ಶ್ರೇಯಸ್‌ ಅಯ್ಯರ್ vs ರಿಷಬ್‌ ಪಂತ್‌ ; ಇಬ್ಬರಲ್ಲಿ ಯಾರು ಡೆಲ್ಲಿ ನಾಯಕ

ದುಬೈ : ಐಪಿಎಲ್‌ 14ನೇ ಆವೃತ್ತಿ ಎರಡನೇ ಸೀಸನ್‌ಗೆ ಭರ್ಜರಿ ಸಿದ್ದತೆ ಜೋರಾಗಿದೆ. ಪ್ರಾಂಚೈಸಿಗಳು ಈಗಾಗಲೇ ತರಬೇತಿಯನ್ನೂ ಆರಂಭಿಸಿವೆ. ಆದರೆ ಟೀಂ ಇಂಡಿಯಾ ಯುವ ಆಟಗಾರ ಶ್ರೇಯಸ್‌ ಅಯ್ಯರ್‌ ಫಿಟ್‌ ಆಗಿದ್ದಾರೆ. ಆದ್ರಿದು ಗುಡ್‌ನ್ಯೂಸ್‌ ಆದ್ರೂ, ಟೀಮ್‌ ಮ್ಯಾನೇಜ್ಮೆಂಟ್‌ಗೆ ತಲೆನೋವು ತರಿಸಿದೆ.

ಭುಜದ ನೋವಿನಿಂದ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಶ್ರೇಯಸ್‌ ಅಯ್ಯರ್‌ ನಂತರದಲ್ಲಿ ಐಪಿಎಲ್‌ ಸೀಸನ್‌ನಿಂದಲೇ ದೂರ ಉಳಿದಿದ್ದರು. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅಯ್ಯರ್‌ ಇದೀಗ ಫಿಟ್‌ ಅನ್ನೋ ಕುರಿತು ಎನ್‌ಸಿಎ ರಿಪೋರ್ಟ್‌ ಕೊಟ್ಟಿದೆ. ಇದು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಆನೆಬಲ ಬಂದಂತಾಗಿದೆ.

ಶ್ರೇಯಸ್‌ ಅಯ್ಯರ್‌ ಈಗಾಗಲೇ ದುಬೈನಲ್ಲಿ ತಂಡವನ್ನೂ ಕೂಡಿಕೊಂಡಿದ್ದಾರೆ. ಕಠಿಣ ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೇಯಸ್‌ ಅಯ್ಯರ್‌ ಚೇತರಿಕೆ ಕಂಡಿರೋದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮ್ಯಾನೇಜ್ಮೆಂಟ್‌ ತಲೆನೋವಿಗೆ ಕಾರಣವಾಗಿದೆ.

ಶ್ರೇಯಸ್‌ ಅಯ್ಯರ್‌ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪರ್‌ ವೃಷಬ್‌ ಪಂತ್‌ ಐಪಿಎಲ್‌ 14ನೇ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ನಾಯಕನಾಗಿ ಪಂತ್‌ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಪ್ರಸಕ್ತ ಋತುವಿನಲ್ಲಿ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇದರ ಹಿಂದೆ ಪಂತ್‌ ಶ್ರಮ ಸಾಕಷ್ಟಿದೆ.

ಆದರೆ ಶ್ರೇಯಸ್‌ ಅಯ್ಯರ್‌ ನಾಯಕನಾಗಿ ಕಳೆದ ಸಾಲಿನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ. ತಂಡವನ್ನು ಐಪಿಎಲ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಫೈನಲ್‌ ತಲುಪುವಂತೆ ಮಾಡಿದ್ದಾರೆ. ಆದರೆ ಪಂತ್‌ ಈ ಬಾರಿ ನಾಯಕನಾಗಿ ಗೆಲುವು ಕಂಡಿದ್ದಾರೆ. ಇಬ್ಬರೂ ಕೂಡ ಯುವ ಆಟಗಾರರಾಗಿದ್ದು, ನಾಯಕತ್ವ ಗುಣ ಹೊಂದಿದ್ದಾರೆ. ಹೀಗಾಗಿ ಯಾರನ್ನು ಡೆಲ್ಲಿ ನಾಯಕನಾಗಿ ಮುಂದುವರಿಸಬೇಕು ಅನ್ನೋದು ಮ್ಯಾನೇಜ್ಮೆಂಟ್‌ಗೆ ತಲೆನೋವು ತರಿಸಿದೆ.

ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಶ್ರೇಯಸ್‌ ಅಯ್ಯರ್‌ ನಾಯಕನಾಗಿ ಮುಂದುವರಿಯುವುದು ಖಚಿತವಾಗಿದೆ. ಅಲ್ಲದೇ ಬ್ಯಾಟಿಂಗ್‌ ಮಾತ್ರವಲ್ಲದೇ ನಾಯಕನಾಗಿ ಗೆಲುವು ಕಂಡಿರುವ ಪಂತ್‌ಗೆ ಉಪನಾಯಕನ ಪಟ್ಟ ಕಟ್ಟಲು ಡೆಲ್ಲಿ ಕ್ಯಾಪಿಟಲ್ಸ್‌ ಮ್ಯಾನೇಜ್ಮೆಂಟ್ ಮುಂದಾಗಿದೆ. ಐಪಿಎಲ್‌ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಟ್ರೋಫಿ ಗೆಲ್ಲುವ ಫೇವರೇಟ್‌ ತಂಡವಾಗಿ ಹೊರಹೊಮ್ಮಿದೆ.‌

ಇದನ್ನೂ ಓದಿ :  ಐಪಿಎಲ್‌ ಯುಎಇ ವೇಳಾಪಟ್ಟಿ ಪ್ರಕಟ : ನಿಮ್ಮ ನೆಚ್ಚಿನ ತಂಡದ ಪಂದ್ಯ ಯಾವಾಗ ಗೊತ್ತಾ ..?

ಇದನ್ನೂ ಓದಿ : ಚಿಯರ್ ಗರ್ಲ್ಸ್ ಗಳನ್ನು ಮಾಂಸದ ತುಂಡಿನಂತೆ ಬಳಸುತ್ತಾರೆ…! ಹೊರಬಿತ್ತು ಐಪಿಎಲ್ ಪಾರ್ಟಿಗಳ ಕರಾಳ ಸತ್ಯ…!!

Comments are closed.