ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 01-08-2020

ನಿತ್ಯಭವಿಷ್ಯ : 01-08-2020

- Advertisement -

ಮೇಷರಾಶಿ
ಮನೆಯಲ್ಲಿ ಅನುಕೂಲಕರ ವಾತಾವರಣ, ದೇವತಾ ಕಾರ್ಯಗಳಿಗೆ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳಿರುತ್ತವೆ. ದೂರದ ಬಂಧುಗಳ ಆಗಮನದಿಂದ ಕಿರಿಕಿರಿ, ಉದ್ಯೋಗರಂಗದಲ್ಲಿ ಅನಿರೀಕ್ಷಿತ ಲಾಭವಿದೆ. ನಿರೀಕ್ಷಿತ ಮನೋಕಾಮನೆಗಳು ಒಂದೊಂದಾಗಿ ನೆರವೇರಿ ಸಂತೋಷ ನೀಡುವುದು.

ವೃಷಭರಾಶಿ
ಸಾಂಸಾರಿಕವಾಗಿ ಹಿರಿಯರ ಮಾರ್ಗದರ್ಶನ ಸೂಕ್ತ ಸಲಹೆಗಳು ಕಾರ್ಯಾನುಕೂಲಕ್ಕೆ ಉಪಯುಕ್ತ ವಾಗಲಿವೆ. ಬರುವ ಆದಾಯದ ಪ್ರಮಾಣದಲ್ಲಿ ಏರಿಕೆ, ಹೊಸ ಕಾರ್ಯಯೋಜನೆಗಳಿಗೆ ಚಾಲನೆ ದೊರೆಯಲಿದೆ. ವಿದ್ಯಾರ್ಥಿಗಳ ಕುಶಲತೆಗೆ ಉತ್ತಮ ಫ‌ಲಿತಾಂಶ ಹಾಗೂ ಅವಕಾಶಗಳು ಒದಗಿ ಬಂದಾವು. ಮುಂದುವರಿಯಿರಿ.

ಮಿಥುನರಾಶಿ
ಮನಸ್ಸಿನ ನೆಮ್ಮದಿ ಕಡಿಮೆಯಾಗಲಿದೆ. ದಿಢೀರ್ ದುಡ್ಡು ಸಂಪಾದಿಸುವ ಋಣಾತ್ಮಕ ದಾರಿಗಳ ಕಡೆಗೆ ಆಸಕ್ತಿ ತೋರಿಸಬೇಡಿ. ಆರ್ಥಿಕ ಅಡಚಣೆಗಳಿಂದ ಪಾರಾಗಲು ಉತ್ತಮ ಆದಾಯದ ಮೂಲವನ್ನು ಕಂಡುಕೊಳ್ಳಬೇಕಾಗುತ್ತದೆ. ತುಸು ಜಾಗ್ರತೆ ಇರಲಿ. ಆರೋಗ್ಯಕ್ಕೆ ಆಗಾಗ ತಪಸಾಣೆ ಅಗತ್ಯವಿರುತ್ತದೆ. ಶುಭವಾರ್ತೆ.

ಕಟಕರಾಶಿ
ವೃತ್ತಿರಂಗದಲ್ಲಿ ಇತರರೊಂದಿಗೆ ಹೊಂದಾಣಿಕೆಯ ಕೊರತೆ ಕಾಣಿಸಬಹುದು. ತಾಳ್ಮೆ ಸಮಾಧಾನ ವಿರಲಿ. ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕಾರ್ಯೋನ್ಮುಖರಾಗಿ ಮನ್ನಣೆ ಗಳಿಸುವಿರಿ. ಕೆಲವೊಂದು ಸ್ಥಗಿತಗೊಂಡ ಕಾರ್ಯಗಳಿಗೆ ಚಾಲನೆ ದೊರಕಲಿದೆ. ವಿದ್ಯಾರ್ಥಿಗಳಿಗೆ ಜಯದ ನಿರೀಕ್ಷೆ ಆಶಾದಾಯಕವಾಗಲಿದೆ.

ಸಿಂಹರಾಶಿ
ಅನ್ಯರ ಮಾತಿನಿಂದ ಅನಾವಶ್ಯಕ ತಪ್ಪು ಅಭಿಪ್ರಾಯ ಬಂದೀತು. ಸಂಗಾತಿಯ ಜತೆಗೆ ಭಿನ್ನಾಭಿಪ್ರಾಯಗಳು ತಲೆದೋರುವ ಸಾಧ್ಯತೆಗಳು ಹೆಚ್ಚಾಗಿವೆ. ಸಾಧ್ಯವಾದಷ್ಟು ತಾಳ್ಮೆ ಇರಲಿ. ರಾಜಕೀಯ ವರ್ಗದವರಿಗೆ ಅನಿರೀಕ್ಷಿತ ಸ್ಥಾನಮಾನ ದೊರಕಲಿದೆ. ದೇವತಾ ಕಾರ್ಯಗಳಿಂದ ಪುಣ್ಯ ಸಂಪಾದನೆಯ ಸಲಹೆ ವೈದಿಕರಿಂದ ಬಂದೀತು.

ಕನ್ಯಾರಾಶಿ
ವ್ಯಾಪಾರಿ ವರ್ಗದವರಿಗೆ ತಮ್ಮ ವ್ಯವಹಾರದಲ್ಲಿ ಹೆಚ್ಚಿನ ಸ್ಪರ್ಧೆ ಎದುರಿಸಬೇಕಾಗುತ್ತದೆ. ಹಲ್ಲುನೋವು ಅಥವಾ ಹೊಟ್ಟೆನೋವಿನಿಂದಾಗಿ
ಚಿಂತೆಪಡುವ ಹಾಗಾದೀತು. ತಜ್ಞ ವೈದ್ಯರ ಮಾರ್ಗದರ್ಶನ ಪಡೆಯಿರಿ. ಧನಾದಾಯ ಉತ್ತಮವಿದ್ದರೂ ಖರ್ಚುವೆಚ್ಚಗಳು ನಿಲ್ಲವು. ಹಿತೈಷಿಗಳಿಂದ ಸಹಕಾರವು ಮನಸ್ಸಿಗೆ ನೆಮ್ಮದಿ ತರಲಿದೆ. ಆರೋಗ್ಯ ಜಾಗ್ರತೆ.

ತುಲಾರಾಶಿ
ನಿಮ್ಮ ಧೈರ್ಯ, ಸಾಹಸಗಳಿಂದಾಗಿ ಒಳಿತಿನ ವಿಚಾರಗಳಿಗೆ ಯೋಗ್ಯವಾದ ದೊಡ್ಡ ದಾರಿಯೇ ಕಾಣಸಿಗಲಿದೆ.ಸಾಂಸಾರಿಕವಾಗಿ ಸಮಸ್ಯೆಗಳನ್ನು ಬದಿಗೊತ್ತಿ ದೃಢ ಮನಸ್ಸಿನಿಂದ ಮುನ್ನಡೆಯಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಋಣಬಾಧೆ ಆತಂಕ ತಂದೀತು. ದೇಹಾರೋಗ್ಯವು ಸುಧಾರಿಸಿದೆ. ಕಿರಿಕಿರಿಯು ತಪ್ಪಲಾರದು. ಗಮನವಿರಲಿ.

ವೃಶ್ಚಿಕರಾಶಿ
ಕೆಲಸದ ಸ್ಥಳದಲ್ಲಿ ನೀವು ಸಕಾರಾತ್ಮಕ ಯೋಚನೆಗಳಿಂದ ಯಶಸ್ಸನ್ನು ಪಡೆಯುವಿರಿ. ಪ್ರೇಮಿಗಳ ಪ್ರೇಮಾಂಕುರ ಅರಳಲಿದೆ. ನಿರುದ್ಯೋಗಿಗಳು ಉದ್ಯೋಗ ಭಾಗ್ಯವನ್ನು ಹೊಂದಿಯಾರು. ಹಿರಿಯ ವರ್ಗದವರಿಗೆ ಸಮಾಜದಲ್ಲಿ ಪ್ರತಿಷ್ಠೆ. ಗೌರವಗಳು ದೊರೆಯಲಿವೆ. ಹಿರಿಯರ ಮೆಚ್ಚುಗೆಯಿದೆ. ಕೃಷಿಕಾರ್ಯವು ಉತ್ಸಾಹದಿಂದ ಮುನ್ನಡೆದೀತು.

ಧನುರಾಶಿ
ಎಷ್ಟೇ ಜಾಗ್ರತೆ ಮಾಡಿದರೂ ಹಿತಶತ್ರುಗಳ ಬಾಧೆ ಅನುಭವಕ್ಕೆ ಬರಲಿದೆ. ವಿನೂತನ ಕಾರ್ಯವಿಧಾನಗಳಿಂದ ನಿಮಗೆ ಪ್ರಶಂಸೆ, ಲಾಭಗಳೆಲ್ಲ ಕೈಗೂಡಿ ಬರಲಿವೆ. ಶನಿದೇವನನ್ನು ಸ್ತುತಿಸಿ. ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಹೆಚ್ಚಿನ ಕಾಳಜಿ ವಹಿಸಿರಿ. ದೇವತಾ ಕಾರ್ಯಗಳು ಮನಸ್ಸಿಗೆ ನೆಮ್ಮದಿ ತಂದು ಕೊಡಲಿವೆ.

ಮಕರರಾಶಿ
ಹಂತ ಹಂತವಾಗಿ ಸಮಸ್ಯೆಗಳು ಕಡಿಮೆಯಾಗಲಿವೆ. ಅತಿ ಆದರ್ಶಗಳನ್ನು ಪಾಲಿಸುವ ನಿಮ್ಮ ಸಜ್ಜನಿಕೆಯನ್ನು ಜನ ದುರುಪಯೋಗ ಪಡಿಸಿಕೊಂಡಾರು. ಜಾಗ್ರತೆ. ಕೆಲವೊಮ್ಮೆ ಅದೃಷ್ಟದ ಆಸರೆಯು ಗೋಚರಕ್ಕೆ ಬರಲಿದೆ. ಸಾಂಸಾರಿಕವಾಗಿ ಹೊಂದಾಣಿಕೆಯು ಗಟ್ಟಿಯಾಗಿರಲಿ. ಆರ್ಥಿಕತೆ‌ ನಿಮ್ಮನ್ನು ಹೊಂದಿಕೊಂಡು ಇರುತ್ತದೆ.

ಕುಂಭರಾಶಿ
ವಿಲಾಸಿ ವಸ್ತುಗಳ ಖರೀದಿ, ಒಡವೆ ವಸ್ತುಗಳ ಖರೀದಿಯಿಂದ ಗೃಹಿಣಿಗೆ ಸಂಭ್ರಮ ದೊರಕೀತು. ಯಾರನ್ನೂ ಲಘುವಾಗಿ ಭಾವಿಸದಿರಿ.
ಇದರಿಂದ ನಿಮ್ಮ ಸಂಕಲ್ಪಕ್ಕೆ ವಿಶೇಷ ಮಹತ್ವವೊಂದು ಒದಗಲಿದೆ.ಸದ್ಯಕ್ಕೆ ದೂರ ಸಂಚಾರವು ಉತ್ತಮವಲ್ಲ, ನಿಮ್ಮ ಅಭಿವೃದ್ಧಿಗೆ ಹಿತಶತ್ರುಗಳು ಅಸೂಯೆಪಡುವರು.

ಮೀನರಾಶಿ
ಪ್ರಯತ್ನ ಬಲದಲ್ಲೇ ಕಾರ್ಯಸಾಧನೆಯಾಗಲಿದೆ. ಅನೇಕ ಸಮಸ್ಯೆಗಳನ್ನು ಬಹು ಬೇಗನೆ ನಿಮ್ಮ ಚಾತುರ್ಯದಿಂದ ನಿವಾರಿಸಿ ಯಶಸ್ಸನ್ನು
ಪಡೆದುಕೊಳ್ಳಲಿದ್ದೀರಿ. ಕಾರ್ಯರಂಗದಲ್ಲಿ ಹಿತಶತ್ರುಗಳು ಹಿನ್ನಡೆ ತಂದಾರು. ನಿಮ್ಮ ಪ್ರಯತ್ನಬಲ ಮುನ್ನಡೆಗೆ ಸಾಧಕವಾಗುತ್ತದೆ. ಅನ್ಯರ ಮಾತು ಅನಾವಶ್ಯಕವಾಗಿ ಬೇಸರ ಮಾಡಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular