ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯ ಭವಿಷ್ಯ : 06-10-2020

ನಿತ್ಯ ಭವಿಷ್ಯ : 06-10-2020

- Advertisement -

ಮೇಷರಾಶಿ
ಮಂಗಲ ಕಾರ್ಯದ ಬಗ್ಗೆ ಮಾತುಕತೆ ನಡೆಯಲಿದೆ. ಭೂ ಲಾಭ, ಮನಸ್ಸಿನಲ್ಲಿ ಭಯ, ಹಿತ ಶತ್ರುಗಳಿಂದ ತೊಂದರೆ, ಅಧಿಕ ಖರ್ಚು, ಮನಸ್ತಾಪ, ಋಣಬಾಧೆ. ಸ್ವಲ್ಪ ಏರಿಳಿತ ಕಂಡು ಬಂದರೂ ಹಿಡಿದ ಕಾರ್ಯದಲ್ಲಿ ಜಯ ಗಳಿಸುವಿರಿ. ಕೋರ್ಟು ಕಚೇರಿ ವಿಚಾರದಲ್ಲಿ ಸ್ವಲ್ಪ ಹಿಂಜರಿತ ಕಂಡು ಬರಲಿದೆ. ದಿನಾಂತ್ಯ ಶುಭವಿದೆ.

ವೃಷಭರಾಶಿ
ಕೈ ಹಾಕಿದ ಕೆಲಸಗಳಲ್ಲಿ ಸ್ವಲ್ಪ ತೊಂದರೆ, ನಾನಾ ವಿಚಾರದಲ್ಲಿ ಆಸಕ್ತಿ, ಅತಿಯಾದ ನಿದ್ರೆ, ಸ್ವಜನ ವಿರೋಧ. ಆರೋಗ್ಯದಲ್ಲಿ ಒಂದೊಂದು ದಿನ ಒಂದೊಂದು ಕಷ್ಟಗಳು ಕಂಡು ಬಂದಾವು. ಆರೋಗ್ಯದ ಕುರಿತು ತುಂಬಾ ಚಿಂತೆಯಾದೀತು. ಬೇಸಾಯಗಾರರಿಗೆ ಸ್ವಲ್ಪ ತಲೆಬಿಸಿ ದಿನಗಳಿವು. ಮಂಗಲಕರ ಸುದ್ದಿ ಇರುವುದು.

ಮಿಥುನರಾಶಿ
ಉದ್ಯೋಗ ರಂಗದಲ್ಲಿ ಅಭಿವೃದ್ಧಿ ತೋರಿಬರುವುದು. ಯತ್ನ ಕಾರ್ಯ ಅನುಕೂಲ, ದುಷ್ಟ ಜನರ ಸಹವಾಸದಿಂದ ತೊಂದರೆ, ಆರೋಗ್ಯ ದಲ್ಲಿ ಚೇತರಿಕೆ, ಅಲ್ಪ ಪ್ರಗತಿ, ಕಾರ್ಯಾನುಕೂಲವು ತೋರಿ ಬರಲಿದೆ. ಮಡದಿಯ ಹಾಗೂ ಮಕ್ಕಳ ಆರೋಗ್ಯದಲ್ಲಿ ಅಭಿವೃದ್ಧಿಯು ಕಂಡುಬರುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ.

ಕಟಕರಾಶಿ
ಉದ್ಯೋಗ ರಂಗದಲ್ಲಿ ಅಭಿವೃದ್ಧಿಯು ಕಂಡು ಬರುವುದು. ದಿನೇ ದಿನೇ ಮನಸ್ಸು ಸಮಾಧಾನಗೊಳ್ಳಲಿದೆ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ಬಂಧು ಮಿತ್ರರ ಸಹಾಯ, ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯ. ಜನರ ಮಾತಿಗೆ ತಲೆಬಿಸಿ ಮಾಡಿಕೊಳ್ಳುವುದು ಬೇಡ. ಮನಸ್ಸನ್ನು ಉದ್ವೇಗಕ್ಕೆ ಕೊಡಬೇಡಿರಿ. ಶುಭವಾರ್ತೆ ಇದೆ.

ಸಿಂಹರಾಶಿ
ಸ್ಥಳ ಬದಲಾವಣೆ, ಮನಸ್ಸಿಗೆ ಸಂತೋಷ, ಕುಟುಂಬ ಸಮೇತ ಕುಲದೇವತಾ ದರ್ಶನ ಮಾಡುವಿರಿ. ಆರೋಗ್ಯದಲ್ಲಿ ಅಭಿವೃದ್ಧಿ ಕಂಡು ಬರಲಿದೆ. ಬುದ್ಧಿಯನ್ನು ಕೈಗೆ ಕೊಡಬೇಡಿರಿ. ಹಿರಿಯರೊಂದಿಗೆ ಸಮಾಧಾನದಿಂದ ವರ್ತಿಸಿರಿ. ಆಲೋಚನೆ ವಿಪರೀತ ಮಾಡ ಬೇಡಿರಿ. ನಿಮಗೆ ಮುಂದೆ ತುಂಬಾ ಶುಭವು ಕಂಡು ಬರಲಿದೆ.

ಕನ್ಯಾರಾಶಿ
ಮಂಗಲ ಕಾರ್ಯದ ನಿಮಿತ್ತ ಪ್ರವಾಸವು ಕೂಡಿ ಬರಲಿದೆ. ವ್ಯಾಪಾರದಲ್ಲಿ ಲಾಭ, ಸ್ನೇಹಿತರೊಡನೆ ವ್ಯವಹಾರದ ಮಾತುಕತೆ, ಶೀತ ಸಂಬಂಧ ರೋಗ, ಹಿತಶತ್ರುಗಳಿಂದ ತೊಂದರೆ ಎಚ್ಚರ. ಮನೆಯಲ್ಲಿ ತುಂಬಾ ಹರುಷದ ವಾತಾವರಣವಿದೆ. ಕುಟುಂಬದ ಹಿರಿಯರೊಡನೆ ಜಗಳ ಬೇಡ. ಮನೆಗೆ ಬರುವ ಹುಡುಗಿಯು ಸ್ವಲ್ಪ ಸಮಾಧಾನವನ್ನು ತಂದೀತು.

ತುಲಾರಾಶಿ
ರಾಜಕೀಯ ರಂಗದಲ್ಲಿರುವವರಿಗೆ ತುಂಬಾ ಶುಭವಿದೆ. ಯತ್ನ ಕಾರ್ಯ ಅನುಕೂಲ, ಮನಸ್ಸಿಗೆ ನೆಮ್ಮದಿ, ಬಂಧುಗಳಿಂದ ಹಿತವಚನ, ಅಲ್ಪ ಲಾಭ, ಅಧಿಕ ಖರ್ಚು. ಮೇಲಿಂದ ಮೇಲೆ ಕೆಳಗಿನಿಂದ ಹಾಗೂ ಮೇಲಿನವರಿಂದ ಒತ್ತಡಗಳು ಕಂಡುಬಂದಾವು. ಮೂರ್ಖ ಜನರ ಯಾ ಹಿತ ಶತ್ರುಗಳ ಸಹವಾಸದಿಂದ ದೂರವಿರುವುದು.

ವೃಶ್ಚಿಕರಾಶಿ
ಮನೆತುಂಬಾ ಗಲಿಬಿಲಿಯ ವಾತಾವರಣವಿರು ತ್ತದೆ. ಶತ್ರುಗಳು ಮಿತ್ರರಾಗುವ ಸುದಿನ, ಯೋಚಿಸಿ ಕೆಲಸ ಮಾಡುವುದು ಉತ್ತಮ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಹಿರಿಯರ ಮಾತಿಗೆ ವಿರೋಧ ಬೇಡ. ಎಲ್ಲರೊಂದಿಗೆ ಸಹಜವಾಗಿ ಬೆರೆತು ಆನಂದಿಸಿರಿ. ಮಂಗಲ ಕಾರ್ಯದ ಬಗ್ಗೆ ಚಿಂತನ, ಮಂಥನ ನಡೆಯಲಿದೆ. ಶುಭವಿದೆ.

ಧನಸ್ಸುರಾಶಿ
ಕುಟುಂಬ ಸೌಖ್ಯ, ನೆಮ್ಮದಿಯ ವಾತಾವರಣ, ಮಹಿಳೆಯರಿಗೆ ಕೆಲಸದ ಒತ್ತಡ, ವಾದ ವಿವಾದಗಳಿಂದ ದೂರವಿರಿ. ಕಾರ್ಯರಂಗ ಹಾಗೂ ವಿದ್ಯಾರಂಗದಲ್ಲಿ ಏಳಿಗೆಯು ಕಂಡು ಬರಲಿದೆ. ಮನಸ್ಸು ವಿಚಲಿತಗೊಳಿಸು ವುದು. ಅತಿಥಿಗಳ ಆಗಮನವು ಸಂತಸ ತಂದೀತು. ಪ್ರವಾಸವನ್ನು ಕೈಗೊಳ್ಳುವಿರಿ. ಖರ್ಚುವೆಚ್ಚದಲ್ಲಿ ಹಿಡಿತವಿರಲಿ.

ಮಕರರಾಶಿ
ಮಂಗಲ ಕಾರ್ಯ ಯಾ ಗೃಹ ಕೃತ್ಯದಲ್ಲಿ ಸ್ವಲ್ಪ ಸಹನೆ ಮಾಡಿದರೆ ಉತ್ತಮ. ಬರಬೇಕಾದ ಬಾಕಿ ಹಣ ಕೈ ಸೇರುತ್ತೆ, ಉದ್ಯೋಗದಲ್ಲಿ ಬಡ್ತಿ, ಪ್ರಯಾಣದಿಂದ ತೊಂದರೆ. ಪತ್ನಿಯಿಂದ ಕಿರಿಕಿರಿಯು ತೋರಿ ಬಂದರೂ ಮನಸ್ಸು ಮುದಗೊಂಡೀತು. ಗೃಹ ಖರೀದಿಯ ಬಗ್ಗೆ ಖರ್ಚು ವೆಚ್ಚಗಳಿಂದ ತಲೆ ಬಿಸಿಯಾದೀತು.

ಕುಂಭರಾಶಿ
ಕೋರ್ಟ್ ಕೆಲಸಗಳಲ್ಲಿ ಜಯ, ಧಾನ ಧರ್ಮದಲ್ಲಿ ಆಸಕ್ತಿ, ಸ್ಥಿರಾಸ್ತಿ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಡದಿಯ ಮುನಿಸು ಕಂಡು ಬಂದರೂ ಸಮಾಧಾನದಿಂದ ಮೌನವಾಗಿರುವುದೇ ಲೇಸು. ಜಾಣ್ಮೆಯಿಂದ ಪರಿಹರಿಸಿಕೊಳ್ಳಿರಿ. ಮಕ್ಕಳು ಹಾಗೂ ಕುಟುಂಬದ ಸದಸ್ಯರು ಆಗಮಿಸಿಯಾರು. ಕಿರು ಸಂಚಾರವಿರುತ್ತದೆ .

ಮೀನರಾಶಿ
ನೆಂಟಸ್ತಿಕೆಯು ಕಂಡು ಬರಲಿದೆ. ಅನ್ಯ ಜನರಲ್ಲಿ ವೈಮನಸ್ಸು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅನಾರೋಗ್ಯ, ಆಭರಣ ಖರೀದಿ. ಸ್ವಲ್ಪ ಪ್ರಯತ್ನದ ಅಗತ್ಯತೆ ಇರುತ್ತದೆ. ಗೆಳೆಯರೊಂದಿಗೆ ಸಂತಸ ಅನುಭವಿಸುವಿರಿ. ಸ್ನೇಹಕ್ಕೆ ಅಂತರವಿಟ್ಟುಕೊಳ್ಳುವಿರಿ. ಆರ್ಥಿಕರಂಗದಲ್ಲಿ ಅಭಿವೃದ್ಧಿಯು ಕಂಡು ಬರಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular