Triple riding murder: ಪ್ರಿಯಕರನ ಕತ್ತು ಹಿಸುಕಿ ಕೊಲೆ: ಹೆಣದ ಜೊತೆ ದಂಪತಿ ತ್ರಿಬಲ್‌ ರೈಡ್

ಬೆಂಗಳೂರು: (Triple riding murder) ಕತ್ತು ಹಿಸುಕಿ ಕೊಲೆ ಮಾಡಿ ಹೆಣ ಸಾಗಿಸಲು ತ್ರಿಬಲ್‌ ರೈಡ್‌ ಹೋಗಿ ಮೃತದೇಹವನ್ನು ಎಸೆದು ಬಂದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣದ ಸಂಬಂಧ ದಂಪತಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರೀನಾ, ಗಂಗೇಶ್‌, ಹಾಗೂ ಬಿಜೋಯ್‌ ಎನ್ನುವವರು ಬಂಧಿತ ಆರೋಪಿಗಳು. ನಿಬಾಶೀಶ್‌ ಕೊಲೆಯಾದ ವ್ಯಕ್ತಿ.

ರೀನಾ ಮತ್ತು ಗಂಗೇಶ್‌ ದಂಪತಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿ ನಿಬಾಶೀಶ್‌ ಪಾಲ್‌ ರೀನಾ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾನೆ. ಮೃತ ನಿಬಾಶೀಶ್‌ ಪಾಲ್‌ ರೀನಾಳ ಗಂಡ ಗಂಗೇಶ್‌ ಇಲ್ಲದೇ ಇದ್ದಾಗ ರೀನಾಗೆ ಕಿರುಕುಳ ನೀಡುತ್ತಿದ್ದ, ಹಣಕ್ಕಾಗಿ ಬೇರೆಯವರ ಜೊತೆ ಮಲಗಲು ರೀನಾಗೆ ಒತ್ತಾಯ ಮಾಡುತ್ತಿದ್ದ. ಇದರಿಂದ ಬೇಸತ್ತ ರೀನಾ ತನ್ನ ಗಂಡನಿಗೆ ಕರೆ ಮಾಡಿ ವಾಪಾಸ್‌ ಬರಲು ತಿಳಿಸಿದ್ದಾಳೆ. ಗಂಡನನ್ನು ವಾಪಾಸ್‌ ಕರೆಸಿಕೊಂಡ ರೀನಾ ನಿಬಾಶೀಶ್‌ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದು, ದಂಪತಿ ಇಬ್ಬರು ಒಟ್ಟಿಗೆ ಸೇರಿಕೊಂಡು ನಿಬಾಶೀಶ್‌ ಕೊಲೆ ಮಾಡಲು ಪ್ಲ್ಯಾನ್‌ ಮಾಡುತ್ತಾರೆ. ನಂತರದಲ್ಲಿ ನಡೆದಿದ್ದೆ ಮರ್ಡರ್(Triple riding murder).

ದಂಪತಿ ಮಾಡಿದ್ದ ಪ್ಲ್ಯಾನ್‌ ಆದರೂ ಏನು ಗೊತ್ತಾ?

ರೀನಾ ಮತ್ತು ಗಂಗೇಶ್‌ ನಿಬಾಶೀಶ್‌ ಕೊಲೆಗೆ ಸಂಚು ರೂಪಿಸುತ್ತಾರೆ. ಆ ಪ್ಲ್ಯಾನ್‌ ಏನು ಎಂದು ಕೇಳಿದರೆ ನೀವೇ ಶಾಕ್‌ ಆಗ್ತೀರಾ. ದಂಪತಿ ಮಾಡಿದ್ದ ಪ್ಲ್ಯಾನ್‌ ಬೇರೇನೂ ಅಲ್ಲ, ಅದು ‌ʻತ್ರಿಬಲ್‌ ರೈಡ್ʼ(Triple riding murder). ಹೌದು.. ರೀನಾ ದಂಪತಿ ಮಾಡಿದ್ದ ಪ್ಲ್ಯಾನ್‌ ನಂತೆ ಇಬ್ಬರು ಸೇರಿ ನಿಬಾಶೀಶ್‌ ಗೆ ಕಂಠಪೂರ್ತಿ ಕುಡಿಸಿ ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಅದಕ್ಕೂ ಮೊದಲು ಪಾಲ್‌ ಗೆ ಊಟದಲ್ಲಿ ಗಾಂಜಾದ ಬೀಜವನ್ನು ಹಾಕಿ ನಶೆ ಏರುವಂತೆ ಮಾಡಿದ್ದಾರೆ. ನಶೆ ಏರಿದ ನಂತರದಲ್ಲಿ ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರದಲ್ಲಿ ನಡೆದಿದ್ದೇ ತ್ರಿಬಲ್‌ ರೈಡಿಂಗ್.

ಕೊಲೆಯಾದ ನಂತರದಲ್ಲಿ ಆತನ ಶವ ಸಾಗಿಸಲು ಗಂಗೇಶ್‌ ತನ್ನ ಸ್ನೇಹಿತ ಬಿಜೋಯ್‌ ನ ಸಹಾಯ ಪಡೆದುಕೊಂಡಿದ್ದಾನೆ. ನಡೆಸಿದ್ದ ಪ್ಲ್ಯಾನ್‌ ನಂತೆ ಗಂಗೇಶ್‌ ಹಾಗೂ ಬಿಜೋಯ್‌ ನಿಬಾಶೀಶ್‌ ಮೃತದೇಹವನ್ನು ಬೈಕ್‌ ನ ಮಧ್ಯದಲ್ಲಿ ಕೂರಿಸಿಕೊಂಡು ಒಂದು ಕಿಲೋಮೀಟರ್‌ ದೂರದವರೆಗೂ ತ್ರಿಬಲ್‌ ರೈಡಿಂಗ್‌ ಹೋಗಿದ್ದಾರೆ. ನಂತರದಲ್ಲಿ ರಸ್ತೆ ಪಕ್ಕದಲ್ಲಿ ಮೃತದೇಹವನ್ನು ಎಸೆದು ಬಂದಿದ್ದರು. ಇದಾದ ಮೇಲೆ ಆರೋಪಿಗಳು ಮನೆ ಖಾಲಿ ಮಾಡಿ ಆಟೋದಲ್ಲಿ ಪರಾರಿಯಾಗಿದ್ದರು.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪ್ರಾರಂಭಿಸುತ್ತಾರೆ. ಮೃತ ನಿಬಾಶೀಶ್‌ ಮನೆಯ ಹತ್ತಿರ ಅಳವಡಿಸಲಾದ ಸಿಸಿಟಿವಿ ದೃಶ್ಯವನ್ನು ಪರಿಶೀಲನೆ ಮಾಡುತ್ತಾರೆ. ಈ ವೇಳೆಯಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ನಿಬಾಶೀಶ್ ಕೊಲೆ ಮಾಡಿದ್ದ ದಂಪತಿ ತ್ರಿಬಲ್ ರೈಡಿಂಗ್ ಪ್ಲ್ಯಾನ್ ಮಾಡಿದ್ದಾರೆ. ಶವವನ್ನು ಬೈಕಿನಲ್ಲಿ ಕೂರಿಸಿಕೊಂಡು ತೆರಳುತ್ತಿರುವ ದೃಶ್ಯ ಸೆರೆಯಾಗಿದೆ. ಅಲ್ಲದೇ ನಂತರದಲ್ಲಿ ಟಾಟಾ ಏಸ್ ಆಟೋದಲ್ಲಿ ದಂಪತಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ : tipper Theft : ಸಾಸ್ತಾನ ಟೋಲ್ ಗೇಟ್, ನಿಲ್ಲಿಸಿದ್ದ ಟಿಪ್ಪರ್ ಕಳವು

ಪೊಲೀಸರು ಟಾಟಾ ಏಸ್ ವಾಹನದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದಂಪತಿಯನ್ನು ಶಿಕಾರಿಪುರಕ್ಕೆ ಬಿಟ್ಟುಬಂದಿರುವ ಕುರಿತು ಮಾಹಿತಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ತನಿಖೆಗೆ ನಡೆಸಿದಾಗ ರೀನಾ, ಗಂಗೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆಯಲ್ಲಿ ದಂಪತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹೆಣ ಸಾಗಿಸಲು ನೆರವಾಗಿದ್ದ ಬಿಜೋಯ್ ಎಂಬಾತನನ್ನು ಕೂಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Triple riding murder: Lover’s strangulation murder: Couple triple ride with shroud

Comments are closed.