ರೋಹಿತ್ ಶರ್ಮಾ ಸಿಂಹಾಸನದ ಮೇಲೆ ಮತ್ತೊಬ್ಬನ ಕಣ್ಣು; ಟೀಮ್ ಇಂಡಿಯಾ ನಾಯಕನಾಗ್ತಾನಾ ಈ ಆಟಗಾರ

ಫ್ಲೋರಿಡಾ: (Hardik Pandya Overtake Rohith Sharma) ಟೀಮ್ ಇಂಡಿಯಾದ ಫುಲ್ ಟೈಮ್ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಈಗಷ್ಟೇ ಆರಂಭಿಕ ಹೆಜ್ಜೆಗಳನ್ನು ಇಡುತ್ತಿದ್ದಾರೆ. ರೋಹಿತ್ ಶರ್ಮಾ ನಾಯಕತ್ವ ದಲ್ಲಿ ಭಾರತ ತಂಡ, ಸತತ 8 ಟಿ20 ಸರಣಿಗಳನ್ನು ಗೆದ್ದಿದೆ. ನಾಯಕತ್ವದಲ್ಲಿ ಆರಂಭಿಕ ಯಶಸ್ಸು ಪಡೆದಿರುವ ರೋಹಿತ್ ಶರ್ಮಾ ಅವರ ನಾಯಕ ಪಟ್ಟದ ಮೇಲೆ ಮತ್ತೊಬ್ಬ ಆಟಗಾರನ ಕಣ್ಣು ಬಿದ್ದಿದೆ. ಆ ಆಟಗಾರ ಈಗಾಗಲೇ ನಾಯಕತ್ವದಲ್ಲಿ ಒಂದಷ್ಟು ಯಶಸ್ಸನ್ನೂ ಸಂಪಾದಿಸಿದ್ದಾರೆ. ರೋಹಿತ್ ಶರ್ಮಾ ಸಿಂಹಾಸನದ ಮೇಲೆ ಕಣ್ಣಿಟ್ಟಿರುವುದು ಬೇರಾರೂ ಅಲ್ಲ, ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ.

ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದ ಕಾರಣ, ಟೀಮ್ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ಪಾಂಡ್ಯ ನಾಯಕತ್ವದಲ್ಲಿ ಮಿಂಚಿದ್ದ ಭಾರತ 88 ರನ್”ಗಳಿಂದ ಭರ್ಜರಿಯಾಗಿ ಪಂದ್ಯವನ್ನು ಗೆದ್ದುಕೊಂಡು 4-1ರಲ್ಲಿ ಸರಣಿ ಕೈವಶ ಮಾಡಿಕೊಂಡಿತ್ತು.

ಪಂದ್ಯದ ನಂತರ ಮಾತನಾಡಿದ್ದ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಪೂರ್ಣಕಾಲಿಕ ನಾಯಕತ್ವದ ಅವಕಾಶ ಸಿಕ್ಕರೆ ನಿಭಾಯಿಸಲು ಸಿದ್ಧ ಎಂದಿರುವುದು ಸಾಕಷ್ಟು ಕುತೂಹಲಗಳಿಗೆ ದಾರಿ ಮಾಡಿ ಕೊಟ್ಟಿದೆ. ಭವಿಷ್ಯದಲ್ಲಿ ಭಾರತ ತಂಡದ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಹಾರ್ದಿಕ್ “ಖಂಡಿತಾ, ಯಾಕಾಗಬಾರದು? ಅವಕಾಶ ಸಿಕ್ಕರೆ ಅದನ್ನು ತುಂಬಾ ಸಂತೋಷದಿಂದ ನಿಭಾಯಿಸುತ್ತೇನೆ. ಆದರೆ ಸದ್ಯ ನಮ್ಮ ಗಮನವೇನಿದ್ದರೂ ವಿಶ್ವಕು ಮೇಲಿದೆಯೇ ಹೊರತು, ನಾಯಕತ್ವದ ಬಗ್ಗೆ ಯೋಚಿಸುತ್ತಿಲ್ಲ” ಎಂದಿದ್ದಾರೆ.

https://twitter.com/oye_nilesh/status/1556349667792654336?s=20&t=WMjC9Yi93ENFdWKhxhjRYQ

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್ ತಂಡ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಕಳೆದ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು ನಡೆದ ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯಲ್ಲೂ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದರು. ಆ ಸರಣಿಯನ್ನು ಪಾಂಡ್ಯ ಸಾರಥ್ಯದಲ್ಲಿ ಭಾರತ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಟೀಮ್ ಇಂಡಿಯಾ ಉಪನಾಯಕರಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಪದೇ ಪದೇ ಗಾಯದ ಸಮಸ್ಯೆಗೊಳಗಾಗಿ ತಂಡದಿಂದ ಹೊರ ಬೀಳುತ್ತಿರುವ ಕಾರಣ, ಹಾರ್ದಿಕ್ ಪಾಂಡ್ಯ ಅವರಿಗೆ ಖಾಯಂ ಉಪನಾಯಕನ ಪಟ್ಟ ಕಟ್ಟಲು ಬಿಸಿಸಿಐ ಮುಂದಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : Commonwealth Games Cricket : ಬೆಳ್ಳಿ ಪದಕ ಗೆದ್ದ ಭಾರತ ತಂಡದ ಆಟಗಾರ್ತಿ ರಾಜೇಶ್ವರಿಗೆ ರಾಜ್ಯ ಸರ್ಕಾರದಿಂದ ₹ 15 ಲಕ್ಷ ಪುರಸ್ಕಾರ

ಇದನ್ನೂ ಓದಿ : Indian Cricket Team: ಮೊಬೈಲ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡದ ಫೈನಲ್ ವೀಕ್ಷಿಸಿದ ರೋಹಿತ್ ಶರ್ಮಾ & ಟೀಮ್

Hardik Pandya Overtake Rohith Sharma captaincy of Team India

Comments are closed.