ಮೇಷರಾಶಿ
ಮಕ್ಕಳಿಂದ ನಷ್ಟ, ಹೆಸರು ಕೀರ್ತಿ ಪ್ರತಿಷ್ಠೆಗೆ ತೊಂದರೆ, ಸಾಂಸಾರಿಕ ಜೀವನವು ಸಮಾಧಾನಕರ ಆದರೂ ಹೊಂದಾಣಿಕೆಯ ಅಗತ್ಯವಿರುತ್ತದೆ. ಹಿರಿಯರ ಸಲಹೆಗೆ ಕಿವಿಗೊಡಿರಿ. ಮನೆಯಲ್ಲಿ ಹಿರಿಯರಿಂದ ಸ್ವಲ್ಪ ಬೇಸರವಾದೀತು, ಅವಮಾನಗಳು ಗೌರವಕ್ಕೆ ಧಕ್ಕೆ, ನಿದ್ರಾಭಂಗ, ಆಸ್ತಿ ತೊಂದರೆಗಳು, ಪಶ್ಚಾತಾಪ, ಆರೋಗ್ಯ ವ್ಯತ್ಯಾಸ.
ವೃಷಭರಾಶಿ
ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ದುಶ್ಚಟಗಳ ದಾಸರಾಗುವಿರಿ, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಚಂಚಲತೆ, ಮಾನಸಿಕ ದೃಢತೆ ಕರಗಬಹುದು. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯು ತೋರಿ ಬರಲಿದೆ. ಚಿಂತೆಯನ್ನು ಬಿಟ್ಟುಬಿಟ್ಟರೆ ಉತ್ತಮ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಆತ್ಮಗೌರವಕ್ಕೆ ಧಕ್ಕೆ, ಆಕಸ್ಮಿಕವಾಗಿ ಉದ್ಯೋಗದಲ್ಲಿ ಪ್ರಗತಿ.

ಮಿಥುನರಾಶಿ
ಉದ್ಯೋಗ ನಿಮಿತ್ತ ಪ್ರಯಾಣ, ಕಾರ್ಯಗಳಲ್ಲಿ ಜಯ, ತಂದೆಯಿಂದ ಧನಾಗಮನ, ವೃತ್ತಿರಂಗದಲ್ಲಿ ನಿಮ್ಮ ಕಾರ್ಯಗಳು ಇತರರ ಗಮನ ಸೆಳೆಯಲಿವೆ. ವಾರಾಂತ್ಯ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ತೋರಿ ಬಂದಾವು. ಮಾತು ಹಾಗೂ ನಡೆನುಡಿಯಲ್ಲಿ ನೇರತನದಿಂದ ಎಲ್ಲರ ಮೆಚ್ಚುಗೆ ಸಿಗಲಿದೆ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ದಾಂಪತ್ಯದಲ್ಲಿ ವಿರಸ, ಅಹಂಭಾವದ ಮಾತು
ಕಟಕರಾಶಿ
ಕಾರ್ಯ ನಿಮಿತ್ತ ಪ್ರಯಾಣ, ತಂದೆಯಿಂದ ಧನಸಹಾಯ, ಅನಗತ್ಯ ವಿಚಾರಗಳಿಂದ ದೂರವಿದ್ದಷ್ಟು ಉತ್ತಮ. ನಿಮ್ಮ ಮನೋಕಾಮನೆಗಳು ಸದ್ಯದಲ್ಲೇ ಒಂದೊಂದಾಗಿ ನೆರವೇರಲಿವೆ . ಮನೆಯಲ್ಲಿ ಕುಟುಂಬದ ಹಿರಿಯ ಸದಸ್ಯರಿಂದ ಮೌನ ಹಿಂಸೆ ಅನುಭವಿಸುವಿರಿ, ಉದ್ಯೋಗ ಪ್ರಗತಿ, ಕುಟುಂಬ ಗೌರವಕ್ಕೆ ಧಕ್ಕೆ, ಶತ್ರು ದಮನ, ಮಾತಿನಿಂದ ಕಲಹ.

