ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 16-09-2020

ನಿತ್ಯಭವಿಷ್ಯ : 16-09-2020

- Advertisement -

ಮೇಷರಾಶಿ
ಮಾನಸಿಕ ಒತ್ತಡ, ಯತ್ನ ಕಾರ್ಯಗಳಲ್ಲಿ ಜಯ, ದೂರ ಪ್ರಯಾಣ, ಅನ್ಯರಲ್ಲಿ ದ್ವೇಷ, ನಿಮ್ಮ ಎಲ್ಲಾ ಕೆಲಸಕಾರ್ಯಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಿರಿ. ಧೈರ್ಯಂ ಸರ್ವತ್ರ ಸಾಧನಂ ಅಂದ ಹಾಗೆ ಆತ್ಮವಿಶ್ವಾಸದಿಂದ ಮುನ್ನಡೆಯುವುದು. ನಿಮ್ಮ ಹಿರಿಯರ ಮಾತಿಗೆ ನೀವು ಬೆಂಬಲ, ಗೌರವ ಕೊಡಿರಿ.

ವೃಷಭರಾಶಿ
ನೀವು ಗ್ರಹಿಸಿದ ಕೆಲಸ, ಕಾರ್ಯಗಳಲ್ಲಿ ಜಯ ಸಾಧಿಸುವಿರಿ. : ಶೀತ ಸಂಬಂಧ ರೋಗಗಳು, ಅನಾರೋಗ್ಯ, ಪಾಪಬುದ್ಧಿ, ಧನ ನಷ್ಟ, ಕೋಪ ಜಾಸ್ತಿ. ಈ ದಿನ ನಿಮ್ಮ ಎಣಿಕೆಯಂತೆ ನಡೆಯುವುದು. ಆರೋಗ್ಯದಲ್ಲಿ ಅಭಿವೃದ್ಧಿಯು ತೋರಿ ಬಂದು ಸಮಾಧಾನವಾದೀತು. ಅರ್ಧಕ್ಕೆ ನಿಂತ ಕಾರ್ಯಕ್ಕೆ ಚಾಲನೆ.

ಮಿಥುನರಾಶಿ
ಪ್ರಯತ್ನಬಲದಿಂದ ಮುಂದುವರಿಯುವ ನಿಮಗೆ ಜಯವು ಲಭಿಸಲಿದೆ. ಸ್ತ್ರೀ ಸಂಬಂಧಗಳಿಂದ ಮನಸ್ಸಿಗೆ ಚಿಂತೆ, ಶತ್ರು ಭಾದೆ, ಅಧಿಕಾರಿಗಳನ್ನು ತೊಂದರೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿರಿ. ನಿಮ್ಮ ಛಲವು ನಿಮ್ಮನ್ನು ಮುಂದಕ್ಕೆ ಕರೆದೊಯ್ಯಲಿದೆ. ಕಿರು ಸಂಚಾರವಿದೆ.

ಕಟಕರಾಶಿ
ನಿಮ್ಮ ಜೀವನದಲ್ಲಿ ತಾಳ್ಮೆ ಸಹನೆಯ ಅಗತ್ಯವಿದೆ. ಸಿಟ್ಟು ಸಿಡುಕನ್ನು ಸ್ವಲ್ಪ ಬಿಟ್ಟುಬಿಟ್ಟರೆ ನಿಮ್ಮ ಹಾದಿ ಸುಗಮವಾದೀತು. ಪತಿ ಪತ್ನಿಯರಲ್ಲಿ ಪ್ರೀತಿ-ವಾತ್ಸಲ್ಯ, ಶ್ರಮಕ್ಕೆ ತಕ್ಕ ಫಲ, ಮನ ಶಾಂತಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಹಿರಿಯರೊಂದಿಗೆ ಮನಬಿಚ್ಚಿ ಮಾತಾನಾಡಿದರೆ ಒಳಿತು. ಸಾಫ‌ಲ್ಯ ಕಾಣುವಿರಿ.

ಸಿಂಹರಾಶಿ
ಕೌಟುಂಬಿಕವಾಗಿ ಮನೆ ಸದಸ್ಯರ ಅನಾರೋಗ್ಯದಿಂದ ತುಂಬಾ ಬಳಲುವಿರಿ. ಆದರೆ ಚಿಂತೆ ಮಾಡಿ ಮನ ಶಾಂತಿ, ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿಗೆ ಮರುಳಾಗಬೇಡಿ. ಪ್ರಯೋಜನವಿಲ್ಲ. ನಿಮ್ಮ ಕರ್ತವ್ಯವನ್ನು ಮನಪೂರ್ವಕವಾಗಿ ಮಾಡಿರಿ. ದೈವ ಬೆಂಬಲವು ಸಿಗುವುದು.

ಕನ್ಯಾರಾಶಿ
ನಿಮ್ಮ ಸಹೋದ್ಯೋಗಿಗಳಿಂದ ಕಿರುಕುಳ ಹಾಗೂ ತಾತ್ಸಾರವು ಕಂಡು ಬಂದು ಮನಸ್ಸು ರೋಸಿ ಹೋಗಲಿದೆ. ಅದರೂ ದೈವಾನುಗ್ರಹವು ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಉತ್ತಮ ವಿರುತ್ತದೆ. ಖರ್ಚಿನಲ್ಲಿ ನಿಗಾವಹಿಸಿರಿ. ದೇವತಾ ಕಾರ್ಯಗಳಲ್ಲಿ ಭಾಗಿ, ವಾದ ವಿವಾದಗಳಿಂದ ದೂರವಿರಿ, ಅಮೂಲ್ಯ ವಸ್ತುಗಳ ಖರೀದಿ.

