KGF to Kantara : ಸ್ಯಾಂಡಲ್‌ವುಡ್‌ 100 ಕೋಟಿ ಕ್ಲಬ್ ಸೇರಿ ಇತಿಹಾಸ ಸೃಷ್ಟಿದ 7 ಸಿನಿಮಾಗಳು ಯಾವುವು ಗೊತ್ತಾ ?

ಎಪ್ಪತ್ತು, ಎಂಬತ್ತು, ತೊಂಬತ್ತರ ದಶಕಗಳಲ್ಲಿ ದೊಡ್ಡ ಹೆಸರನ್ನು ಹೊಂದಿದ್ದ ಸ್ಯಾಂಡಲ್‌ವುಡ್‌ನ ಬಗ್ಗೆ ಬೇರೆ ಭಾಷೆಯ ಸಿನಿ ಮಂದಿ (KGF to Kantara) ಮಾತನಾಡಿಕೊಳ್ಳುತ್ತಿದ್ದರು. ಆಗ ಕನ್ನಡ ಸಿನಿಮಾಗಳು ಪರ ರಾಜ್ಯಗಳಲ್ಲಿಯೂ ತಮ್ಮ ಕಂಟೆಂಟ್‌ಗಳಿಂದ ಸದ್ದು ಮಾಡುತ್ತಿದ್ದವು. ಆದರೆ ನಂತರದ ವರ್ಷಗಳಲ್ಲಿ ಕನ್ನಡ ಸಿನಿರಂಗ ಮಂಕಾಗಿದ್ದು ಸುಳ್ಳಲ್ಲ. ಹಾಗೊಂದು ಹೀಗೊಂದು ಸಿನಿಮಾಗಳು ಸದ್ದು ಮಾಡಿದ್ದು ಬಿಟ್ಟರೆ ಇಡೀ ಭಾರತ ಸಿನಿರಂಗ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತಹ ಸಿನಿಮಾಗಳು ಬಂದ ಉದಾಹರಣೆಗಳು ಇರಲಿಲ್ಲ. ಹಲವು ಸಿನಿಮಾಗಳು ರಾಜ್ಯದಲ್ಲಿ ಭರ್ಜರಿ ಸದ್ದು ಮಾಡಿ ಪರಭಾಷೆಗಳಿಗೆ ರಿಮೇಕ್ ಆದರೂ ಸಹ ದೇಶವ್ಯಾಪಿ ಹೆಸರು ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ರಾಜ್ಯದ ಬೇಲಿಯನ್ನು ದಾಟಿ ಪರರಾಜ್ಯಗಳಲ್ಲಿಯೂ ಸದ್ದು ಮಾಡ್ತಿವೆ. ಅದರಲ್ಲಿಯೂ ಪ್ಯಾನ್ ಇಂಡಿಯಾ ಟ್ರೆಂಡ್ ಹುಟ್ಟಿಕೊಂಡ ನಂತರ ಕನ್ನಡ ಸಿನಿಮಾಗಳು ಅನ್ಯ ಭಾಷೆಗಳಿಗೆ ಡಬ್ ಆಗಿ ಅಲ್ಲಿಯೂ ಯಶಸ್ಸನ್ನು ಪಡೆದುಕೊಂಡಿದೆ. ಇದೀಗ ಈ ಕೀರ್ತಿ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಪ್ರಶಾಂತ್‌ ನೀಲ್‌ಗೆ ಸಲ್ಲುತ್ತದೆ.

ಏಕೆಂದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡಲಿವೆ ಎಂದು ತೋರಿಸಿಕೊಟ್ಟಿದ್ದು ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 1 ಸಿನಿಮಾ. ಇನ್ನು ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳೂ ಸಹ ಸದ್ದು ಮಾಡಲಿವೆ ಎನ್ನುವುದನ್ನು ಮಾತ್ರವಲ್ಲದೇ ಕನ್ನಡ ಸಿನಿಮಾವೊಂದು ನೂರು ಕೋಟಿ ಕ್ಲಬ್ ಸೇರುವ ಸಾಮರ್ಥ್ಯ ಹೊಂದಿದೆ ಎಂಬುದನ್ನೂ ಸಹ ಸಾಬೀತುಪಡಿಸಿತು. ಈ ಸಿನಿಮಾ ಯಶಸ್ವಿಯಾಗಿ ನೂರು ಕೋಟಿ ಕ್ಲಬ್ ಸೇರಿದ ಬಳಿಕ ಕನ್ನಡ ಆರು ಸಿನಿಮಾಗಳು ನೂರು ಕೋಟಿ ಕ್ಲಬ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಹಾಗಿದ್ದರೆ, ಇಲ್ಲಿಯವರೆಗೂ ಕನ್ನಡ ಸಿನಿಮಾರಂಗದಲ್ಲಿ ನೂರು ಕೋಟಿ ಕ್ಲಬ್ ಸೇರಿರುವ ಏಳು ಸಿನಿಮಾಗಳು ಯಾವುವು ಗೊತ್ತಾ ?

ನೂರು ಕೋಟಿ ಕ್ಲಬ್ ಸೇರಿವೆ ಈ ಏಳು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನೂರಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ಗಳಿಸಿ ಯಶಸ್ವಿಯಾಗಿ ನೂರು ಕೋಟಿ ಕ್ಲಬ್ ಸೇರಿರುವ ಕನ್ನಡದ ಏಳು ಸಿನಿಮಾಗಳು ಇಲ್ಲಿವೆ.

  1. ಕೆಜಿಎಫ್ ಚಾಪ್ಟರ್ 1 – 250 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್
  2. ರಾಬರ್ಟ್ – 102 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್
  3. ಜೇಮ್ಸ್ – 151 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್
  4. ಕೆಜಿಎಫ್ ಚಾಪ್ಟರ್ 2 – 1250 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್
  5. 777 ಚಾರ್ಲಿ – 105 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್
  6. ವಿಕ್ರಾಂತ್ ರೋಣ – 185 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್
  7. ಕಾಂತಾರ – 404 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್

ಇನ್ನು ಇನ್ನೂರು ಕೋಟಿ ಕ್ಲಬ್ ವಿಷಯಕ್ಕೆ ಬಂದರೆ ಕನ್ನಡದಲ್ಲಿ ಯಶಸ್ವಿಯಾಗಿ ಈ ಕ್ಲಬ್ ಸೇರಿರುವುದು ಕೇವಲ ಮೂರು ಸಿನಿಮಾಗಳು ಮಾತ್ರವೇ. ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಹಾಗೂ 2 ಮತ್ತು ಕಾಂತಾರ ಸಿನಿಮಾಗಳು ಮಾತ್ರ ಇನ್ನೂರು ಕೋಟಿ ಕ್ಲಬ್ ಸೇರಿವೆ. ಮುನ್ನೂರು ಹಾಗೂ ನಾಲ್ಕು ನೂರು ಕೋಟಿ ಕ್ಲಬ್‌ನ್ನು ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳು ಹಂಚಿಕೊಂಡಿವೆ. ಇನ್ನುಳಿದಂತೆ ಕನ್ನಡದ ಪೈಕಿ 500ರಿಂದ 1200 ಕೋಟಿವರೆಗಿನ ಎಲ್ಲಾ ಕ್ಲಬ್‌ಗಳನ್ನು ಸೇರಿದ ಕನ್ನಡದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಚಾಪ್ಟರ್ 2 ಪಾತ್ರವಾಗಿದೆ.

ಇದನ್ನೂ ಓದಿ : Malaika Arora : 50 ರ ಹರೆಯದಲ್ಲೂ 18 ರ ತಾರುಣ್ಯ : ಮತ್ತೇರಿಸುವ ಮಲೈಕಾ ಅರೋರಾ ಯೋಗಾಭ್ಯಾಸದ ವಿಡಿಯೋ ವೈರಲ್

ಇದನ್ನೂ ಓದಿ : ಡಾ. ವಿಷ್ಣುವರ್ಧನ್‌ ಸ್ಮಾರಕ : ವಿವಾದತ್ಮಾಕ ಹೇಳಿಕೆ ನೀಡಿದ ನಟ ಚೇತನ್‌

ಇದನ್ನೂ ಓದಿ : Weekend with Ramesh Season 5: ವೀಕೆಂಡ್ ವಿತ್ ರಮೇಶ್ ಶೀಘ್ರದಲ್ಲೇ ಪ್ರಾರಂಭ : ಮೊದಲ ಅತಿಥಿ ಯಾರು ಗೊತ್ತಾ ?

ಇನ್ನು ಕಳೆದ ವರ್ಷ ಬಿಡುಗಡೆಗೊಂಡ ಒಟ್ಟು ಐದು ಕನ್ನಡ ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರಿದ್ದು, ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರುವ ನಿರೀಕ್ಷೆಯನ್ನು ಹೆಚ್ಚಿಸಿವೆ. ಅದರಲ್ಲಿಯೂ ದೊಡ್ಡ ಬಜೆಟ್‌ನ ಹಾಗೂ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳು ಹೆಚ್ಚಿದ್ದು, ಅಂತಹ ಕನ್ನಡ ಸಿನಿಮಾಗಳು ನೂರು ಕೋಟಿ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

KGF to Kantara: Do you know the 7 movies that made history by joining the Sandalwood 100 crore club?

Comments are closed.