Commonwealth Games Cricket : ಬೆಳ್ಳಿ ಪದಕ ಗೆದ್ದ ಭಾರತ ತಂಡದ ಆಟಗಾರ್ತಿ ರಾಜೇಶ್ವರಿಗೆ ರಾಜ್ಯ ಸರ್ಕಾರದಿಂದ ₹ 15 ಲಕ್ಷ ಪುರಸ್ಕಾರ

ಬೆಂಗಳೂರು: (Rajeshwari Gayakwad) ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಕರ್ನಾಟಕ ಸರ್ಕಾರ 15 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ. ಬೆಳ್ಳಿ ಪದಕ ವಿಜೇತ ಟೀಮ್ ಇಂಡಿಯಾ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ (Rajeshwari Gayakwad) ಅವರಿಗೆ ಅಭಿನಂದನೆ ಸಲ್ಲಿಸಿರುವ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ, ರಾಜ್ಯ ಸರ್ಕಾರದಿಂದ 15 ಲಕ್ಷ ನಗದು ಪುರಸ್ಕಾರವನ್ನು ಘೋಷಿಸಿದ್ದಾರೆ. ಬೆಳ್ಳಿ ಪದಕ ಗೆದ್ದ ಭಾರತ ತಂಡಕ್ಕೆ ರಾಜ್ಯ ಕ್ರೀಡಾ ಸಚಿವ ನಾರಾಯಣ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ಬರ್ಮಿಂಗ್’ಹ್ಯಾಮ್’ನ ಎಡ್ಜ್’ಬಾಸ್ಟನ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಕಾಮನ್ವೆಲ್ಸ್ ಗೇಮ್ಸ್ ಟಿ20 ಫೈನಲ್ ಪಂದ್ಯದಲ್ಲಿ ಹರ್ಮನ್’ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 9 ರನ್’ಗಳ ಸೋಲು ಅನುಭವಿಸಿತ್ತು. ಮೊದಲು ಬ್ಯಾಟ್ ಮಾಡಿದ ಆಸೀಸ್ ವನಿತೆಯರು ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಿದ್ದರು.

ನಂತರ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡ 19.3 ಓವರ್’ಗಳಲ್ಲಿ 152 ರನ್’ಗಳಿಗೆ ಆಲೌಟಾಗಿ ವೀರೋಚಿತ ಸೋಲು ಅನುಭವಿಸಿತ್ತು. ನಾಯಕಿ ಹರ್ಮನ್’ಪ್ರೀತ್ ಕೌರ್ 43 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್’ಗಳನ್ನೊಳಗೊಂಡ ಸ್ಫೋಟಕ 65 ರನ್ ಸಿಡಿಸಿದ್ರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. 16ನೇ ಓವರ್’ನಲ್ಲಿ ತಂಡದ ಮೊತ್ತ 121 ರನ್’ಗಳಾಗಿದ್ದ ಹರ್ಮನ್’ಪ್ರೀತ್ ಕೌರ್ ಔಟಾದಾಗಲೂ ಭಾರತಕ್ಕೆ ಗೆಲುವಿನ ಅವಕಾಶವಿತ್ತು. ಆದರೆ ಕೆಳ ಕ್ರಮಾಂಕದ ಆಟಗಾರ್ತಿಯರ ಬೇಜವಾಬ್ದಾರಿ ಆಟದಿಂದಾಗಿ ಭಾರತದ ಕೈಯಲ್ಲಿದ್ದ ಗೆಲುವು ಕೈ ಜಾರಿತ್ತು. 9 ರನ್’ಗಳಿಂದ ಪಂದ್ಯ ಗೆದ್ದ ಆಸ್ಟ್ರೇಲಿಯಾ ಕಾಮನ್ವೆಲ್ತ್ ಗೇಮ್ಸ್’ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿತ್ತು.

2020ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಭಾರತೀಯ ವನಿತೆಯರು ಆಸ್ಟ್ರೇಲಿಯಾ ವಿರುದ್ಧವೇ ಸೋಲು ಕಂಡಿದ್ದರು. 2017ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಹೀಗೆ ಕಳೆದ 5 ವರ್ಷಗಳಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ 3 ದೊಡ್ಡ ಟೂರ್ನಿಗಳ ಫೈನಲ್ ಪಂದ್ಯಗಳಲ್ಲಿ ಸೋಲು ಕಂಡಿದೆ.

ಇದನ್ನೂ ಓದಿ : Indian Cricket Team: ಮೊಬೈಲ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡದ ಫೈನಲ್ ವೀಕ್ಷಿಸಿದ ರೋಹಿತ್ ಶರ್ಮಾ & ಟೀಮ್

ಇದನ್ನೂ ಓದಿ : Lakshya Sen Won Gold Medal : ಕಾಮನ್​ವೆಲ್ತ್​ ಗೇಮ್ಸ್​ ಬ್ಯಾಡ್ಮಿಂಟನ್​​ ಪುರುಷರ ಸಿಂಗಲ್ಸ್​ನಲ್ಲಿ ಭಾರತದ ‘ಸ್ವರ್ಣ’ ಸಾಧನೆ

Rajeshwari Gayakwad Indian team player who won the silver medal, was awarded 15 lakh by the state government

Comments are closed.