kidnap and kill teen for ransom : 18 ವರ್ಷದ ಯುವಕನನ್ನು ಅಪಹರಿಸಿ ಕೊಲೆ ಮಾಡಿದ ಇಬ್ಬರು ಯುವಕರು 10 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಡಲು ಪ್ಲಾನ್ ಮಾಡಿದ್ದ ಶಾಕಿಂಗ್ ಘಟನೆಯು ಉತ್ತರ ದೆಹಲಿಯ ಬುರಾರಿಯಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿಗಳಿಬ್ಬರೂ 19 ವರ್ಷ ಪ್ರಾಯದವರು ಎಂದು ತಿಳಿದುಬಂದಿದೆ. ಬಾಲಿವುಡ್ ಸಿನಿಮಾದಿಂದ ಪ್ರೇರಣೆ ಪಡೆದು ಇವರು ಈ ರೀತಿಯ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಆರೋಪಿಗಳಲ್ಲಿ ಒಬ್ಬನಾದ ಗೋಪಾಲ್ ಶೋರೂಂನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಕೊಲೆಯಾದ ರೋಹನ್ನ ಸ್ನೇಹಿತನಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜನವರು 23ರ ಸಂಜೆ ರೋಹನ್ನ್ನು ಹುಟ್ಟು ಹಬ್ಬಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಆತನನ್ನು ಅಪಹರಿಸಲಾಗಿತ್ತು.
ರೋಹನ್ನ ತಂದೆ ಮನೋಜ್ ಅದೇ ದಿನದಂದು ಪೊಲೀಸರಿಗೆ ಕರೆ ಮಾಡಿ ಪುತ್ರ ನಾಪತ್ತೆಯಾಗಿರುವ ಬಗ್ಗ ದೂರನ್ನು ದಾಖಲಿಸಿದ್ದರು.ದೂರು ನೀಡುವ ವೇಳೆಯಲ್ಲಿ ಮನೋಜ್ ಪೊಲೀಸರಿಗೆ ನನ್ನ ಪುತ್ರ 18 ವರ್ಷದ ರೋಹನ್ ಬರ್ತಡೇ ಪಾರ್ಟಿಗೆಂದು ಸ್ನೇಹಿತ ಗೋಪಾಲ್ ಜೊತೆ ತೆರಳಿದವನು ವಾಪಸ್ ಬಂದಿಲ್ಲ ಎಂದು ಹೇಳಿದ್ದರು.
ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು ರೋಹನ್ ಪತ್ತೆಗಾಗಿ ಬರೋಬ್ಬರಿ 200ಕ್ಕೂ ಅಧಿಕ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದರು. ರೋಹನ್ ಸ್ನೇಹಿತ ಗೋಪಾಲ್ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದರು. ಪೊಲೀಸರ ವಿಚಾರಣೆಯ ಸಮಯದಲ್ಲಿ ಗೋಪಾಲ್ ತಾನು ಸ್ನೇಹಿತರ ಜೊತೆ ಸೇರಿ ರೋಹನ್ನ್ನು ಅಪಹರಿಸಿ ಬಳಿಕ ಕೊಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಗೋಪಾಲ್ ವಿಚಾರಣೆಯ ವೇಳೆ ಅಪರಾಧ ಕೃತ್ಯದಲ್ಲಿ ಭಾಗಿಯಾದ ಇನ್ನಿಬ್ಬರ ಹೆಸರನ್ನೂ ಬಾಯ್ಬಿಟ್ಟಿದ್ದಾನೆ. ಗೋಪಾಲ್ ಹೇಳಿಕೆಯನ್ನು ಆಧರಿಸಿ ಪೊಲೀಸರು 19 ವರ್ಷದ ಸುಶೀಲ್ನನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಗೋಪಾಲ್ ಹೇಳಿರುವಂತೆ ಅವರು ರೋಹನ್ನ್ನು ಒಂದು ರೂಮಿಗೆ ಕರೆದುಕೊಂಡು ಹೋಗಿ ಬರ್ತ ಡೇ ಪಾರ್ಟಿ ಮಾಡಿದ್ದರು. ಬಳಿಕ ಆತನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ಇದಾದ ನಂತರ ಆತನ ಮೃತದೇಹವನ್ನು ವಿಲೇವಾರಿ ಮಾಡುವ ಬಗ್ಗೆ ನಿರ್ಧರಿಸಿದ್ದಾರೆ. ಬಳಿಕ ಹಣಕ್ಕಾಗಿ ಬೇಡಿಕೆ ಇಡುವುದು ಅವರ ಪ್ಲಾನ್ ಆಗಿತ್ತು ಎನ್ನಲಾಗಿದೆ.
Delhi: Youths, inspired by Bollywood movie, kidnap and kill teen for ransom
ಇದನ್ನು ಓದಿ : no night curfew : ಜನವರಿ 31ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದು : ಶಾಲೆಗಳು ಪುನಾರಂಭ