ದೆಹಲಿ : WOMAN KILLS HER LIVE IN PARTNER : ಪ್ರೀತಿ ಮಾಯೆ ಹುಷಾರು..! ಅಂತಾರೆ. ಪ್ರೀತಿಯಲ್ಲಿ ಬಿದ್ದು ಬಳಿಕ ಮದುವೆಯಾಗಿ ಒಳ್ಳೆಯ ಸಂಸಾರ ನಡೆಸುವವರು ನಮ್ಮ ಸಮಾಜದಲ್ಲಿದ್ದಾರೆ. ಅದರಂತೆಯೇ ಪ್ರೀತಿಯೆಂಬ ಮಾಯೆಯಿಂದಾಗಿ ಜೀವವನ್ನೇ ಕಳೆದುಕೊಂಡವರೂ ನಮ್ಮ ನಡುವೆ ಇದ್ದಾರೆ. ಈ ವಿಚಾರವನ್ನೆಲ್ಲ ಈಗ ಹೇಳಲು ಕಾರಣ ಕೂಡ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರೀತಿಯ ಹೆಸರಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಜರುಗಿದೆ.
ದೆಹಲಿಯ ತಿಲ್ಮೋರ್ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿ ನಿಕೇತನ ಎಂಬ ಪ್ರದೇಶದಲ್ಲಿ ಈ ಘನಘೋರ ಘಟನೆ ಸಂಭವಿಸಿದೆ. ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯತಮ ಮದುವೆಯಾಗಲು ತನ್ನನ್ನು ನಿರಾಕರಿಸಿದ್ದಾನೆ ಎಂಬ ಒಂದೇ ಕಾರಂಣಕ್ಕೆ ಆತನ ಕತ್ತು ಸೀಳಿ ಸೂಟ್ಕೇಸ್ನಲ್ಲಿ ಶವವನ್ನು ತುಂಬಿಟ್ಟ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ .
ಹಿಂದೂ ಧರ್ಮಕ್ಕೆ ಸೇರಿದ ಮಹಿಳೆ ಫಿರೋಜ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಅಲ್ಲದೇ ಇವರಿಬ್ಬರು ಲಿವ್ ಇನ್ ರಿಲೇಶನ್ಶಿಪ್ನಲ್ಲಿಯೂ ಇದ್ದರು. ನಾಲ್ಕು ವರ್ಷಗಳ ಹಿಂದೆ ಪತಿಗೆ ವಿಚ್ಛೇದನ ನೀಡಿದ್ದ ಈಕೆ ಫಿರೋಜ್ನೊಂದಿಗೆ ವಾಸಿಸಲು ಆರಂಭಿಸಿದ್ದಳು. ಮೃತ ಫಿರೋಜ್ ದೆಹಲಿಯಲ್ಲಿ ಹೇರ್ ಡ್ರೆಸ್ಸರ್ ಆಗಿ ಕೆಲಸ ಮಾಡುತ್ತಿದ್ದ. ಕೆಲವು ದಿನಗಳ ಹಿಂದೆ ಆರೋಪಿ ಮಹಿಳೆಯು ಫಿರೋಜ್ ಬಳಿಯಲ್ಲಿ ತನ್ನನ್ನು ಮದುವೆಯಾಗು ಎಂದು ಕೇಳಿದ್ದಾಳೆ. ಆದರೆ ಇದಕ್ಕೆ ಫಿರೋಜ್ ಒಪ್ಪಿಗೆ ನೀಡರಲಿಲ್ಲ.
ಫಿರೋಜ್ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದು ಮಹಿಳೆಯ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ ಆಕೆ ಆತನ ಕತ್ತು ಸೀಳಿ ಹತ್ಯೆಗೈದಿದ್ದಾಳೆ . ಮಾತ್ರವಲ್ಲದೇ ಮೃತದೇಹವನ್ನು ಸಾಗಿಸಲು ದೊಡ್ಡ ಸೂಟ್ಕೇಸ್ ಖರೀದಿ ಮಾಡಿದ್ದಳು. ಸೂಟ್ಕೇಸ್ನಲ್ಲಿ ಮೃತದೇಹವನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಅನುಮಾನ ಬಂದು ತನಿಖೆ ನಡೆಸಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ .
ಇದನ್ನು ಓದಿ : Saligrama: ಗಿರಿ ಫ್ರೆಂಡ್ಸ್(ರಿ ) ಚಿತ್ರಪಾಡಿ – ಸಾಲಿಗ್ರಾಮ: “ಮನೆಗೊಂದು ಮಕ್ಕಳ ಹೆಸರಲ್ಲಿ ಗಿಡ ನೆಡುವ “ವಿನೂತನ ಕಾರ್ಯಕ್ರಮ
ಇದನ್ನೂ ಓದಿ : Indian Cricket Team: ಮೊಬೈಲ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡದ ಫೈನಲ್ ವೀಕ್ಷಿಸಿದ ರೋಹಿತ್ ಶರ್ಮಾ & ಟೀಮ್
ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
WOMAN KILLS HER LIVE IN PARTNER IN GHAZIABAD