Whatsapp Data leak: ವಾಟ್ಸಪ್ ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್: 500 ಮಿಲಿಯನ್ ಬಳಕೆದಾರರ ಮಾಹಿತಿ ಹ್ಯಾಕ್ ಮಾಡಿ ಮಾರಾಟಕ್ಕಿಟ್ಟಿದ್ದಾರಂತೆ ಕ್ರಿಮಿನಲ್ಸ್

ನವದೆಹಲಿ: Whatsapp Data leak: ವಿಶ್ವದಲ್ಲಿ ವಾಟ್ಸಪ್ ಬಳಕೆದಾರರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ 550 ಮಿಲಿಯನ್ ಜನ ವಾಟ್ಸಪ್ ಬಳಸುತ್ತಿದ್ದಾರೆ. ಆದರೀಗ ವಾಟ್ಸಪ್ ಬಳಕೆದಾರರನ್ನು ಬೆಚ್ಚಿಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಅದೇನಂದ್ರೆ ಡಾರ್ಕ್ ವೆಬ್ ನಲ್ಲಿ ಸುಮಾರು 500 ಮಿಲಿಯನ್ ವಾಟ್ಸಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳು ಮಾರಾಟವಾಗಿವೆಯಂತೆ.

ಸೈಬರ್ ನ್ಯೂಸ್ ವರದಿ ಮಾಡಿರುವ ಈ ಮಾಹಿತಿ ವಾಟ್ಸಪ್ ಬಳಕೆದಾರರನ್ನು ಆತಂಕಕ್ಕೀಡು ಮಾಡಿದೆ. ವರದಿಯ ಪ್ರಕಾರ ಪ್ರಸಿದ್ಧ ಹ್ಯಾಕಿಂಗ್ ಗುಂಪೊಂದು ಕಮ್ಯುನಿಟಿ ವೇದಿಕೆಯಲ್ಲಿ ಜಾಹೀರಾತೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ 47.8 ಕೋಟಿ ವಾಟ್ಸಪ್ ಬಳಕೆದಾರರ ಸಂಖ್ಯೆಗಳ ಡೇಟಾಬೇಸ್ ನ್ನು ಮಾರಾಟ ಮಾಡುತ್ತಿರುವುದಾಗಿ ಹೇಳಲಾಗಿದೆ.

ಇದನ್ನೂ ಓದಿ: Threaten letter to PM: ಪ್ರಧಾನಿ ಮೋದಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಇದೀಗ ಪೊಲೀಸರ ಅತಿಥಿ

ಸೋರಿಕೆಯಾದ ಡೇಟಾಸೆಟ್ 84 ದೇಶಗಳ ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ಹೊಂದಿದೆ ಎನ್ನಲಾಗಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ವಾಟ್ಸಪ್ ಬಳಕೆದಾರರ ವೈಯಕ್ತಿಕ ಮಾಹಿತಿ, ದತ್ತಾಂಶಗಳನ್ನು ಕದ್ದು ಮಾರಾಟಕ್ಕೆ ಇಡಲಾಗಿದೆಯಂತೆ. ಈ ಮೂಲಕ ವಾಟ್ಸಪ್ ಬಳಕೆದಾರರ ವಾಟ್ಸಪ್ ನಂಬರ್, ವೈಯಕ್ತಿಕ ಮಾಹಿತಿ ಅನ್ಯರ ಪಾಲಾಗುತ್ತಿದೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಮಾರಾಟಕ್ಕಿಟ್ಟಿರುವ ಡೇಟಾಬೇಸ್ ನಲ್ಲಿ ಭಾರತ, ಯುನೆಟೈಡ್ ಕಿಂಗ್ ಡಮ್, ಇಟೆಲಿ, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಫ್ರಾನ್ಸ್, ಸೌದಿ ಅರೇಬಿಯಾ ಸೇರಿದಂತೆ ವಿಶ್ವದ 84 ರಾಷ್ಟ್ರಗಳ ವಾಟ್ಸಪ್ ಬಳಕೆದಾರರ ಮೊಬೈಲ್ ನಂಬರ್ ಗಳಿವೆ ಎಂದು ಹೇಳಲಾಗುತ್ತಿದೆ.

