Young woman committed suicide: ಜಾತ್ರೆಯಲ್ಲಿ ಯುವಕ ಕೈ ಹಿಡಿದು ಎಳೆದನೆಂದು ಆತ್ಮಹತ್ಯೆಗೆ ಶರಣಾದ ಯುವತಿ

ಬೆಳಗಾವಿ: (Young woman committed suicide) ಜಾತ್ರೆಯಲ್ಲಿ ಯುವಕನೋರ್ವ ತನ್ನ ಕೈ ಹಿಡಿದು ಎಳೆದನೆಂದು ಮನನೊಂದು ಖಿನ್ನತೆಗೆ ಒಳಗಾಗಿ ಯುವತಿಯೋರ್ವಳು ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಅಥಣಿ ತಾಲೂಕಿನ ಸಂಕೋನಟ್ಟಿಯಲ್ಲಿ ನಡೆದಿದೆ. ಸ್ವಪ್ನಾ ಸುಭಾಷ ಹಿಪ್ಪರಗಿ (19 ವರ್ಷ) ಆತ್ಮಹತ್ಯೆಗೆ ಶರಣಾದ ಯುವತಿ.

ಸುನೀಲ ಧರಿಗೌಡರ ಜೊತೆ ಸ್ವಪ್ನಾಳನ್ನು ಮದುವೆ ಮಾಡಿಕೊಡುವುದಾಗಿ ಸುನೀಲನ ತಂದೆ ತಾಯಿ ಇತ್ತೀಚೆಗೆ ಯುವತಿಯ ಮನೆಗೆ ಬಂದು ಕೇಳಿದ್ದರು. ಆದರೆ ಯುವತಿಯ ಮನೆಯವರು ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಹೇಳಿದ್ದರು. ನಂತರ ಸುನೀಲನ ತಂದೆ ತಾಯಿ ಅಲ್ಲಿಂದ ತೆರಳಿದ್ದಾರೆ.

ಜ. 25 ರಂದು ಗ್ರಾಮದಲ್ಲಿ ಜಾತ್ರೆ ನಡೆಯುತ್ತಿತ್ತು. ಯುವತಿಯ ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡಲಿಲ್ಲ ಎಂದು ಸಿಟ್ಟಿನಲ್ಲಿದ್ದ ಸುನೀಲ ಜಾತ್ರೆಗೆ ಬಂದಿದ್ದ ಸ್ವಪ್ನಾಳ ಕೈ ಹಿಡಿದು ಎಳೆದಾಡಿದ್ದ. ಇದರಿಂದ ಸ್ವಪ್ನಾ ಮನನೊಂದು ಖಿನ್ನತೆಗೆ ಒಳಗಾಗಿದ್ದು, ತನ್ನ ತೋಟದ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದೀಗ ಘಟನೆಯ ಕುರಿತು ಅಥಣಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಂಕೋನಟ್ಟಿ ಗ್ರಾಮದ ಸುನೀಲ ಅಣ್ಣಪ್ಪ ಧರಿಗೌಡ ವಿರುದ್ದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕಾರಿಗೆ ಬೈಕ್‌ ಢಿಕ್ಕಿ: ಚಾಲಕನನ್ನು ಹಿಂಬಾಲಿಸಿ ಬೆದರಿಕೆ ಹಾಕಿ ಹಣ ಸುಲಿಗೆಗೆ ಯತ್ನ, ರಾತ್ರಿ ಸಮಯದಲ್ಲಿ ಓಡಾಡುವ ಮುನ್ನ ಹುಷಾರ್‌!

ರಸ್ತೆ ದಾಟುತ್ತಿದ್ದ ಮಹಿಳೆಗೆ ರೇಸಿಂಗ್‌ ಬೈಕ್‌ ಢಿಕ್ಕಿ: ಮಹಿಳೆ ಸಾವು, ಬೈಕ್‌ ಸವಾರ ಗಂಭೀರ ಗಾಯ

ತಿರುವನಂತಪುರಂ: ಅಕ್ರಮ ಬೈಕ್ ರೇಸಿಂಗ್‌ನಲ್ಲಿ ತೊಡಗಿದ್ದ ದ್ವಿಚಕ್ರ ವಾಹನವೊಂದು ರಸ್ತೆ ದಾಟುತ್ತಿದ್ದ ಮಹಿಳೆಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋವಲಂ ಬೈಪಾಸ್‌ನಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್‌ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : Race Bike accident: ರಸ್ತೆ ದಾಟುತ್ತಿದ್ದ ಮಹಿಳೆಗೆ ರೇಸಿಂಗ್‌ ಬೈಕ್‌ ಢಿಕ್ಕಿ: ಮಹಿಳೆ ಸಾವು, ಬೈಕ್‌ ಸವಾರ ಗಂಭೀರ ಗಾಯ

ಮಹಿಳೆಯೋರ್ವರು ಕೋವಲಂ ಬೈಪಾಸ್‌ ನಲ್ಲಿ ರಸ್ತೆ ದಾಟುತ್ತಿದ್ದಾಗ ಅಕ್ರಮ ಬೈಕ್‌ ರೇಸಿಂಗ್‌ ನಲ್ಲಿದ್ದ ಬೈಕ್‌ ಒಂದು ಮಹಿಳೆಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಬೈಕ್‌ ಸವಾರ ಕೂಡ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ತಿರುವನಂತಪುರಂ ನ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : Car accident-constable death: ಅಪರಿಚಿತ ವಾಹನಕ್ಕೆ ಕಾರು ಢಿಕ್ಕಿ: ಪೊಲೀಸ್ ಪೇದೆ ಸಾವು, 3 ಮಂದಿಗೆ ಗಾಯ

A young woman committed suicide after being pulled by a young man’s hand in a fair

Comments are closed.