Man Kissing Cobra:ಅಬ್ಬಬ್ಬಾ..ಇದೇನು ಧೈರ್ಯವೋ..ಹುಚ್ಚು ಸಾಹಸವೋ… ನಾಗರಹಾವಿನ ಹೆಡೆಗೆ ಚುಂಬಿಸಿ ವ್ಯಕ್ತಿ: ವಿಡಿಯೋ ವೈರಲ್​

Man Kissing Cobra : ಕೆಲವು ದಿನಗಳ ಹಿಂದೆಯಷ್ಟೇ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ನೆನಪಿದ್ದಿರಬಹುದು. ಉರಗ ತಜ್ಞರೊಬ್ಬರು ನಾಗರ ಹಾವಿಗೆ ಮುತ್ತಿಡಲು ಹೋಗಿ ಅದರಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಾವುಗಳೇ ಹಾಗೆ.. ಶರಣಾಗತಿಯಾದರೂ ತನ್ನ ಬುದ್ಧಿಯನ್ನು ತೋರಿಸದೇ ಬಿಡೋದಿಲ್ಲ. ಹೀಗಾಗಿ ಹಾವಿನ ಜೊತೆಯಲ್ಲಿ ತುಂಟತನ ಮಾಡಬೇಕು ಅಂದರೆ ಎಂಟೆದೆ ಶೂರನೇ ಆಗಿರಬೇಕು ಎಂದು ಹೇಳಿದರೆ ತಪ್ಪಾಗೋದಿಲ್ಲ. ಅಂತಹ ಹುಚ್ಚು ಧೈರ್ಯವನ್ನು ಸಾಮಾನ್ಯವಾಗಿ ಯಾರೂ ತೋರಲು ಕೂಡ ಹೋಗೋದಿಲ್ಲ. ಹಾವಿನ ಜೊತೆ ಆಡೋದು ಒಂದೇ ಜೀವದ ಜೊತೆ ಚೆಲ್ಲಾಟವಾಡೋದು ಕೂಡ ಒಂದೇ..!

ಆದರೆ ಈ ಎಲ್ಲಾ ಮಾತುಗಳಿಗೆ ವನ್ಯಜೀವಿ ಸಂರಕ್ಷಣಾವಾದಿ ವಾವಾ ಸುರೇಶ್​ ವಿರುದ್ಧವಾಗಿ ನಿಂತಿದ್ದಾರೆ. ಯಾವುದೇ ವ್ಯಕ್ತಿಯು ಕನಸಿನಲ್ಲಿಯೂ ಮಾಡಲು ಬಯಸದ ಕೆಲಸವೊಂದನ್ನು ವನ್ಯ ಜೀವಿ ಸಂರಕ್ಷಣಾಧಿಕಾರಿ ವಾವಾ ಸುರೇಶ್​ ಮಾಡಿದ್ದು ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ. ನಾಗರ ಹಾವಿನ ಹೆಡೆಗೆ ವಾವಾ ಸುರೇಶ್​ ಮುತ್ತು ನೀಡುತ್ತಿರುವ ವಿಡಿಯೋ ಇದೀಗ ಇನ್​ಸ್ಟಾಗ್ರಾಂ ಸೇರಿದಂತೆ ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಧೂಳೆಬ್ಬಿಸುತ್ತಿದೆ.

ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಸೌರಭ್​ ಜಾಧವ್​ ಎಂಬವರು ಶೇರ್​ ಮಾಡಿದ್ದಾರೆ. ಈ ಭಯಾನಕ ವಿಡಿಯೋಗೆ 16 ಸಾವಿರಕ್ಕೂ ಅಧಿಕ ವೀವ್ಸ್​ ಬಂದಿದೆ. ನಾಗರ ಹಾವಿಗೆ ಮುತ್ತು ನೀಡುವ ಮುನ್ನ ಸುರೇಶ್​ ಮೊದಲು ಜಾಗರೂಕರಾಗುವುದನ್ನು ಕಾಣಬಹುದಾಗಿದೆ. ಅತ್ಯಂತ ವಿಷಕಾರಿ ಸರಿಸೃಪಕ್ಕೆ ಸುರೇಶ್​ ಅತ್ಯಂತ ಮೃದುವಾಗಿ ಚುಂಬಿಸುತ್ತಾರೆ.


ನಾಗರಹಾವು ಕೂಡ ಸುರೇಶ್​ ಮುತ್ತು ನೀಡುವ ಸಂದರ್ಭದಲ್ಲಿ ಒಂದಿಂಚೂ ಕದಲದೇ ಹಾಗೆಯೇ ಹೆಡೆಯೆತ್ತಿ ನಿಂತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಸುರೇಶ್​ರ ಧೈರ್ಯಕ್ಕೆ ಶಹಬ್ಬಾಸ್​ ಎಂದರೆ ಇನ್ನೂ ಕೆಲವರು ಇಂತಹ ಹುಚ್ಚು ಸಾಹಸಗಳನ್ನು ಮಾಡುವ ಅವಶ್ಯಕತೆಯಾದರೂ ಏನಿದೆ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

ಇದನ್ನು ಓದಿ : V.Somanna: ಮಹಿಳೆಗೆ ಕಪಾಳಮೋಕ್ಷ ವಿಚಾರಕ್ಕೆ ಕಾಂಗ್ರೆಸ್ ಟೀಕೆ; ಕೊನೆಗೂ ಕ್ಷಮೆಯಾಚಿಸಿದ ಸಚಿವ ಸೋಮಣ್ಣ..!

ಇದನ್ನೂ ಓದಿ : Minister V. Somanna apologized : ಹೆಣ್ಣು ಮಗಳಿಗೆ ಹೊಡೆಯುವಂತಹ ನೀಚ ಕೆಲಸ ಮಾಡಲಾರೆ : ಸಚಿವ ವಿ.ಸೋಮಣ್ಣ

Man Kissing Cobra On Its Head Takes Netizens On A Roll, See Video Here

Comments are closed.