ಅಮೆರಿಕಾದಲ್ಲಿ 3.2 ಕೋಟಿ, ಬ್ರಿಟನ್ 1.1 ಕೋಟಿ, ರಷ್ಯಾ 1 ಕೋಟಿ, ಇಟಲಿ 3.5 ಕೋಟಿ, ಸೌದಿ ಅರೇಬಿಯಾ 2.9 ಕೋಟಿ, ಭಾರತದ 60 ಲಕ್ಷ ಜನರ ಮೊಬೈಲ್ ನಂಬರ್ ಸೈಬರ್ ಖದೀಮರ ಕೈ ಸೇರಿದ್ದು, ಬಳಕೆದಾರರ ಖಾಸಗಿ ಮಾಹಿತಿ ಲೀಕ್ ಆಗಿದೆ ಎಂದು ವರದಿ ಹೇಳಿದೆ. ನವೆಂಬರ್ 16ರಂದು ಹ್ಯಾಕಿಂಗ್ ಕಮ್ಯೂನಿಟಿ ವೇದಿಕೆಯಲ್ಲಿ ಜಾಹೀರಾತೊಂದನ್ನು ಪೋಸ್ಟ್ ಮಾಡಲಾಗಿತ್ತು. ಇದರಲ್ಲಿ ವಾಟ್ಸಪ್ ನ ಅಂದಾಜು 2 ಶತಕೋಟಿ ಸಕ್ರಿಯ ಮಾಸಿಕ ಬಳಕೆದಾರರಲ್ಲಿ ನಾಲ್ಕನೇ ಒಂದು ಭಾಗವು ಅಪಾಯದಲ್ಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Bomb blast: ಭಾರತದಲ್ಲಿ ಷರಿಯಾ ಕಾನೂನು ಜಾರಿಯಾಗಬೇಕೆಂದಿದ್ದ ಶಾರೀಖ್‌..!

ವಾಟ್ಸಪ್ ಬಳಕೆದಾರರೇ ಗಮನಿಸಿ;

ವಾಟ್ಸಪ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ ಆಗಿರುವ ವಿಚಾರ ಎಲ್ಲರಲ್ಲೂ ಆತಂಕ ತಂದೊಡ್ಡಿದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಬಹಳ ಎಚ್ಚರವಾಗಿರುವುದು ಉತ್ತಮ. ವಾಟ್ಸಪ್ ನಲ್ಲಿ ಅನಾಮಿಕ ನಂಬರ್ ನಿಂದ ಮೆಸೇಜ್, ಕಾಲ್ ಬಂದಲ್ಲಿ ಪ್ರತಿಕ್ರಿಯೆ ನೀಡದಿರುವುದೇ ಉತ್ತಮ. ಮುಖ್ಯವಾಗಿ ಅನಾಮಿಕ ಸಂಖ್ಯೆಗಳಿಂದ ಯಾರಾದರೂ ಮಾಹಿತಿ ಕೇಳಿದರೆ, ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬಾರದು. ಪದೇ ಪದೇ ಸಂದೇಶ ಬರುವ ಸ್ಪ್ಯಾಮ್ ಸಂಖ್ಯೆಗಳನ್ನು ಡಿಲೀಟ್ ಮಾಡಬೇಕು ಅಥವಾ ಬ್ಲಾಕ್ ಮಾಡಿದರೆ ಇನ್ನೂ ಒಳ್ಳೆಯದು. ಸಾಧ್ಯವಾದಷ್ಟು ಮಾಹಿತಿಯನ್ನು ಹಾಗೂ ಪ್ರೊಫೈಲ್ ಫೋಟೋವನ್ನು ಗೌಪ್ಯವಾಗಿ ಇಡುವುದು ಉತ್ತಮ.

Whatsapp Data leak: A shocking news for WhatsApp users Criminals seem to have hacked and sold the information of 500 million users

Comments are closed.