Terrible Road Accident : ತಿರುಪತಿಯಲ್ಲಿ ಭೀಕರ ರಸ್ತೆ ಅಪಘಾತ : 5 ಮಂದಿ ಸಾವು, 8 ಮಂದಿ ಗಂಭೀರ

ತಿರುಪತಿ : (Terrible Road Accident) ದೇಶದ ಪವಿತ್ರ ಸ್ಥಳಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪನ ಸನ್ನಿಧಾನ ಇರುವ ಜಿಲ್ಲೆಯಲ್ಲಿ ಸರಣಿ ಅಪಘಾತ ನಡೆದಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 8 ಜನರಿಗೆ ಗಂಭೀರ ಗಾಯಗೊಂಡಿದ್ದಾರೆ. ಎದುರುಗಡೆಯಿಂದ ಬಂದ ಟೆಂಪೋ ಟ್ರಾವೆಲರ್‌ಗೆ ಹೆರಿಟೇಜ್‌ ಹಾಲಿನ ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರ್ಘಟನೆ ನಡೆದಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸ್‌ರು ಅಪಘಾತಕ್ಕೆ ಅತಿಯಾದ ವೇಗವೇ ಕಾರಣ ಎಂದು ಹೇಳಿದ್ದಾರೆ.

ಪೊಲೀಸ್‌ ಅಧಿಕಾರಿಗಳ ಪ್ರಕಾರ, ತಿರುಪತಿಯ ಎಸ್‌ಆರ್‌ ಇಂಡಿಯಾ ಪ್ರೈಮ್‌ ಪ್ರಾಪರ್ಟೀಸ್‌ನ ರಿಯಲ್‌ ಎಸ್ಟೇಟ್‌ ಮ್ಯಾನೇಜರ್‌ಗಳಾದ ಸುಬ್ರಹ್ಮಣ್ಯಂ ಮತ್ತು ರಾಜಶೇಖರ್‌ ರೆಡ್ಡಿ ಅವರು ವಡಮಲಪೇಟೆ ಮಂಡಲದ ಎಸ್‌ವಿ ಪುರಂನಲ್ಲಿರುವ ಅಂಜೇರಮ್ಮ ಅವರಿಗೆ ಹಣ ಪಾವತಿಸಲು ಭಾನುವಾರ ತೆರಳಿದ್ದರು. ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 12 ನೌಕರರು ಟೆಂಪೋ ಟ್ರಾವೆಲರ್‌ನಲ್ಲಿ ಹೊರಟಿದ್ದರು. ಟೆಂಪೋ ಟೋಲ್‌ ಪ್ಲಾಜಾ ಆಚೆ ಅಂಜೇರಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಹೆರಿಟೇಜ್‌ ಹಾಲಿನ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಈ ವೇಳೆ ಟೆಂಪೋದಲ್ಲಿದ್ದ 12 ಮಂದಿ ಹಾಗೂ ಹಾಲಿನ ಟ್ಯಾಂಕರ್‌ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ : Jammu & Kashimr Firing Incidents : ಗುಂಡಿನ ಚಕಮಕಿ 3 ಯುವಕರಿಗೆ ಗಾಯ

ಇನ್ನು ಘಟನೆ ಟೋಲ್‌ ಪ್ಲಾಜಾದಲ್ಲಿ ಇರುವುದರಿಂದ ಅಲ್ಲಿನ ಆಂಬ್ಯುಲೆನ್ಸ್‌ನಲ್ಲಿಯೇ ಗಾಯಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ. ಉಳಿದವರನ್ನು ಉತ್ತಮ ಚಿಕಿತ್ಸೆಗಾಗಿ ತಿರುಪತಿಯ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇನ್ನು ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Terrible Road Accident in Tirupati: 5 killed, 8 seriously

Comments are closed.