ಸೋಮವಾರ, ಏಪ್ರಿಲ್ 28, 2025
HomeCrimeಪ್ರಥಮ ರಾತ್ರಿ ಹೊಟ್ಟೆನೋವು, ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮಕೊಟ್ಟ ವಧು !

ಪ್ರಥಮ ರಾತ್ರಿ ಹೊಟ್ಟೆನೋವು, ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮಕೊಟ್ಟ ವಧು !

- Advertisement -

ಉತ್ತರಪ್ರದೇಶ: ( Uttarpradesh) ಮೊದಲ ರಾತ್ರಿ ವಧುವಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನವವಧುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಆಕೆ ಗರ್ಭಿಣಿ ಅನ್ನೋ ಶಾಕಿಂಗ್‌ ಸುದ್ದಿಯನ್ನು ವರನಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಯುವತಿ ಮಗುವಿಗೆ (bride birth baby) ಜನ್ಮ ನೀಡಿದ್ದಾಳೆ. ಇದೀಗ ಯುವಕ ತನಗೆ ಪತ್ನಿ ಬೇಡಾ ಅನ್ನುತ್ತಿದ್ದಾನೆ.

ಅಷ್ಟಕ್ಕೂ ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ. ಮದುವೆಯ ನಂತರ ಮೊದಲ ರಾತ್ರಿಗೆ ಮನೆ ಮಂದಿಯೆಲ್ಲಾ ಸಿದ್ದತೆ ಮಾಡಿಕೊಂಡಿದ್ದಾಗಲೇ ವಧುವಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಇದರಿಂದಾಗಿ ವರ ಮಾತ್ರವಲ್ಲ ಮನೆಯವರೂ ಕೂಡ ಆತಂಕಕ್ಕೆ ಒಳಗಾಗಿದ್ದರು. ವಧುವಿನಲ್ಲಿ ಕೇಳಿದ್ರೆ ತನಗೆ ಕಿಡ್ನಿ ಸ್ಟೋನ್‌ ಆಗಿದೆ. ಇದರಿಂದಾಗಿ ತನಗೆ ಹೊಟ್ಟೆ ನೋವು ಬಂದಿದೆ ಎಂದು ತಿಳಿಸಿದ್ದಳು. ಕೂಡಲೇ ವರನ ಕಡೆಯವರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಧು ಗರ್ಣಿಣಿ ಅನ್ನೋ ವಿಚಾರ ತಿಳಿಯುತ್ತಿದ್ದಂತೆಯೇ ವರ ಹಾಗೂ ವರ ಕಡೆಯವರಿಗೆ ಶಾಕ್‌ ಆಗಿದೆ. ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಯುವಕನ ಬಳಿ ವಧುವನ್ನು ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ರೆ, ಆತ ಮಗು ಹಾಗೂ ಪತ್ನಿಯ ಕರೆದೊಯ್ಯಲು ಒಪ್ಪುತ್ತಿಲ್ಲ. ಕೊನೆಗೆ ವಧುವಿನ ಮನೆಯವರೇ ಆಕೆ ಹಾಗೂ ಆಕೆಯ ಮಗುವನ್ನು ಮನೆಗೆ ಕರೆದೊಯ್ದಿದ್ದಾರೆ.

ವಧು ಗರ್ಭೀಣಿ ಅನ್ನೋ ವಿಚಾರ ಆಕೆಯ ಮನೆಯವರಿಗೆ ಮೊದಲೇ ಗೊತ್ತಿತ್ತು. ಆದರೂ ಕೂಡ ಈ ವಿಚಾರವನ್ನು ಆತನಿಗೆ ತಿಳಿಸದೆಯೇ ಮುಚ್ಚಿಟ್ಟು ಮದುವೆ ಮಾಡಿಸಲಾಗಿತ್ತು. ಮದುವೆಗೆ ಮುನ್ನವೂ ಆಕೆಯ ವರ್ತನೆ ವಿಚಿತ್ರವಾಗಿತ್ತು. ಹೊಟ್ಟೆ ದೊಡ್ಡದಾಗಿರುವುದು ಯಾಕೆ ಎಂದು ಕೇಳಿದ್ರೆ ಆಕೆ ತನಗೆ ಕಿಡ್ನಿ ಸ್ಟೋನ್‌ ಆಗಿದೆ. ಸರ್ಜರಿ ಮಾಡಿಸಿದ್ರೆ ಸರಿಯಾಗುತ್ತೆ ಅಂತಾ ಹೇಳುತ್ತಿದ್ದಳು. ಇದನ್ನು ಯುವಕ ನಂಬಿಕೊಂಡಿದ್ದ.

ಇದನ್ನೂಓದಿ : Uttara Kannada suicide case‌ : ಉತ್ತರಕನ್ನಡ : ಮದುವೆಯಾಗಲು ಹೆಣ್ಣು ಸಿಗದ ಕಾರಣ ಮನನೊಂದ ಯುವಕ ಆತ್ಮಹತ್ಯೆಗೆ ಶರಣು

ಇದನ್ನೂ ಓದಿ : Bhopal Crime Case : 40 ಸಾವಿರ ರೂ.ಗೆ ಅಪ್ರಾಪ್ತ ವಯಸ್ಸಿನ ಬಾಲಕಿ ಮಾರಾಟ : ಐವರ ಬಂಧನ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular