Rahul Dravid : ದ್ರಾವಿಡ್ ಗರಡಿಯಲ್ಲಿ 2 ಐಸಿಸಿ ಟ್ರೋಫಿ ಸೋತ ಟೀಮ್ ಇಂಡಿಯಾ, ವಂಡೇ ವರ್ಲ್ಡ್ ಕಪ್ ಲಾಸ್ಟ್ ಚಾನ್ಸ್

ಬೆಂಗಳೂರು : ಭಾರತ ತಂಡ ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿದ್ದು, ರಾಹುಲ್ ದ್ರಾವಿಡ್ (Rahul Dravid) ಗರಡಿಯಲ್ಲೂ ಎರಡು ಐಸಿಸಿ ಟ್ರೋಫಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ.

ರವಿಶಾಸ್ತ್ರಿ ಕೋಚ್ ಆಗಿದ್ದಾಗ ಐಸಿಸಿ ಟ್ರೋಫಿ ಟೂರ್ನಿಗಳಲ್ಲಿ ಭಾರತ ವೈಫಲ್ಯ ಕಂಡ ಬೆನ್ನಲ್ಲೇ 2021ರಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಭಾರತ ತಂಡದ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಆದರೆ ದ್ರಾವಿಡ್ ಗರಡಿಯಲ್ಲಿ ಆಡಿದ 2 ಐಸಿಸಿ ಟ್ರೋಫಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್’ನಲ್ಲಿ ಸೋಲು ಕಂಡಿದ್ದ ಟೀಮ್ ಇಂಡಿಯಾ, ಭಾನುವಾರ ಲಂಡನ್’ನ ಓವಲ್ ಮೈದಾನದಲ್ಲಿ ಅಂತ್ಯಗೊಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test Championship final – WTC final 2023) ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ.

ಇದನ್ನೂ ಓದಿ : WTC final 2023 : ಭಾರತಕ್ಕೆ ಐಸಿಸಿ ಟ್ರೋಫಿ ಮತ್ತೆ ಮರೀಚಿಕೆ, WTC ಫೈನಲ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಸೋಲು

ಈ ಮಧ್ಯೆ 2022ರ ಏಷ್ಯಾ ಕಪ್ ಟಿ20 ಟೂರ್ನಿಯಲ್ಲೂ ವೈಫಲ್ಯ ಎದುರಿಸಿದ್ದ ಟೀಮ್ ಇಂಡಿಯಾ ಸೂಪರ್ 4 ಹಂತದಲ್ಲೇ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿತ್ತು. ದ್ರಾವಿಡ್ ಕೋಚಿಂಗ್’ನಲ್ಲೂ ಐಸಿಸಿ ಟೂರ್ನಿಗಳಲ್ಲಿ ಭಾರತದ ವೈಫಲ್ಯ ಮುಂದುವರಿದಿದ್ದು, ಭಾರತದಲ್ಲೇ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ರಾಹುಲ್ ದ್ರಾವಿಡ್ ಅವರಿಗೆ ಕೊನೆಯ ಅವಕಾಶವಾಗುವ ಸಾಧ್ಯತೆಯಿದೆ. ಅಲ್ಲೂ ಭಾರತ ಸೋತರೆ ದ್ರಾವಿಡ್ ಕೋಚ್ ಹುದ್ದೆ ಕಳೆದುಕೊಳ್ಳಲಿದ್ದಾರೆ ಎನ್ನಲಾಗ್ತಿದೆ. 2021ರ ನವೆಂಬರ್’ನಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ 2 ವರ್ಷಗಳ ಅವಧಿಗೆ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದರು.

