ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 31-12-2020

ನಿತ್ಯಭವಿಷ್ಯ : 31-12-2020

- Advertisement -

ಮೇಷರಾಶಿ
ವಿನಾಕಾರಣ ಓಡಾಟದಿಂದ ಪ್ರಯಾಸ, ದೂರ ಪ್ರಯಾಣ, ಆರ್ಥಿಕ ಸಂಕಷ್ಟ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ, ಹೆಚ್ಚಿನ ಮಾನಸಿಕ ಒತ್ತಡವಿದ್ದರೂ ನಿಮ್ಮ ನೆಮ್ಮದಿಗೆ ಭಂಗ ಬರುವುದಿಲ್ಲ, ಸಾಮಾನ್ಯವಾದ ದಿನವಾಗಿರುತ್ತದೆ, ಅನಾರೋಗ್ಯದಿಂದ ಬಳಲುವವರು ವೈದ್ಯರ ಸಲಹೆ ಪಡೆಯಿರಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಕೊರತೆ.

ವೃಷಭರಾಶಿ
ಮಕ್ಕಳಿಂದ ಆರ್ಥಿಕ ಸಂಕಷ್ಟ ದೂರ, ದೇವತಾ ದರ್ಶನಕ್ಕೆ ಪ್ರಯಾಣ, ಮಿತ್ರರಿಂದ ಅನುಕೂಲ, ದೇಹಕ್ಕೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಮಕ್ಕಳಲ್ಲಿ ಪ್ರಗತಿ, ಎಲ್ಲಾ ಕಾರ್ಯಗಳಲ್ಲಿ ಸಫ‌ಲತೆ, ಯಶಸ್ಸು , ಗೌರವ, ಪ್ರಶಸಿ ಹುಡುಕಿಕೊಂಡು ಬರಲಿದೆ, ಮನೆಯಲ್ಲಿ ಪತ್ನಿ ಮಕ್ಕಳಿಂದ ಸಹಕಾರವು ಒದಗಿ ಬರುವುದು. ಕಟ್ಟಡ ಕೆಲಸದವರಿಗೆ ಸುಗ್ಗಿಯ ಕಾಲ.

ಮಿಥುನರಾಶಿ
ಉದ್ಯೋಗ ಸ್ಥಳದಲ್ಲಿ ಉಲ್ಲಾಸದ ವಾತಾವರಣ, ಪಾಲುದಾರಿಕೆ ಮತ್ತು ಸಂಗಾತಿಯಿಂದ ಧನಾಗಮನ, ಆರ್ಥಿಕ ವಿಚಾರದಲ್ಲಿ ಲಾಭಾಂಶ ಹೆಚ್ಚಳ, ಖರ್ಚಿನ ಬಗ್ಗೆ ಎಚ್ಚರ, ತಿಂಗಳ ಕೊನೆಯಲ್ಲಿ ಲೆಕ್ಕಾಚಾರ ಏರುಪೇರಾದೀತು, ನೀವು ಮಾಡುತ್ತಿರುವ ಉದ್ಯೋಗ, ವ್ಯವಹಾರದಲ್ಲಿ ಸಮಾಧಾನ ದೊರಕೀತು. ಸ್ಥಿರಾಸ್ತಿ ಮತ್ತು ವಾಹನದಿಂದ ಧನಾಗಮನ, ಕೃಷಿ ಕ್ಷೇತ್ರದವರಿಗೆ ಅನುಕೂಲ.

ಕಟಕರಾಶಿ
ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು, ಮನಸ್ಸಿಗೆ ನೋವು ತರುವ ಕೆಲವು ಘಟನೆಗಳು ನಡೆಯುವುದು, ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರುಕುಳವು ಕಂಡು ಬಂದೀತು, ಹಿರಿಯರ ಸಲಹೆ, ಸೂಚನೆಯನ್ನು ಪಾಲಿಸಿ, ಕೆಲಸ ಕಾರ್ಯಗಳಿಗಾಗಿ ಪ್ರಯಾಣ, ಸಾಲಕ್ಕಾಗಿ ಚಿಂತನೆ, ಅನಾರೋಗ್ಯ ಸಮಸ್ಯೆ, ಧರ್ಮ ಮಾರ್ಗದತ್ತ ಚಿತ್ತ, ಅಧಿಕ ಖರ್ಚು.

