ನಿತ್ಯಭವಿಷ್ಯ : 20-02-2021

ಮೇಷರಾಶಿ
ಶುಭಮಂಗಲ ಕಾರ್ಯಗಳಿಗಾಗಿ ಸಂಚಾರ, ಕೈಗೊಂಡ ಕೆಲಸ ಕಾರ್ಯಗಳು ಕೈಗೂಡಲಿದೆ, ಆರೋಗ್ಯ ವೃದ್ದಿ, ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ, ಹೊಸ ವ್ಯವಹಾರಕ್ಕೆ ಕೈ ಹಾಕುವ ಮುನ್ನ ಇರಲಿ ಎಚ್ಚರ.

ವೃಷಭರಾಶಿ
ಆಕಸ್ಮಿಕ ದೂರಸಂಚಾರ, ಮನೆಯಲ್ಲಿ ಕಿರಿಕಿರಿಯ ವಾತಾವರಣ, ವೃತ್ತಿರಂಗದಲ್ಲಿ ಮುನ್ನಡೆ ಕಂಡು ಬರಲಿದೆ, ಕ್ರೀಡಾಪಟುಗಳಿಗೆ ಯಶಸ್ಸು, ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ, ಹಿರಿಯ ಬಗ್ಗೆ ಕಾಳಜಿವಹಿಸಿ.

ಮಿಥುನರಾಶಿ
ಸಾಂಸಾರಿಕವಾಗಿ ನೆಮ್ಮದಿ, ಅವಿವಾಹಿತರಿಗೆ ವಿವಾಹ ಭಾಗ್ಯ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ ತೋರಿಬಂದರು ಯಶಸ್ಸು, ದೇವತಾ ದರ್ಶನ, ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ.

ಕಟಕರಾಶಿ
ವೈವಾಹಿಕ ಮಾತುಕತೆ ಫಲಕೊಡಲಿದೆ, ಮೇಲಾಧಿಕಾರಿಗಳಿಂದ ಮೆಚ್ಚುಗೆಯ ಮಾತನ್ನು ಕೇಳುವಿರಿ, ರಾಜಕಾರಣಿಗಳಿಗೆ ಸೂಕ್ತ ಬೆಂಬಲ ಲಭಿಸಲಿದೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಇಚ್ಚಿತ ಕಾರ್ಯ ನೆರವೇರಲಿದೆ.

ಸಿಂಹರಾಶಿ
ಆರ್ಥಿಕವಾಗಿ ಖರ್ಚುಗಳು ಕಂಡು ಬಂದರು ಆರ್ಥಿಕವಾಗಿ ಅಭಿವೃದ್ದಿ, ವಿರೋಧಿಗಳ ನಡುವಿನ ಭಿನ್ನಾಭಿಪ್ರಾಯ ಬಗೆ ಹರಿಯಲಿದೆ, ರಾಹುಬಲ ಉತ್ತಮವಿದ್ದು ಒಳ್ಳೆಯ ಫಲಗಳು ಗೋಚರಕ್ಕೆ ಬರಲಿದೆ, ಮನಸ್ಸಿಗೆ ಸಮಾಧಾನ, ಶುಭ ಸುದ್ದಿ ಕೇಳುವಿರಿ.

ಕನ್ಯಾರಾಶಿ
ಆತ್ಮವಿಶ್ವಾಸದಿಂದ ಕಾರ್ಯರಂಗದಲ್ಲಿ ಯಶಸ್ಸು, ಹಿರಿಯರೊಂದಿಗೆ ಶುಭಕಾರ್ಯಕ್ಕಾಗಿ ಸಮಾಲೋಚನೆ, ಗೃಹ ನಿರ್ಮಾಣದ ಕಾರ್ಯಗಳಲ್ಲಿ ಯಶಸ್ಸು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕಿರು ಸಂಚಾರ, ಮಕ್ಕಳಿಂದ ನೆಮ್ಮದಿ.

ತುಲಾರಾಶಿ
ಹೊಸ ಕೆಲಸ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಎಚ್ಚರ, ಆತ್ಮವಿಶ್ವಾಸದಿಂದ ಯಶಸ್ಸು, ಜಾಣ್ಮೆಯಿಂದ ಕಾರ್ಯದಲ್ಲಿ ಜಯ, ಬಂದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ, ಯಾವುದೇ ಕಾರಣಕ್ಕೂ ನಿರಾಸೆಯ ಭಾವನೆ ಬೇಡ.

ವೃಶ್ಚಿಕರಾಶಿ
ನಿಮ್ಮ ಕ್ರಿಯಾಶೀಲತೆ ವೃತ್ತಿರಂಗದಲ್ಲಿ ಯಶಸ್ಸನ್ನು ತಂದುಕೊಡಲಿದೆ, ನಿಮ್ಮಿಂದ ಒಳ್ಳೆಯ ಕಾರ್ಯಗಳು ನಡೆಯಲಿದೆ, ಪ್ರೇಮಿಗಳಿಗೆ ಉತ್ತಮ ದಿನ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ.

ಧನಸ್ಸುರಾಶಿ
ಚಿನ್ನಾಭರಣ, ಅಲಂಕಾರಿಕ ವಸ್ತುಗಳ ಖರೀದಿ, ಆರ್ಥಿಕ ಪರಿಸ್ಥಿತಿಯಲ್ಲಿ ತೊಡಕಾದರೂ ದೈವಾನುಗ್ರಹದಿಂದ ಆದಾಯ ಲಭಿಸಲಿದೆ, ಅವಿವಾಹಿತರಿಗೆ ವಿವಾಹ ಭಾಗ್ಯ, ಇಚ್ಚಿತ ಕಾರ್ಯಗಳಲ್ಲಿ ಯಶಸ್ಸು, ಪುಣ್ಯಕ್ಷೇತ್ರಗಳ ದರ್ಶನ ಮಾಡಿ.

ಮಕರರಾಶಿ
ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಎದುರಾದರೂ ಧೈರ್ಯದಿಂದ ಎದುರಿಸುವಿರಿ, ನಿರಾಸೆಯ ಮನೋಭಾವನೆಯಿಂದ ಹೊರಗೆ ಬನ್ನಿ, ವ್ಯವಹಾರಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಿ, ಪ್ರಮಾಣಿಕತೆಯಿಂದ ಯಶಸ್ಸು ಕಾಣುವಿರಿ.

ಕುಂಭರಾಶಿ
ಮಕ್ಕಳಿಂದ ನೆಮ್ಮದಿ, ವಾಹನ ಖರೀದಿ ಯೋಗ, ಅಧಿಕ ಸುತ್ತಾಟದಿಂದ ಕಾರ್ಯಾನುಕೂಲ, ವೈವಾಹಿಕ ಸಂಬಂಧಗಳಲ್ಲಿ ತೊಡಕು, ಆರ್ಥಿಕವಾಗಿ ತುಸು ನೆಮ್ಮದಿ, ಚೇತರಿಕೆಯ ದಿನ, ನ್ಯಾಯಾಲಯದ ಕಾರ್ಯಗಳಲ್ಲಿ ಧನವ್ಯಯ.

ಮೀನರಾಶಿ
ಅವಿವಾಹಿತರಿಗೆ ಹೊಸ ಸಂಬಂಧ ಕೂಡಿಬರಲಿದೆ, ವೃತ್ತಿರಂಗದಲ್ಲಿ ಸ್ಥಾನಮಾನ ಲಭ್ಯ, ಕ್ರೀಡಾಪಟುಗಳಿಗೆ ಸಮ್ಮಾನ ದೊರೆಯಲಿದೆ, ಪ್ರಯತ್ನ ಬಲದಿಂದ ಕಾರ್ಯಸಾಧನೆ, ನೂತನ ವಾಹನ ಖರೀದಿ ಲಾಭವನ್ನು ತರಲಿದೆ, ವಿದ್ಯಾರ್ಥಿಗಳಿಗೆ ಹೊಸ ಹುಮ್ಮಸ್ಸು.

Comments are closed.