ಕಾರಿಗೆ ಬೈಕ್‌ ಢಿಕ್ಕಿ: ಚಾಲಕನನ್ನು ಹಿಂಬಾಲಿಸಿ ಬೆದರಿಕೆ ಹಾಕಿ ಹಣ ಸುಲಿಗೆಗೆ ಯತ್ನ, ರಾತ್ರಿ ಸಮಯದಲ್ಲಿ ಓಡಾಡುವ ಮುನ್ನ ಹುಷಾರ್‌!

ಬೆಂಗಳೂರು: (Tried to extort money) ಎದುರಿನಿಂದ ಬರುತ್ತಿದ್ದ ಕಾರಿಗೆ ಬೈಕ್‌ ಢಿಕ್ಕಿ ಹೊಡೆದಿದ್ದು, ನಂತರ ಬೈಕ್‌ ಸವಾರ ಕಾರು ಚಾಲಕನನ್ನು ಹಿಂಬಾಲಿಸಿ ಬೆದರಿಕೆಯೊಡ್ಡಿ ಹಣ ಸುಲಿಗೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ಬೆಳಗ್ಗಿನ ಜಾವ ನಡೆದಿದೆ. ಇದೀಗ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಭಾನುವಾರ ಬೆಳ್ಳಂಬೆಳಿಗ್ಗೆ ಬೆಂಗಳೂರಿನ ಸರ್ಜಾಪುರದಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಬೈಕ್‌ ಸವಾರ ಢಿಕ್ಕಿ ಹೊಡೆದಿದ್ದು, ಕಾಡಿನ ಡ್ಯಾಶ್‌ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್‌ ಆಗಿದೆ. ಘಟನೆಯ ಬಳಿಕ ಕಾರು ಚಾಲಕ ಸ್ಥಳದಿಂದ ತೆರಳಿದ್ದು, ಬೈಕ್‌ ಸವಾರ ಕಾರು ಚಾಲಕನನ್ನು ಹಿಂಬಾಲಿಸಿ ಬೆದರಿಕೆಯೊಡ್ಡಿದ್ದಾನೆ. ಘಟನೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಇದೀಗ ಬೈಕ್‌ ನಲ್ಲಿ ರಾಂಗ್‌ ಸೈಡಿನಲ್ಲಿ ಬಂದು ಢಿಕ್ಕಿ ಹೊಡೆದು ಹಣ ಸುಲಿಗೆ ಮಾಡುವ ಹುನ್ನಾರವನ್ನು ಯುವಕರು ನಡೆಸುತ್ತಿದ್ದರು ಎನ್ನುವುದು ತಿಳಿದುಬಂದಿದೆ.

ಕಾರಿನ ಡ್ಯಾಶ್ ಕ್ಯಾಮರಾದಿಂದ ಸೆರೆಹಿಡಿಯಲಾದ ವೀಡಿಯೊ ತುಣುಕನ್ನು ಜನವರಿ 29 ರಂದು ಪೂರ್ವ ಬೆಂಗಳೂರಿನ ನೇ ಸಿಟಿಜನ್ಸ್ ಮ್ಯಾಟರ್ ಸಾಮಾಜಿಕ ಮಾಧ್ಯಮ ಮೂಲಕ ಹಂಚಿಕೊಳ್ಳಲಾಗಿದ್ದು, ಟ್ವೀಟ್ ಪ್ರಕಾರ, ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಭೀಕರ ಘಟನೆ ನಡೆದಿದೆ. ಇನ್ನೂಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕಲಾ ಕೃಷ್ಣಸ್ವಾಮಿ, ಐಪಿಎಸ್ ಡಿಸಿಪಿ ಟ್ರಾಫಿಕ್ ಈಸ್ಟ್, “ಈ ರಸ್ತೆ ಆಕ್ರೋಶ ಸ್ವೀಕಾರಾರ್ಹವಲ್ಲ. ನಾವು ಚಾಲಕನ ನೋವು ಮತ್ತು ಚಿಂತೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ'” ಎಂದರು.

ಇದನ್ನೂ ಓದಿ : Race Bike accident: ರಸ್ತೆ ದಾಟುತ್ತಿದ್ದ ಮಹಿಳೆಗೆ ರೇಸಿಂಗ್‌ ಬೈಕ್‌ ಢಿಕ್ಕಿ: ಮಹಿಳೆ ಸಾವು, ಬೈಕ್‌ ಸವಾರ ಗಂಭೀರ ಗಾಯ

ಇದನ್ನೂ ಓದಿ : Car accident-constable death: ಅಪರಿಚಿತ ವಾಹನಕ್ಕೆ ಕಾರು ಢಿಕ್ಕಿ: ಪೊಲೀಸ್ ಪೇದೆ ಸಾವು, 3 ಮಂದಿಗೆ ಗಾಯ

ಈ ವಿಡಿಯೋವನ್ನು ಶೇರ್ ಮಾಡಿದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸರು ಕೂಡ ಕಾಮೆಂಟ್ ಮಾಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಇನ್ನೂ ಇತರ ಹಲವಾರು ಬಳಕೆದಾರರು ಕೆಳದರ್ಜೆಯ ಬೀದಿದೀಪಗಳು ಮತ್ತು ಪ್ರದೇಶದ ಜನರು ಎದುರಿಸುತ್ತಿರುವ ಇತರ ತೊಂದರೆಗಳ ಕುರಿತು ಥ್ರೆಡ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ.

Tried to extort money: Bike hit the car: Tried to extort money after threatening the driver

Comments are closed.