ಭಾನುವಾರ, ಏಪ್ರಿಲ್ 27, 2025
HomeCrimeUP Shocker: ಕಂಬಕ್ಕೆ ಕಟ್ಟಿ ಥಳಿಸಿದ್ರು, ನೀರು ಕೇಳಿದರೆ ಬಾಯಿಗೆ ಕಾರದ ಪುಡಿ ತುಂಬಿದ್ರು :...

UP Shocker: ಕಂಬಕ್ಕೆ ಕಟ್ಟಿ ಥಳಿಸಿದ್ರು, ನೀರು ಕೇಳಿದರೆ ಬಾಯಿಗೆ ಕಾರದ ಪುಡಿ ತುಂಬಿದ್ರು : 10 ವರ್ಷದ ಬಾಲಕನ ಮೇಲೆ ಕ್ರೌರ್ಯ ಮೆರೆದ ದುಷ್ಕರ್ಮಿಗಳು

- Advertisement -

ಉತ್ತರ ಪ್ರದೇಶ : UP Shocker : ಕಳ್ಳತನ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಹತ್ತು ವರ್ಷದ ಬಾಲಕನನ್ನು ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ ವಿಡಿಯೋವೊಂದು ಉತ್ತರ ಪ್ರದೇಶದಲ್ಲಿ ವೈರಲ್​ ಆಗಿದೆ. ನಾಲ್ವರು ಬಾಲಕನ ಕೈಕಾಲುಗಳನ್ನು ಕಂಬಕ್ಕೆ ಕಟ್ಟಿ ಸತತ ಮೂರು ಗಂಟೆಗಳ ಕಾಲ ಥಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಸಾಲದು ಎಂಬಂತೆ ಬಾಲಕ ನೀರು ಕೊಡಿ ಎಂದು ಕೇಳಿದ್ದಕ್ಕೆ ಆತನ ಬಾಯಿಗೆ ಕಾರದ ಪುಡಿಯನ್ನು ತುಂಬಿ ಕ್ರೌರ್ಯತೆ ಮೆರೆದಿದ್ದಾರೆ.


ಅಜಂಗಢ್​ನ ಬರ್ದಾ ಪ್ರದೇಶದ ಹದಿಸಾ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಬಾಲಕನ ವಿರುದ್ಧ ಮೊಬೈಲ್​ ಫೋನ್​ ಕದ್ದಿರುವ ಆರೋಪವನ್ನು ಹೊರಿಸಲಾಗಿದೆ. ಈ ಸಂಬಂಧ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದು ಸೆಕ್ಷನ್​ 307ರ ಅಡಿಯಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಎಫ್​ಐಆರ್​ ದಾಖಲಿಸಿದ್ದಾರೆ .


ಬಾಲಕನನ್ನು ಗ್ರಾಮಸ್ಥರು ಥಳಿಸುತ್ತಿದ್ದ ಸಂದರ್ಭದಲ್ಲಿ ಇದರ ಬಗ್ಗೆ ಅರಿವಿಲ್ಲದ ಬಾಲಕನ ಪೋಷಕರು ಮನೆಯಲ್ಲಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಣತೆಯೇ ಬರ್ದಾ ಪ್ರದೇಶದ ಹದಿಸಾ ಗ್ರಾಮದ ನಿವಾಸಿಯಾದ ರಾಮಕೇಶ್​ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಲ್ಕು ದಿನಗಳ ಹಿಂದೆ ಇದೇ ಗ್ರಾಮದ ರಾಮ್​ ಆಸರೆ ರಾಮ್, ಸಂಜಯ್​ ರಾಮ್​, ಸುರೇಂದ್ರ ರಾಮ್​ ಹಾಗೂ ವಿಜಯ್​ ರಾಮ್​ ಎಂಬವರು ತಮ್ಮ ಪುತ್ರನ ಮೇಲೆ ಮೊಬೈಲ್​ ಕಳ್ಳತನದ ಆರೋಪ ಮಾಡಿದ್ದರು. ಬಾಲಕನ ನಿವಾಸಕ್ಕೆ ಆಗಮಿಸಿದ ಮೂವರು ಆರೋಪಿಗಳು ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕನಿಗೆ ಗ್ರಾಮದಲ್ಲಿ ಕಟ್ಟಿ ಥಳಿಸುತ್ತಿದ್ದ ಸಂದರ್ಭದಲ್ಲಿ ಯಾರೊಬ್ಬರು ಬಾಲಕನನ್ನು ರಕ್ಷಿಸುವ ಕಾರ್ಯ ಮಾಡಿಲ್ಲ. ಅಥವಾ ನಮಗೆ ಮಾಹಿತಿ ಕೂಡ ನೀಡಿಲ್ಲ. ನಮಗೆ ವಿಷಯ ತಿಳಿದ ಬಳಿಕ ಬಾಲಕನನ್ನು ರಕ್ಷಿಸಿದ್ದೇವೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : Minister V. Somanna apologized : ಹೆಣ್ಣು ಮಗಳಿಗೆ ಹೊಡೆಯುವಂತಹ ನೀಚ ಕೆಲಸ ಮಾಡಲಾರೆ : ಸಚಿವ ವಿ.ಸೋಮಣ್ಣ

ಇದನ್ನೂ ಓದಿ : India vs Pakistan t20 : ಭಾರತ vs ಪಾಕಿಸ್ತಾನ: ಪಂದ್ಯ ರದ್ದು? ಏನು ಹೇಳುತ್ತೆ ಹವಾಮಾನ ವರದಿ ?

UP Shocker: 10-year-old Tied To Pole, Beaten, Chilli Stuffed In Mouth | Video Goes Viral

RELATED ARTICLES

Most Popular