teenagers in Delhi kill a 24-year-old : ಪಾರ್ಕ್ನಲ್ಲಿ ಚಿನ್ನಿ ದಾಂಡು ಆಟವಾಡಲು ಬಿಡುವುದಿಲ್ಲ ಎಂದು ಕೋಪಗೊಂಡಿದ್ದ ಮೂವರು ಹದಿಹರೆಯದ ಮಕ್ಕಳು 24 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದ ಶಾಕಿಂಗ್ ಘಟನೆಯು ದೆಹಲಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶಿಬು ಹುಸೇನ್ ಎಂದು ಗುರುತಿಸಲಾಗಿದೆ. ಟಿವಿಗಳಲ್ಲಿ ಬರುವ ಕ್ರೈಂ ಶೋಗಳನ್ನು ವೀಕ್ಷಿಸುತ್ತಿದ್ದ ಮಕ್ಕಳು ಅದರಿಂದ ಸ್ಫೂರ್ತಿ ಪಡೆದು ಈ ಕೃತ್ಯ ಎಸಗಿದ್ದಾರೆ ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿದೆ. ಅಲ್ಲದೇ ಕೊಲೆಯಾದ ವ್ಯಕ್ತಿಗೆ ಥಳಿಸುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿಕೊಂಡಿದ್ದ ಬಾಲಕರು ಇದನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಬೇಕೆಂದುಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಪುಷ್ಪಾ ಸಿನಿಮಾವನ್ನು ವೀಕ್ಷಿಸಿದ್ದ ಆರೋಪಿಗಳು ಸಿನಿಮಾದಲ್ಲಿ ಹೀರೋನ ನಟನೆ ಹಾಗೂ ಮ್ಯಾನರಿಸಂನ್ನು ಕಾಪಿ ಮಾಡುತ್ತಿದ್ದರು ಎನ್ನಲಾಗಿದೆ.
ಕೊಲೆ ಮಾಡಿದ ಮೂವರು ಹುಡುಗರು 15,16 ಹಾಗೂ 17 ವರ್ಷ ಪ್ರಾಯದವರು ಎಂದು ತಿಳಿದುಬಂದಿದೆ. ವಿಚಾರಣೆಯ ವೇಳೆ ಈ ಬಾಲಕರು ತಾವು ಪುಷ್ಪಾ ಸಿನಿಮಾ ಹಾಗೂ ಭೌಕಾಲ್ ಎಂಬ ಕ್ರೈಂ ಸಿರೀಸ್ಗಳನ್ನು ಕೆಲ ದಿನಗಳ ಹಿಂದಷ್ಟೇ ವೀಕ್ಷಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಹುಡುಗರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಲವಾರು ದರೋಡೆಕೋರರನ್ನು ಅನುಸರಿಸುತ್ತಿದ್ದರು ಮತ್ತು ಇದೇ ರೀತಿಯ ಜೀವನವನ್ನು ಹೊಂದಲು ಹಾತೊರೆಯುತ್ತಿದ್ದರು ಮತ್ತು ಜೈಲು ಶಿಕ್ಷೆಗೆ ಹೆದರುತ್ತಿರಲಿಲ್ಲ ಎನ್ನಲಾಗಿದೆ. 3-6 ತಿಂಗಳಲ್ಲಿ ಬಿಡುಗಡೆಯಾಗುತ್ತಾರೆ ಮತ್ತು ಮನೆಗೆ ಹಿಂತಿರುಗಬಹುದು ಎಂದು ಅವರು ನಂಬಿದ್ದರು ಎನ್ನಲಾಗಿದೆ.
ಪೊಲೀಸರು ಈ ಹುಡುಗರನ್ನು ಬಂಧಿಸುವವರೆಗೂ ಇವರ ನಡವಳಿಕೆ ಹಾಗೂ ಅಪರಾಧಗಳ ಬಗ್ಗೆ ಪೋಷಕರಿಗೆ ಕಿಂಚಿತ್ತೂ ಮಾಹಿತಿ ಇರಲಿಲ್ಲ. ಇದರಲ್ಲಿ 15 ವರ್ಷದ ಬಾಲಕನ ತಂದೆ ಕೆಲವು ವರ್ಷಗಳ ಹಿಂದೆ ಮೃತರಾಗಿದ್ದು ಈತ ತಾಯಿಯೊಂದಿಗೆ ವಾಸವಿದ್ದ ಎನ್ನಲಾಗಿದೆ. ತಾಯಿಗೆ ತನ್ನ ಮಗ ಸೋಶಿಯಲ್ ಮೀಡಿಯಾ ಖಾತೆಗಳನ್ನು ಬಳಕೆ ಮಾಡುತ್ತಾನೆ ಎಂಬುದರ ಅರಿವೂ ಇರಲಿಲ್ಲ. ಇತ್ತ 16 ವರ್ಷದ ಬಾಲಕನ ತಂದೆ ಕೂಡ ಪುತ್ರನ ಕೃತ್ಯದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
Three teenagers in Delhi kill a 24-year-old allegedly ‘copying’ crime dramas
ಇದನ್ನು ಓದಿ : Swami Vivekananda Jayanti controversy : ಬಾರಕೂರಲ್ಲಿ ವಿವೇಕಾನಂದ ಜಯಂತಿ ಆಚರಣೆಗೆ ಉಪನ್ಯಾಸಕಿ ವಿರೋಧ : ಪೊಲೀಸರಿಗೆ ದೂರು
ಇದನ್ನೂ ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?