ತಾಲಿಬಾನ್‌ ಪರ ಪೋಸ್ಟ್‌ : ಪೊಲೀಸರಿಂದ ಯುವಕನ ಬಂಧನ

ಬಾಗಲಕೋಟೆ : ತಾಲಿಬಾನ್‌ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಯಲ್ಲಿ ನಡೆದಿದೆ.

ಜಮಖಂಡಿಯ ನಿವಾಸಿಯಾಗಿರುವ ಆಸೀಫ್‌ ಗಲಗಲಿ ಎಂಬಾತನೇ ಬಂಧಿತ ಆರೋಪಿ. ಆಸೀಫ್‌ ಸಾಮಾಜಿಕ ಜಾಲತಾಣದಲ್ಲಿ ಐ ಲವ್‌ ತಾಲಿಬಾನ್‌ ಎಂದು ಪೋಸ್ಟ್‌ ಮಾಡಿದ್ದ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರು ಯುವಕನ ವಿರುದ್ದ ಪ್ರಕರಣ ದಾಖಲು ಮಾಡುವಂತೆ ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ ಜಮಖಂಡಿ ಠಾಣೆಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆಸೀಫ್‌ ಗಲಗಲಿ ವಿರುದ್ದ ಪ್ರಕರಣ ದಾಖಲಾಗಿದ್ದು, ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಪಕ್ಕದ ಮನೆಯ ಮುಂದೆ ಮೂತ್ರ ಮಾಡಿದ ಮಗು : ಮಗುವಿನ ತಾಯಿಯನ್ನು ಚಾಕುವಿನಿಂದ ಕೊಂದ ಬಾಲಕ

ಇದನ್ನೂ ಓದಿ : ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ : ಖಾಸಗಿಯಾಗಿ ಟ್ಯೂಷನ್‌ ತೆಗೆದುಕೊಳ್ಳೋ ಮುನ್ನ ಹುಷಾರ್‌

Comments are closed.