ದ್ರಾವಿಡ್ ಕೋಚಿಂಗ್’ನಲ್ಲಿ ಭಾರತ ಕ್ರಿಕೆಟ್ ತಂಡದ ಸಾಧನೆ

  1. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 1-0 ಗೆಲುವು
    ನಾಯಕ: ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ
  2. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 3-0 ಗೆಲುವು
    ನಾಯಕ: ರೋಹಿತ್ ಶರ್ಮಾ
  3. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ (ದ.ಆಫ್ರಿಕಾ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 1-2 ಸೋಲು
    ನಾಯಕ: ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್
  4. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ (ದ.ಆಫ್ರಿಕಾ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 0-3 ಸೋಲು
    ನಾಯಕ: ಕೆ.ಎಲ್ ರಾಹುಲ್
  5. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 3-0 ಗೆಲುವು
    ನಾಯಕ: ರೋಹಿತ್ ಶರ್ಮಾ
  6. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 3-0 ಗೆಲುವು
    ನಾಯಕ: ರೋಹಿತ್ ಶರ್ಮಾ
  7. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 2-0 ಗೆಲುವು
    ನಾಯಕ: ರೋಹಿತ್ ಶರ್ಮಾ
  8. ಶ್ರೀಲಂಕಾ ವಿರುದ್ಧದ ಟಿ20 ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 3-0 ಗೆಲುವು
    ನಾಯಕ: ರೋಹಿತ್ ಶರ್ಮಾ
  9. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಸರಣಿ 2-2ರಲ್ಲಿ ಡ್ರಾ
    ನಾಯಕ: ರಿಷಭ್ ಪಂತ್
  10. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ (ಇಂಗ್ಲೆಂಡ್ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 0-1 ಸೋಲು
    ನಾಯಕ: ಜಸ್ಪ್ರೀತ್ ಬುಮ್ರಾ
  11. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ (ಇಂಗ್ಲೆಂಡ್ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 2-1 ಗೆಲುವು
    ನಾಯಕ: ರೋಹಿತ್ ಶರ್ಮಾ
  12. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ (ಇಂಗ್ಲೆಂಡ್ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 2-1 ಗೆಲುವು
    ನಾಯಕ: ರೋಹಿತ್ ಶರ್ಮಾ
  13. ವೆಸ್ಟ್ ವಿರುದ್ಧದ ಟಿ20 ಸರಣಿ (ವಿಂಡೀಸ್ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 4-1 ಗೆಲುವು
    ನಾಯಕ: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ
  14. ಏಷ್ಯಾ ಕಪ್ ಟಿ20 ಸರಣಿ (ಯುಎಇ ಆತಿಥ್ಯ):
    ಫಲಿತಾಂಶ: ಸೂಪರ್-4 ಹಂತದಲ್ಲಿ ಸೋಲು
    ನಾಯಕ: ರೋಹಿತ್ ಶರ್ಮಾ
  15. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 2-1 ಗೆಲುವು
    ನಾಯಕ: ರೋಹಿತ್ ಶರ್ಮಾ
  16. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 2-1 ಗೆಲುವು
    ನಾಯಕ: ರೋಹಿತ್ ಶರ್ಮಾ
  17. ಐಸಿಸಿ ಟಿ20 ವಿಶ್ವಕಪ್ (ಆಸ್ಟ್ರೇಲಿಯಾ ಆತಿಥ್ಯ):
    ಫಲಿತಾಂಶ: ಸೆಮಫೈನಲ್’ನಲ್ಲಿ ಸೋಲು
    ನಾಯಕ: ರೋಹಿತ್ ಶರ್ಮಾ
  18. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ (ಬಾಂಗ್ಲಾ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 2-0 ಗೆಲುವು
    ನಾಯಕ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್
  19. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ (ಬಾಂಗ್ಲಾ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 1-2 ಸೋಲು
    ನಾಯಕ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್
  20. ಶ್ರೀಲಂಕಾ ವಿರುದ್ಧದ ಏಕದಿನ ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 3-0 ಗೆಲುವು
    ನಾಯಕ: ರೋಹಿತ್ ಶರ್ಮಾ
  21. ಶ್ರೀಲಂಕಾ ವಿರುದ್ಧದ ಟಿ20 ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 2-1 ಗೆಲುವು
    ನಾಯಕ: ಹಾರ್ದಿಕ್ ಪಾಂಡ್ಯ
  22. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 3-0 ಗೆಲುವು
    ನಾಯಕ: ರೋಹಿತ್ ಶರ್ಮಾ
  23. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 2-1 ಗೆಲುವು
    ನಾಯಕ: ಹಾರ್ದಿಕ್ ಪಾಂಡ್ಯ
  24. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 2-1 ಗೆಲುವು
    ನಾಯಕ: ರೋಹಿತ್ ಶರ್ಮಾ
  25. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ (ಭಾರತದ ಆತಿಥ್ಯ):
    ಫಲಿತಾಂಶ: ಭಾರತಕ್ಕೆ 2-1 ಗೆಲುವು
    ನಾಯಕ: ರೋಹಿತ್ ಶರ್ಮಾ
  26. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ಇಂಗ್ಲೆಂಡ್ ಆತಿಥ್ಯ):
    ಫಲಿತಾಂಶ: ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ 209 ರನ್’ಗಳ ಸೋಲು
    ನಾಯಕ: ರೋಹಿತ್ ಶರ್ಮಾ

Rahul Dravid: Team India lost 2 ICC trophies under Dravid, lost chance in ODI World Cup

Comments are closed.