ಕೆಲವು ಜನ ಶಂಕಿತ ಉಗ್ರರು ಇರುವ ಅನುಮಾನ ಇದೆ ಎಂದು ಹೇಳಿದ್ದು ಗಂಗಾವತಿ ಭಾಗದ ಜನತೆಯ ಆತಂಕ ಮತ್ತಷ್ಟು ಹೆಚ್ಚಾಗಿದೆ.


ಗಂಗಾವತಿಯ ಜನತೆ ಈ ವಿಚಾರದಿಂದ ಭಯಭೀತರಾಗಿದ್ದಾರೆ. ಪೊಲೀಸರು ಹಾಗೂ ಉನ್ನತ ತನಿಖಾ ತಂಡ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಜಿಲ್ಲೆಯಲ್ಲಿ ಶಾಂತಿಯನ್ನು ಕದಡಬೇಕು ಎಂಬ ದುರುದ್ದೇಶವನ್ನು ಇಟ್ಟುಕೊಂಡ ಕೆಲವು ದುಷ್ಕರ್ಮಿಗಳು ಈ ಉಗ್ರ ಚಟುವಟಿಕೆ ನಡೆಸಲು ಮುಂದಾಗಿದ್ದರು ಎಂಬ ಅನುಮಾನವಿದೆ. ಪೊಲೀಸ್​ ಇಲಾಖೆಯು ಈ ಬಗ್ಗೆ ವಿಶೇಷ ಕಾರ್ಯಾಚರಣೆಯನ್ನು ನಡೆಸಬೇಕು. ಎನ್​ಐಎ ಸೇರಿದಂತೆ ಉನ್ನತ ತನಿಖಾ ತಂಡ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು ಎಂದು ಪರಣ್ಣ ಮನವಳ್ಳಿ ಆಗ್ರಹಿಸಿದ್ದಾರೆ.

ಇನ್ನು ಗಂಗಾವತಿಯಲ್ಲಿ ವಶಕ್ಕೆ ಪಡೆದಿರುವ ಶಬ್ಬೀರ್​ನನ್ನು ಪೊಲೀಸರು ಇಂದು ಶಿವಮೊಗ್ಗಕ್ಕೆ ಕರೆತರುವ ಸಾಧ್ಯತೆಯಿದೆ. ಈಗಾಗಲೇ ಬಂಧಿತರಾಗಿರುವ ಮಾಜ್​ ಹಾಗೂ ಯಾಸಿನ್​ ಜೊತೆಯಲ್ಲಿ ಶಬ್ಬೀರ್​ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಶಬ್ಬೀರ್​ ಉಗ್ರ ಸಂಘಟನೆಯಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಇದೀಗ ಶಿವನೊಗ್ಗ ಗ್ರಾಮಾಂತರ ಠಾಣೆಗೆ ಹೆಚ್ಚಿನ ವಿಚಾರಣೆಗೆ ಈತನನ್ನು ಕರೆತರಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ.

ಇದನ್ನು ಓದಿ : 5G service :ದೇಶದ ಏಳು ನಗರಗಳಲ್ಲಿ ಆರಂಭವಾಗಲಿದೆ 5ಜಿ ಸೇವೆ

ಇದನ್ನೂ ಓದಿ : medical students :ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಆಘಾತಕಾರಿ ಮಾಹಿತಿ

Suspected links with the banned terrorist organization ISIS: Fruit trader arrested

Comments are closed.