ಸಿಂಹರಾಶಿ
ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಮಕ್ಕಳ ಸಮಸ್ಯೆಗಳಿಗೆ ಮುಕ್ತಿ, ಅನುಕೂಲವಾದ ಸಮಯ, ನಿಮ್ಮ ಮನಸ್ಸಿಗೆ ಸವಾಲು ತಾಳ್ಮೆ ಹಾಗೂ ಸಹನೆ ಅಗತ್ಯವಿದೆ, ಹೆಚ್ಚಿನ ಒತ್ತಡಕ್ಕೆ ಗುರಿಯಾಗುವಿರಿ, ಆರೋಗ್ಯದ ಬಗ್ಗೆ ಜಾಗ್ರತೆ, ವಾಹನ ಚಾಲನೆ ಮಾಡುವಾಗ ಜಾಗ್ರತೆ, ಪುಣ್ಯಕ್ಷೇತ್ರದಲ್ಲಿ ಪೆಟ್ಟು, ದಾನ ಧರ್ಮ ಮಾಡುವ ಸಂದರ್ಭ, ಮಕ್ಕಳಿಗಾಗಿ ಅಧಿಕ ಖರ್ಚು.

ಕನ್ಯಾರಾಶಿ
ಶುಭ ಕಾರ್ಯಗಳಿಗೆ ಸೂಕ್ತ ಕಾಲ, ಸ್ನೇಹಿತರಿಂದ ಸಮಸ್ಯೆಗೆ ಪರಿಹಾರ, ತಾಯಿಯಿಂದ ಧನಾಗಮನ, ಅತಿಯಾದ ಒಳ್ಳೆಯತನದಿಂದ ನೋವು, ಹಿತಶತ್ರುಗಳು ನಿಮ್ಮ ಬೆನ್ನಿಗೆ ಇರುತ್ತಾರೆ, ಸ್ತ್ರೀ ಮೂಲಕ ಅಭಾವವು ನೀಗಲಿದೆ. ಆರ್ಥಿಕ ಸ್ಥಿತಿಯು ಪೂರಕವಾಗಿರುವುದಿಲ್ಲ, ದೂರ ಪ್ರಯಾಣವು ಕೂಡಿಬಂದೀತು, ವಿನಾ ಕಾರಣ ನಿಮ್ಮದಲ್ಲದ ತಪ್ಪಿಗೆ ದಂಡ ತೆರಬೇಕಾದೀತು.

ತುಲಾರಾಶಿ
ಆರೋಗ್ಯ ಸಮಸ್ಯೆ, ಕುಟುಂಬದಲ್ಲಿ ಸಂತಸದ ವಾತಾವರಣ ಉಂಟಾಗಲಿದೆ, ಮನೆಯಲ್ಲಿ ಶುಭ ಕಾರ್ಯಗಳು ಜರಗಲಿವೆ, ಆರೋಗ್ಯ ಉತ್ತಮವಾಗಿರುವುದು. ಮನೆ ಯಲ್ಲಿ ಸಂಭ್ರಮ, ಸಂತಸವಿರುವುದು. ಮಿತ್ರರ ಸಹಕಾರವು ದೊರಕಲಿದೆ, ಉದ್ಯೋಗ ನಿಮಿತ್ತ ದೂರ ಪ್ರಯಾಣ, ನೆರೆಹೊರೆಯವರಿಂದ ಸ್ಥಳ ಬದಲಾವಣೆ.

ವೃಶ್ಚಿಕರಾಶಿ
ಪಿತ್ರಾರ್ಜಿತ ಸಮಸ್ಯೆ ಬಗೆಹರಿಯುವುದು, ತಂದೆಯಿಂದ ಪ್ರಶಂಸೆ, ಮಕ್ಕಳ ಜೀವನ ಸುಧಾರಿಸುವುದು, ಎಲ್ಲಾ ಕೆಲಸಕಾರ್ಯಗಳಲ್ಲಿ ಸಫ‌ಲತೆಯನ್ನು ಕಾಣುವಿರಿ. ಯಶಸ್ಸು ದೊರಕುವುದು. ವ್ಯಾಪಾರ, ವ್ಯವಹಾರದಲ್ಲಿ ಲಾಭ ಉಂಟಾಗಲಿದೆ, ಅಪರಿಚಿತರಿಂದ ಉಪದ್ರವ ಕಂಡುಬರಲಿದೆ, ಸೋಮಾರಿತನವನ್ನು ತಳ್ಳಿ ಹಾಕಿರಿ. ಸಂತಾನ ದೋಷಗಳಿಗೆ ಮುಕ್ತಿ.