ಸಿಂಹರಾಶಿ
ಸ್ವಯಂಕೃತಾಪರಾಧದಿಂದ ತೊಂದರೆಗಳು, ಸಾಲಗಾರರು ಮತ್ತು ಶತ್ರುಗಳ ಚಿಂತೆ, ಆತ್ಮೀಯ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ಅವಿವಾಹಿತರಿಗೆ ನೂತನ ಸಂಬಂಧಗಳ ಬಗ್ಗೆ ಮಾತುಕತೆಯ ಫಲ ಸಿಗಲಿದೆ. ಕಿರು ಸಂಚಾರವಿದೆ, ಅಧಿಕಾರಿಗಳಿಂದ ಅವಮಾನ, ಮಕ್ಕಳಿಂದ ಆತ್ಮಗೌರವಕ್ಕೆ ಚ್ಯುತಿ, ಕುಟುಂಬದಲ್ಲಿ ಅಸಮಾಧಾನ, ಯತ್ನ ಕಾರ್ಯಗಳಲ್ಲಿ ವಿಘ್ನ, ಸ್ವಂತ ವ್ಯವಹಾರದಲ್ಲಿ ನಷ್ಟ.
ಕನ್ಯಾರಾಶಿ
ದಾಂಪತ್ಯದಲ್ಲಿ ವಿರಸ, ಮಕ್ಕಳಲ್ಲಿ ಮಂದತ್ವ, ನಿದ್ರಾಭಂಗ, ಆಸ್ತಿ ನಷ್ಟವಾಗುವ ಭೀತಿ, ವಾಹನಗಳಿಂದ ಪೆಟ್ಟು, ಬಂಧು ದ್ವೇಷದಿಂದ, ದಾಯಾದಿಗಳ ಕಲಹಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಶುಭಾಶುಭ ಫಲಗಳು ಅಷ್ಟಕ್ಕಷ್ಟೇ. ಮನೆಯಲ್ಲಿ ಮಾತಾಪಿತೃಗಳ ಆರೋಗ್ಯದ ಬಗ್ಗೆ ಚಿಂತೆ, ವಯೋವೃದ್ಧರಿಂದ ನಿಂದನೆ, ಸ್ನೇಹಿತರಿಗಾಗಿ ಅಧಿಕ ಖರ್ಚು

ತುಲಾರಾಶಿ
ಶತ್ರು ದಮನ, ಉದ್ಯೋಗ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಯತ್ನ ಕಾರ್ಯದಲ್ಲಿ ಯಶಸ್ಸು, ಖರ್ಚುಗಳ ವಿಷಯದಲ್ಲಿ ಜಾಗ್ರತೆ ಇರಲಿ. ಕೆಲವೊಂದು ವಿಚಾರಗಳ ಬಗ್ಗೆ ಗೊಂದಲಗಳು ಇರಬಹುದು. ತಾಳ್ಮೆಯಿಂದ ವ್ಯವಹರಿಸಿರಿ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಿಂದ ಸಂತಸ, ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕರಾಶಿ
ಉದ್ಯೋಗದಲ್ಲಿ ಹಿನ್ನಡೆ, ಮಕ್ಕಳಲ್ಲಿ ಅಹಂಭಾವ, ವಿದ್ಯಾರ್ಥಿಗಳು, ನಿರುದ್ಯೋಗಿಗಳು ಪ್ರಬುದ್ಧರಾಗಿ ಚಿಂತಿಸಬೇಕಾಗುತ್ತದೆ. ಕೌಟುಂಬಿಕವಾಗಿ ನಂಬಿದವರೇ ನಿಮಗೆ ಕೈ ಕೊಡುತ್ತಾರೆ. ಅನಿರೀಕ್ಷಿತವಾಗಿ ಬಂಧುಗಳ ಭೇಟಿ, ವಿದ್ಯಾಭ್ಯಾಸದಲ್ಲಿ ತೊಂದರೆ, ಗುತ್ತಿಗೆದಾರರಿಗೆ ಅನುಕೂಲ, ಸರ್ಕಾರಿ ಅಧಿಕಾರಿಗಳಿಗೆ ಲಾಭ, ವೃತ್ತಿಪರರಿಗೆ ಅನುಕೂಲ ಬಂಧುಗಳಿಂದ ಲಾಭ, ಪ್ರಯಾಣದಲ್ಲಿ ಅನುಕೂಲ.

ಧನಸ್ಸುರಾಶಿ
ಪಿತ್ರಾರ್ಜಿತ ಆಸ್ತಿ ಸಮಸ್ಯೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕೆಲಸಗಳಿಗೆ ಪ್ರಯಾಣ, ತಂದೆಯಿಂದ ಬೇಸರ, ನಿಮ್ಮ ಜೀವನಶೈಲಿ ಬದಲಾಗುವ ಪ್ರಸಂಗ ಸಂಭವಿಸಬಹುದು. ಪ್ರೀತಿ ಪಾತ್ರರೊಂದಿಗೆ ಆತ್ಮೀಯವಾಗಿ ಕಳೆಯುವಂತಾದೀತ. ಮನೆಯಲ್ಲಿ ಶುಭ ಸಮಾರಂಭಗಳ ಮುನ್ಸೂಚನೆ ಸಿಗಲಿದೆ, ಸ್ವಯಂಕೃತ ಅಪರಾಧಗಳಿಂದ ಗೌರವಕ್ಕೆ ಚ್ಯುತಿ ಅದೃಷ್ಟ ಕೈ ತಪ್ಪುವುದು.
ಮಕರರಾಶಿ
ಆಕಸ್ಮಿಕ ದೂರ ಪ್ರಯಾಣ, ಉದ್ಯೋಗ ಲಾಭ, ಅನಿರೀಕ್ಷಿತ ತೊಂದರೆಗಳು, ತಲೆಗೆ ಕಣ್ಣಿನ ಭಾಗಕ್ಕೆ ಪೆಟ್ಟು, ಸಾಂಸಾರಿಕ ಸಂಬಂಧಗಳು ನೀವು ಬಯಸಿದಂತೆ ನಡೆಯಲಿವೆ. ಗಟ್ಟಿ ಮಾಡಿಕೊಳ್ಳಿ. ಸಾಮಾಜಿಕ ಚಟುವಟಿಕೆಗಳು ಉತ್ಸಾಹದಾಯಕವಾಗಲಿವೆ. ದೈವಾನುಗ್ರಹ ಉತ್ತಮವಿದೆ, ಹೃದಯ ಸಮಸ್ಯೆ ಇರುವವರು ಎಚ್ಚರ, ಸ್ವಂತ ಉದ್ಯಮದಲ್ಲಿ ಅನುಕೂಲ

ಕುಂಭರಾಶಿ
ಆರೋಗ್ಯದಲ್ಲಿ ಏರುಪೇರು, ಸಂಗಾತಿಯಿಂದ ಧನಾಗಮನ, ಕುಟುಂಬ ಒತ್ತಡಗಳಿಂದ ನೆಮ್ಮದಿ ಭಂಗ, ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಉದಾಸೀನತೆ ಕಾಡುತ್ತದೆ. ಅವಿವಾಹಿತರಿಗೆ ಆಗಾಗ ಹಿನ್ನಡೆ ತೋರಿ ಬಂದು ನಿರಾಶಾ ಮನೋಭಾವದಿಂದ ಮನ ಮುದುಡಲಿದೆ. ಆರೋಗ್ಯದಲ್ಲಿ ಎಚ್ಚರವಿರಲಿ, ಅಧಿಕಾರಿಗಳಿಂದ ತೊಂದರೆ, ಅಹಂಭಾವ, ಆತ್ಮಗೌರವದ ಮಾತು.
ಮೀನರಾಶಿ
ಶತ್ರುಗಳಿಂದ ತೊಂದರೆ, ಗೌರವಕ್ಕೆ ಚ್ಯುತಿ, ಮಕ್ಕಳಲ್ಲಿ ಆರ್ಥಿಕ ಬೆಳವಣಿಗೆ, ಸೇವಕರಿಂದ ಕಾರ್ಯ ವಿಘ್ನ, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಹಕಾರ ಸಿಗದೆ ಬೇಸರ ತಂದೀತು. ಒಮ್ಮೊಮ್ಮೆ ಎಲ್ಲವೂ ಸರಿಯಾಗಿಲ್ಲವೆಂಬ ಮನೋಭಾವ ಅನುಭವಕ್ಕೆ ಬಂದರೂ ಸುಧಾರಿಸುವುದು ನಿಮ್ಮ ಆದ್ಯ ಕೆಲಸವಾಗಿದೆ, ಉದ್ಯೋಗ ಸ್ಥಳದಲ್ಲಿ ಹಿಂಸೆ, ಪ್ರಾಣಿಗಳಿಂದ ತೊಂದರೆ.