drugs case : ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣದ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ಬಂಧನ

drugs case : ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣ ಇನ್ನೂ ನಿಗೂಢವಾಗಿಯೇ ಇದೆ. ಮುಂಬೈ ಎನ್​ಸಿಬಿ ಈಗಾಗಲೇ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದು ಸಾಕಷ್ಟು ಸೆಲೆಬ್ರಿಟಿಗಳ ಡ್ರಗ್​ ದಂಧೆಯನ್ನೂ ಬಟಾಬಯಲಾಗಿಸಿದೆ. ಇದೀಗ ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣದ ತನಿಖೆಯಲ್ಲಿ ಮಹತ್ವದ ಬದಲಾವಣೆ ಎಂಬಂತೆ ತಲೆಮರೆಸಿಕೊಂಡಿದ್ದ ಸುಶಾಂತ್​ ಸಿಂಗ್​ ರಜಪೂತ್​​ರ ನೆರೆಮನೆಯವನಾಗಿದ್ದ ಸಾಹಿಲ್​ ಶಾ ಅಲಿಯಾಸ್​ ಫ್ಲಾಕೋವನ್ನು ಡ್ರಗ್​​ ಕೇಸ್​ನಲ್ಲಿ ಎನ್​ಸಿಬಿ ಬಂಧಿಸಿದೆ.


ಎನ್​ಸಿಬಿ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಸಾಹಿಲ್​ ಶಾ ತಾನೇ ಎನ್​ಸಿಬಿ ಎದುರು ಶರಣಾಗಿದ್ದಾರೆ ಎನ್ನಲಾಗಿದೆ. ಡ್ರಗ್​ ರಾಕೆಟ್​ನಲ್ಲಿ ಸಾಹಿಲ್​ ಶಾ ಹೆಸರು ಕೇಳಿ ಬಂದ ಬಳಿಕ ಬರೋಬ್ಬರಿ ಆರು ತಿಂಗಳುಗಳ ಕಾಲ ಈತ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಸುಶಾಂತ್​ ಸಿಂಗ್​ ರಜಪೂತ್ ಸಂಶಯಾಸ್ಪದ ಸಾವು ಪ್ರಕರಣದ ತನಿಖೆಯ ವೇಳೆ ಸಾಹಿಲ್​ ಶಾ ಹೆಸರು ಮೊದಲು ಕೇಳಿ ಬಂದಿತ್ತು. ಮುಂಬೈ ಮಲಾಡ್​ ಏರಿಯಾದಲ್ಲಿ ಸುಶಾಂತ್​ ವಾಸವಾಗಿದ್ದ ವೇಳೆಯಲ್ಲಿ ಸಾಹಿಲ್​ ಸುಶಾಂತ್​​ರ ನೆರೆಮನೆಯವರಾಗಿದ್ದರು ಎನ್ನಲಾಗಿದೆ.

ಸಾಹಿಲ್​ ಶಾ ಸಾಕಷ್ಟು ಡ್ರಗ್​ ಪೆಡ್ಲರ್​ಗಳ ಜೊತೆ ಸಂಪರ್ಕ ಹೊಂದಿದ್ದ ಹಾಗೂ ಬಾಲಿವುಡ್​ನ ಸಾಕಷ್ಟು ಜನಪ್ರಿಯ ತಾರೆಗಳಿಗೆ ಡ್ರಗ್​ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ. ನಟ ಸುಶಾಂತ್​ ಸಿಂಗ್​ ರಜಪೂತ್​​ರಿಗೂ ಈತನೇ ಡ್ರಗ್​ ಸಪ್ಲೈ ಮಾಡಿದ್ದ ಎನ್ನಲಾಗಿದೆ.

ಎನ್​ಸಿಬಿ ಈಗಾಗಲೇ ವಿಚಾರಣೆಗೆ ಒಳಪಡಿಸಿರುವ ಡ್ರಗ್​ ಪೆಡ್ಲರ್​ಗಳು ಸಾಹಿಲ್​ ಶಾ ಅಲಿಯಾಸ್​ ಫ್ಲಾಕೋ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಈತ ವಿಡಿಯೋ ಕಾಲ್​ ಮೂಲಕ ಡ್ರಗ್​ ಪೆಡ್ಲರ್​ಗಳ ಜೊತೆ ಸಂಪರ್ಕ ಸಾಧಿಸುತ್ತಿದ್ದ ಹಾಗೂ ಎಂದಿಗೂ ಮುಖವನ್ನು ಮುಚ್ಚಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಎನ್​ಸಿಬಿ ಎದುರು ಸಾಹಿಲ್​ ಶಾ ಶರಣಾಗುತ್ತಿದ್ದಂತೆಯೇ ಆತನನ್ನ ಬಂಧಿಸಲಾಗಿದೆ. ಪ್ರಸ್ತುತ ಸಾಹಿಲ್​ ಶಾ ನ್ಯಾಯಾಂಗ ಬಂಧನಲ್ಲಿದ್ದು ಎನ್​ಸಿಬಿಗೆ ಒಂದು ದಿನದ ಕಸ್ಟಡಿ ದೊರಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನು ಓದಿ : no night curfew : ಜನವರಿ 31ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ರದ್ದು : ಶಾಲೆಗಳು ಪುನಾರಂಭ

ಇದನ್ನೂ ಓದಿ : Yadiyurappa grand daughter suicide : ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು

NCB arrests Sushant Singh Rajput’s absconding neighbour in drugs case

Comments are closed.