ಧನಸುರಾಶಿ
ಪಿತ್ರಾರ್ಜಿತ ಸಮಸ್ಯೆ ಬಗೆಹರಿಯುವುದು, ತಂದೆಯಿಂದ ಪ್ರಶಂಸೆ, ಮಕ್ಕಳ ಜೀವನ ಸುಧಾರಿಸುವುದು, ವ್ಯಾಪಾರಸ್ಥರು ಒಳ್ಳೆಯ ಲಾಭ ಗಳಿಸುವಿರಿ, ಆರೋಗ್ಯವು ಉತ್ತಮವಿದ್ದು ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ, ಆರ್ಥಿಕ ವಿಚಾರದಲ್ಲಿ ಹಿಡಿತವಿರಲಿ, ಸ್ತ್ರೀಯರ ಬಹುದಿನಗಳ ಬೇಡಿಕೆ ಈಡೇರಲಿದೆ, ಸಂತಾನ ದೋಷಗಳಿಗೆ ಮುಕ್ತಿ.

ಮಕರರಾಶಿ
ಗಂಟಲು ನೋವು, ಉಸಿರಾಟ ಸಮಸ್ಯೆ, ಅಧಿಕ ಖರ್ಚು, ಒಂದಲ್ಲಾ ಒಂದು ಒತ್ತಡವು ನಿಮ್ಮನ್ನು ಆವರಿಸುವುದರಿಂದ ಮನಸ್ಸು ಅಶಾಂತಿಯೆಡೆಗೆ ಮುಖ ಮಾಡುವುದು, ಅನಾರೋಗ್ಯದಿಂದ ಬಳಲಿಕೆ ಕಂಡುಬರಲಿದೆ, ನೀವು ಪ್ರಯತ್ನಿಸಿದ ಕೆಲಸದಲ್ಲಿ ವಿಘ್ನವಿರುತ್ತದೆ, ಪಾಲುದಾರಿಕೆಯಲ್ಲಿ ನಷ್ಟ, ಶುಭಕಾರ್ಯಗಳಿಗಾಗಿ ಪ್ರಯಾಣ.

ಕುಂಭರಾಶಿ
ಪ್ರಯಾಣ, ಒತ್ತಡದಿಂದ ಬಳಲಿಕೆ ಕಂಡುಬರಲಿದೆ, ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಪ್ರಗತಿಯ ಮುನ್ಸೂಚನೆಯ ತೋರಿಕೆ ಕಂಡುಬರಲಿದೆ, ಯಾವುದೇ ವಿಚಾರದಲ್ಲಿ ಮುನ್ನಡೆಯಲು ಸೂಕ್ತ ಸಮಯವಲ್ಲ, ಅನಿರೀಕ್ಷಿತ ಸಾಲದ ಸಹಾಯ, ಮಿತ್ರರಿಂದ ಪೊಲೀಸ್ ಸ್ಟೇಷನ್‍ಗೆ ಹೋಗುವ ಸಂದರ್ಭ, ಅತಿಯಾದ ಆಹಾರ ಸೇವನೆಯಿಂದ ಸಮಸ್ಯೆ.

ಮೀನರಾಶಿ
ಅನಗತ್ಯ ಕಾರಣಕ್ಕೆ ದುಂದುವೆಚ್ಚ ಬೇಡ, ಕುಟುಂಬದಲ್ಲಿ ಅಸಹಕಾರ ಉಂಟಾಗಲಿದೆ, ಹಲವರು ನಿಮ್ಮ ಒಳ್ಳೆತನದ ದುರುಪಯೋಗ ಮಾಡಿಕೊಳ್ಳಲಿದ್ದಾರೆ, ಕುಟುಂಬಕ್ಕೆ ಹೊಸ ಸದಸ್ಯರ ಪರಿಚಯವಾಗಲಿದೆ, ಉತ್ತಮ ಹೆಸರು, ಮಾನ ಸನ್ಮಾನ ಗೌರವ, ಉದ್ಯೋಗದಲ್ಲಿ ಬಡ್ತಿ, ಮಕ್ಕಳ ಶುಭ ಕಾರ್ಯಗಳಲ್ಲಿ ಯಶಸ್ಸು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular