Vedika Thakur : ವೇದಿಕಾ ಠಾಕೂರ್‌ ಹತ್ಯೆ ಪ್ರಕರಣ : ಶವದ ಜೊತೆ 7 ಗಂಟೆ ಸುತ್ತಾಡಿದ್ದ ಆರೋಪಿ ಬಿಜೆಪಿ ನಾಯಕ

ನವದೆಹಲಿ : ಮಧ್ಯಪ್ರದೇಶದ ಜಬಲ್ಪರದಲ್ಲಿ ನಡೆದಿದ್ದ ವೇದಿಕಾ ಠಾಕೂರ್‌ ಹತ್ಯೆ ಪ್ರಕರಣ (Vedika Thakur) ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಆರೋಪಿಯಾಗಿರುವ ಬಿಜೆಪಿ ಮುಖಂಡ ಪ್ರಿಯಾಂಶ್‌ ವಿಶ್ವಕರ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವಲ್ಲೇ ಹತ್ಯೆ ನಡೆಯುವ ವೇಳೆಯಲ್ಲಿ ಜೊತೆಗಿದ್ದ ಪಾಯಲ್‌ ನಾಪತ್ತೆಯಾಗಿದ್ದಾಳೆ ಅಂತಾ ವೇದಿಕಾ ಚಿಕ್ಕಪ್ಪ ಅಶೋಕ್‌ ಠಾಕೂರ್‌ ಪೊಲೀಸರ ಮುಂದೆ ಆರೋಪಿಸಿದ್ದಾರೆ.

23 ವರ್ಷದ ಎಂಬಿಎ ವಿದ್ಯಾರ್ಥಿನಿ ವೇದಿಕಾ ಠಾಕೂರ್‌ ಎಂಬಾಕೆಗೆ ಜೂನ್‌ 16 ರಂದು ಬಿಜೆಪಿ ನಾಯಕ ಪ್ರಿಯಾಂಶ್‌ ವಿಶ್ವಕರ್ಮ ತನ್ನ ಕಚೇರಿಯಲ್ಲಿಯೇ ಗುಂಡಿಕ್ಕಿದ್ದರು. ನಂತರದಲ್ಲಿ ಆಕೆ ಹತ್ತು ದಿನಗಳ ಕಾಲ ಚಿಕಿತ್ಸ ಪಡೆದಿದ್ದರೂ ಕೂಡ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಳು. ಘಟನೆಯ ಬೆನ್ನಲ್ಲೇ ಸಂತ್ರಸ್ತೆಯ ಮೃತದೇಹವನ್ನು ತನ್ನ ಕಾರಲ್ಲಿ ಇರಿಸಿಕೊಂಡು ಸುಮಾರು 7 ಗಂಟೆಗಳ ಕಾಲ ಸುತ್ತಾಡಿದ್ದಾನೆ ಅನ್ನೋ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇನ್ನೊಂದೆಡೆಯಲ್ಲಿ ವೇದಿಕಾ ಹತ್ಯೆಯ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಹಿಮಾಂಶ್‌ ವಿಶ್ವಕರ್ಮ ಎಂಬಾತನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಜೂನ್‌ 16 ರಂದು ವೇದಿಕಾ ಠಾಕೂರ್‌ ಬಿಲ್ಡರ್‌ ಆಗಿರುವ ಬಿಜೆಪಿ ಮುಖಂಡ ಹಿಮಾಂಶ್‌ ವಿಶ್ವಕರ್ಮ ಅವರ ಕಚೇರಿಗೆ ತೆರಳಿದ್ದರು. ಮಧ್ಯಾಹ್ನ12.30 ರಿಂದ 1 ಗಂಟೆಯ ವೇಳೆಯಲ್ಲಿ ವೇದಿಕಾಗೆ ಗುಂಡು ಹಾರಿಸಲಾಗಿತ್ತು. ಈ ವೇಳೆಯಲ್ಲಿ ವೇದಿಕಾ ಸ್ನೇಹಿತೆ ಪಾಯಲ್‌ ಕೂಡ ಜೊತೆಗಿದ್ದಳು. ಆದರೆ ಇದೀಗ ಪಾಯಲ್‌ ಕಾಣಿಸುತ್ತಿಲ್ಲ. ಗುಂಡು ಹಾರಿಸಿದ ನಂತರ ಪ್ರಿಯಾಂಶ್‌ ವಿಶ್ವಕರ್ಮ ತನ್ನ ಕಾರಿನಲ್ಲೇ ಆಕೆಯನ್ನು ಕೂರಿಸಿಕೊಂಡು ಸಂಜೆ 6 ಗಂಟೆಯ ವರೆಗೂ ಸುತ್ತಾಡಿದ್ದಾನೆ. ಅಂತಿಮವಾಗಿ ತನಗೆ ಪರಿಚಿತವಾಗಿರುವ ಆಸ್ಪತ್ರೆಗೆ ದಾಖಲಿಸಿ ಎಸ್ಕೇಪ್‌ ಆಗಿದ್ದಾನೆ.

ವೇದಿಕಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶ ಮಾಡುವ ಯತ್ನವೂ ನಡೆಯುತ್ತಿದೆ ಎಂದು ವೇದಿಕಾ ಪೋಷಕರು ಆರೋಪಿಸಿದ್ದಾರೆ. ಪ್ರಿಯಾಂಶ್‌ ತನ್ನ ಕಚೇರಿಯಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನೂ ನಾಶ ಪಡಿಸಿದ್ದು, ಪೊಲೀಸರು ಸರ್ವರ್‌ ಕಂಪೆನಿಯ ಸಹಾಯವನ್ನು ಕೋರಿ ಈ ಕುರಿತು ಪತ್ರವೊಂದನ್ನು ಬರೆದಿದ್ದಾರೆ. ವೇದಿಕಾ ದೇಹದಲ್ಲಿರುವ ಗುಂಡನ್ನು ವೈದ್ಯರು ಹೊರ ತೆಗೆದಿದ್ದು, ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆರೋಪಿ ಪ್ರಿಯಾಂಶ್‌ ಬಳಿಯಲ್ಲಿದ್ದ ಪಿಸ್ತೂಲ್‌ ಅನ್ನು ವಶಕ್ಕೆ ಪಡೆಯಲಾಗಿದೆ. ಯಾವ ಕಾರಣಕ್ಕೆ ಗುಂಡು ಹಾರಿಸಲಾಗಿದೆ ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ : Karnataka Crime News : ಪತ್ನಿ ಪ್ರಿಯಕರನ ಗಂಟಲು ಸೀಳಿ ರಕ್ತ ಕುಡಿದ ಪತಿ

ಇದನ್ನೂ ಓದಿ : Odisha Bus Accident‌ : ಬಸ್‌ಗಳ ನಡುವೆ ಮುಖಾಮುಖಿ ಢಿಕ್ಕಿ : 10 ಸಾವು, 8 ಜನರಿಗೆ ಗಾಯ

ವೇದಿಕಾ ಠಾಕೂರ್‌ ತಂದೆ ಬ್ಯಾಂಕ್‌ನಲ್ಲಿ ಕಾವಲುಗಾರರಾಗಿದ್ದು, ಗುಂಡು ತಗುಲಿ ಅವರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ವೇದಿಕಾ ಅವರ ಸಹೋದರನಿಗೆ ಕೆಲಸ ಸಿಕ್ಕಿತ್ತು. ವೇದಿಕಾ ಸಾಮಾನ್ಯ ಕುಟುಂಬದಿಂದ ಹುಟ್ಟಿ ಬಂದವರು. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಕಾರ್ಯವನ್ನು ಮುಗಿಸಿ ಮನೆಗೆ ಕೊಂಡೊಯ್ಯಲಾಗಿದೆ.

Vedika Thakur murder case: Accused BJP leader who walked with the body for 7 hours

Comments are closed.