UP Man shot dead: ಮದುವೆ ಸಮಾರಂಭದಲ್ಲಿ ವರನ ಸ್ನೇಹಿತರೊಂದಿಗೆ ಜಗಳ: ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ

ಮುಜಾಫರ್‌ನಗರ: (UP Man shot dead) ಮದುವೆ ಕಾರ್ಯಕ್ರಮವೊಂದರಲ್ಲಿ ವರನ ಸಹಚರರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರನ ಅಂತವಾಡ ಗ್ರಾಮದಲ್ಲಿ ನಡೆದಿದೆ. ಸತೀಶ್ (32 ವರ್ಷ) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಅಂತವಾಡ ಗ್ರಾಮದಲ್ಲಿ ಮದುವೆ ಕಾರ್ಯಕ್ರಮವೊಂದು ನಡೆಯುತ್ತಿದ್ದು, ವರನ ಸಹಚರರು ಆಗಮಿಸಿದ್ದರು. ಮದುವೆ ಸಮಾರಂಭದಲ್ಲಿ ಡೆಜೆ ಸಂಗೀತ, ನೃತ್ಯ ಏರ್ಪಡಿಸಲಾಗಿತ್ತು. ವರನ ಸಹಚರರು ಡಿಜೆ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದಾಗ ಗುಂಪಿನ ನಡುವೆ ಘರ್ಷಣೆ ನಡೆದಿದೆ. ಹೀಗೆ ಮಾತಿನ ಚಕಮಕಿ ತಾರಕಕ್ಕೇರಿದ್ದು, ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ನಡೆಸಲಾಗಿದೆ.

ಇದೀಗ ಘಟನೆಯ ಕುರಿತು ಖತೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರನ ಸಹಚರರು ಮದುವೆಗೆ ಆಗಮಿಸಿದ್ದರು ಮತ್ತು ಡಿಜೆ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದಾಗ ಕೆಲವರ ನಡುವೆ ಘರ್ಷಣೆ ಸಂಭವಿಸಿದೆ. ಈ ವೇಳೆ ಗುಂಡು ಹಾರಿಸಿ ವ್ಯಕ್ತಿಯನ್ನು ಕೊಲೆಗೈಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಜಮ್ಮುವಿನ ಸಾರಿಗೆ ನಗರ ಪ್ರದೇಶದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ

ಜಮ್ಮುವಿನ ನರ್ವಾಲ್ ಪ್ರದೇಶದ ಟ್ರಾನ್ಸ್‌ಪೋರ್ಟ್ ನಗರದಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಕುಸಿತಗೊಂಡಿದ್ದು, ಸದ್ಯ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಕಟ್ಟಡವು ಆಟೋ ಸ್ಟೋರ್ ಆಗಿದ್ದು, ಇದು ಟ್ರಾನ್ಸ್‌ಪೋರ್ಟ್ ನಗರದ ಯಾರ್ಡ್ ಸಂಖ್ಯೆ 6 ರಲ್ಲಿದೆ. ಇಲ್ಲಿಯವರೆಗೆ, ಯಾವುದೇ ಸಾವು ನೋವುಗಳ ವರದಿಯಾಗಿಲ್ಲ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಈ ಬಗ್ಗೆ ಜಮ್ಮು ಅಭಿವೃದ್ಧಿ ಪ್ರಾಧಿಕಾರ ತನಿಖೆ ಆರಂಭಿಸಿದೆ.

ಇದನ್ನೂ ಓದಿ : Concret mixer truck accident: ಕಾಂಕ್ರೀಟ್ ಮಿಕ್ಸರ್ ಟ್ರಕ್-ಕಾರು ಭೀಕರ ಅಪಘಾತ: ಇಬ್ಬರು ಸಾವು

ಇದನ್ನೂ ಓದಿ : Mathura fire accident: 3 ಅಂತಸ್ತಿನ ಬಟ್ಟೆ ಶೋರೂಮ್ ನಲ್ಲಿ ಬೆಂಕಿ ಅವಘಡ

ಇದನ್ನೂ ಓದಿ : Teacher murder: ಆನ್‌ಲೈನ್ ತರಗತಿ ವೇಳೆ ಶಿಕ್ಷಕ ಕತ್ತು ಹಿಸುಕಿ ಕೊಲೆ

UP Man shot dead: Fight with groom’s friends during wedding ceremony: Man shot dead

Comments are closed.