Tractor Jack broken: ಟ್ರ್ಯಾಕ್ಟರ್‌ ಟೈರ್‌ ಬದಲಿಸುವ ವೇಳೆ ದುರಂತ: ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: (Tractor Jack broken) ಟ್ರ್ಯಾಕ್ಟರ್‌ ಟೈಲ್‌ ಬದಲಿಸುವ ಸಂದರ್ಭದಲ್ಲಿ ಜಾಕ್‌ ಮುರಿದ ಪರಿಣಾಮ ಟ್ರ್ಯಾಕ್ಟರ್‌ ನ ಟ್ರಾಲಿ ಕೆಳಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಸುಬ್ರಹ್ಮಣ್ಯ( 30 ವರ್ಷ) ಹಾಗೂ ಸುನೀಲ್‌ (27 ವರ್ಷ) ಎಂದು ಗುರುತಿಸಲಾಗಿದೆ.

ಕೊಪ್ಪ ತಾಲೂಕಿನ ನನಿಲುವಾಗಿಲು ಗ್ರಾಮದಲ್ಲಿ ಟ್ರ್ಯಾಕ್ಟರ್ ಟೈಯರ್‌ ಹಾಳಾಗಿದ್ದು, ಟೈಯರ್‌ ಚೇಂಜ್‌ ಮಾಡುವಾಗ ಜಾಕ್‌ ಮುರಿದಿದೆ. ಪರಿಣಾಮ ಟ್ರ್ಯಾಕ್ಟರ್‌ ನ ಕೆಳಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೀಗ ಘಟನೆ ಸಂಬಂದ ಹರಿಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಕಾರು ಬಸ್‌ಗೆ ಢಿಕ್ಕಿ: 4 ಮಂದಿ ಸಾವು

ಪಾಲ್ಘರ್: ಜಿಲ್ಲೆಯ ದಹನು ಪ್ರದೇಶದ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ಕಾರೊಂದು ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಕಾರು ಗುಜರಾತ್‌ನಿಂದ ಮುಂಬೈಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರು ಚಾಲಕನು ವಾಹನದ ನಿಯಂತ್ರಣ ಕಳೆದುಕೊಂಡು ಬಸ್‌ಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಪಾಲ್ಘರ್ ಪೊಲೀಸರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ : 130 students are sick: ರಾಮಕೃಷ್ಣಾಪುರದ ಗುರುಕುಲ ಶಾಲೆಯಲ್ಲಿ ವಿಷ ಆಹಾರ ಸೇವಿಸಿ 130 ವಿದ್ಯಾರ್ಥಿಗಳು ಅಸ್ವಸ್ಥ

ಗುಜರಾತ್‌ ನಿಂದ ಮುಂಬೈಗೆ ಕಾರು ತೆರಳುತ್ತಿದ್ದ ವೇಳೆ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಕಾರು ಚಾಲಕ ವಾಹನದ ನಿಯಂತ್ರಣ ತಪ್ಪಿ ಬಸ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇದೀಗ ಘಟನೆಯ ಕುರಿತು ದಹನು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ : Road accident-men death: ರಸ್ತೆ ಅಪಘಾತದಲ್ಲಿ ಯುವಕ ಸಾವು: ಗೋರಕ್ಷಕರ ವಿರುದ್ದ ಕುಟುಂಬದವರ ಆರೋಪ

ಇದನ್ನೂ ಓದಿ : Geyser gas leak : ಗೀಸರ್ ಗ್ಯಾಸ್ ಸೋರಿಕೆ : ನವವಿವಾಹಿತೆ ಸಾವು

Tractor Jack broken: Tragedy while changing tractor tire: Two died on the spot

Comments are closed.