ತುಲಾರಾಶಿ
ಕೇವಲ ದೈವವನ್ನು ದೂರುವುದ ಬೇಡ. ಪ್ರಾರಬ್ಧ ಕರ್ಮ ಬೆಂಬಿಡದೆ ಬರುವುದು. ನೆಮ್ಮದಿ ಇಲ್ಲದ ಜೀವನ, ಹಣ ವ್ಯಯ, ಆಲಸ್ಯ ಮನೋಭಾವ. ಆದರೂ ಧೈರ್ಯದಿಂದ ಮುಂದುವರಿಯಿರಿ. ಗೃಹ ಸಾಲ ಪಾವತಿಗಾಗಿ ಸ್ವಲ್ಪ ಪರದಾಟ ಕಂಡು ಬಂದೀತು. ಶುಭವಿದೆ.

ವೃಶ್ಚಿಕರಾಶಿ
ಬೆನ್ನು, ಸೊಂಟ ನೋವು ತೋರಿ ಬಂದು ಕಿರಿಕಿರಿ ಎನಿಸಲಿದೆ. ಕುಲದೇವರ ಆರಾಧನೆಯಿಂದ ನೆಮ್ಮದಿ, ಸಾಲಭಾದೆ, ಕೆಲಸಕಾರ್ಯಗಳಲ್ಲಿ ವಿಳಂಬ, ಅಧಿಕ ಖರ್ಚು. ವೈದ್ಯರ ತಪಾಸಣೆಯ ಅಗತ್ಯ ವಿರುತ್ತದೆ. ಅನಿರೀಕ್ಷಿತವಾಗಿ ಮಿತ್ರರ ಭೇಟಿ ಇದ್ದೀತು. ಸಹಾಯಹಸ್ತ ಒದಗಿ ಬರಲಿದೆ. ಪುತ್ರನ ಭೇಟಿಯಿಂದ ಸಂತಸ.

ಧನುರಾಶಿ
ಸಹೋದ್ಯೋಗಿ ಹಾಗೂ ಗುರುಹಿರಿಯರೊಡನೆ ಮುಕ್ತವಾಗಿ ಮಾತುಕತೆ ಮಾಡಿರಿ. ಆಪ್ತರಿಂದ ಸಹಾಯ, ತೀರ್ಥಕ್ಷೇತ್ರ ದರ್ಶನ, ಸ್ಥಳ ಬದಲಾವಣೆ, ಆಕಸ್ಮಿಕ ಧನಲಾಭ. ಎಲ್ಲರನ್ನೂ ಆಕರ್ಷಿಸುವ ವ್ಯಕ್ತಿತ್ವ ನಿಮ್ಮದಾಗಿರುತ್ತದೆ. ನೇರ ಹಾಗೂ ದಿಟ್ಟ ನಡತೆ ಎಲ್ಲರನ್ನು ಮೆಚ್ಚಿಸಲಿದೆ. ದಿನಾಂತ್ಯ ಶುಭವಿದೆ.

ಮಕರರಾಶಿ
ಭೂಮಿ ಖರೀದಿಸುವಿರಿ, ಮನಶಾಂತಿ, ವ್ಯಾಸಂಗದಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ. ವೃತ್ತಿರಂಗದಲ್ಲಿ ಎಚ್ಚರದ ನಡೆ ನಿಮ್ಮದಾಗಿರಲಿ. ಹಿತಶತ್ರುಗಳು ನಿಮ್ಮನ್ನು ಗಮನಿಸಿಯಾರು. ನೀವು ಕೈಗೊಂಡ ಕಾರ್ಯದಲ್ಲಿ ವಿಳಂಬತೆ ಕಂಡು ಬಂದರೂ ಆಗುವುದು. ಸಾಲಕ್ಕಾಗಿ ಪರದಾಟವು ಇರುತ್ತದೆ.

ಕುಂಭರಾಶಿ
ಉತ್ತಮ ದೈವಾನುಗ್ರಹವಿರುವ ನಿಮಗೆ ವೃತ್ತಿರಂಗದಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ವಾಹನದಿಂದ ಅಪಘಾತ ಎಚ್ಚರ. ಆರ್ಥಿಕವಾಗಿ ಉತ್ತಮ ಲಾಭ ವಿರುತ್ತದೆ. ಪತ್ನಿ, ಮಕ್ಕಳಿಂದ ಹಿತ ನುಡಿ ಹಾಗೂ ಆಶ್ವಾಸನೆ ಲಭಿಸಲಿದೆ. ಶುಭವಿದೆ.

ಮೀನರಾಶಿ
ಕೌಟುಂಬಿಕ ತಂದೆ ತಾಯಿಯ ಉಪದೇಶವು ನಿಮಗೆ ಸರಿ ಅನ್ನಿಸದಿದ್ದರೂ ಅಲಿಸಿರಿ. ಮುಂದೆ ಒಳ್ಳೆಯದಾಗಲಿದೆ. ನಿಷ್ಠುರ ಮಾಡಿಕೊಳ್ಳದಿರಿ. ನಿಮ್ಮ ಭವಿಷ್ಯದ ಬಗ್ಗೆ ಸ್ವಲ್ಪ ಚಿಂತಿಸಿರಿ. ಉದ್ವೇಗಬೇಡ. ಕುಟುಂಬ ಮುಖ್ಯಸ್ಥರಿಂದ ಬೋಧನೆ, ಮಾತಿನ ಚಕಮಕಿ, ಮಹಿಳೆಯರಿಗೆ ಶುಭದಿನ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular