ಮಂಗಳೂರು : ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವ ಮೂರು ದಿನಗಳ ನಂತರ ಬೀಚ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಸುರತ್ಕಲ್ ಮುಕ್ಕ ಸಮೀಪದ ಸಸಿಹಿತ್ಲು ಬೀಚ್ ನಲ್ಲಿ ನಡೆದಿದೆ.
ಮುಕ್ಕ ನಿವಾಸಿಯಾಗಿರುವ ಕಿರಣ್ ಶೆಟ್ಟಿ ಎಂಬವರೇ ಸಾವನ್ನಪ್ಪಿರುವ ಯುವಕ. ಕಿರಣ್ ಶೆಟ್ಟಿ ಪಾಲುದಾರಿಕೆಯಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಆದರೆ ಕೋರೊನಾ ಹಿನ್ನೆಲೆಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಅಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು.
ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆ ಪ್ರಕರಣ : ಇಬ್ಬರು ಹಂತಕರು ಅರೆಸ್ಟ್ ? ಪತಿಯೇ ಕೊಟ್ರಾ ಸುಫಾರಿ ..!
ಕಳೆದ ಮೂರು ದಿನಗಳ ಹಿಂದೆ ಕಿರಣ್ ಶೆಟ್ಟಿ ನಾಪತ್ತೆಯಾಗಿದ್ದರು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೀಗ ಬೀಚ್ ಬಳಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಆರ್ಥಿಕ ಸಮಸೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಅನ್ನೋ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.