ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ : ಇಂದು ಸಿಸಿಬಿ ಮುಂದೆ ಹಾಜರಾಗ್ತಾರೆ ದಿಗಂತ್ -ಐಂದ್ರಿತಾ

0

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ಗೆ ಸಂಕಷ್ಟ ಎದುರಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸ್ಟಾರ್ ದಂಪತಿಗಳಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ದಿಗಂತ್ ಹಾಗೂ ಐಂದ್ರಿತಾ ದಂಪತಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಡ್ರಗ್ಸ್ ಮಾಫಿಯಾ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕ್ಷಣಕ್ಕೊಬ್ಬರ ಹೆಸರು ಕೇಳಿಬರುತ್ತಿದೆ. ನಟಿ ರಾಗಿಣಿ ದ್ವಿವೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ರೆ, ನಟ ಸಂಜನಾ ಸಿಸಿಬಿ ಕಸ್ಟಡಿಯಲ್ಲಿದ್ದಾರೆ. ಮಾತ್ರವಲ್ಲ ಈಗಾಗಲೇ ಹಲವು ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ನಡುವಲ್ಲದೇ ಇದೀಗ ಕನ್ನಡ ಸ್ಟಾರ್ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಗೆ ಕೂಡ ಡ್ರಗ್ಸ್ ದಂಧೆ ಉರುಳಾಗುವ ಸಾಧ್ಯತೆಯಿದೆ. ಡ್ರಗ್ ಪೆಡ್ಲರ್ ವೀರೇನ್ ಖನ್ನಾ ಸಿಸಿಬಿ ವಿಚಾರಣೆಯ ವೇಳೆಯಲ್ಲಿ ನಟಿ ಐಂದ್ರಿತಾ ರೇ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಮಾತ್ರವಲ್ಲ ಪಾರ್ಟಿಯಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಜೊತೆಗೆ ಐಂದ್ರಿತಾ ರೇ ಕೂಡ ಭಾಗಿಯಾಗಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲೀಗ ದಿಗಂತ್ ಹಾಗೂ ಐಂದ್ರಿತಾ ರೇ ಅವರನ್ನು ಇಂದು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಸ್ಟಾರ್ ದಂಪತಿ ಈಗಾಗಲೇ ಕೇರಳದಲ್ಲಿ ಪ್ರವಾಸದಲ್ಲಿದ್ದು, ಮೊಬೈಲ್ ಮೂಲಕ ನೋಟಿಸ್ ಸಿಕ್ಕಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಇಂದು 11 ಗಂಟೆಗೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುತ್ತಿರುವುದಾಗಿಯೂ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಪ್ರಕರಣದ ತನಿಖೆ ಸಂಪೂರ್ಣ ಸಹಕಾರವನ್ನು ನೀಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.
ನಟ ದಿಗಂತ್ ಹಾಗೂ ನಟಿ ಐಂದ್ರಿತಾ ವಿಚಾರಣೆಯ ವೇಳೆಯಲ್ಲಿ ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ಇನ್ನಷ್ಟು ಕರಾಳತೆ ಅನಾವರಣವಾಗುವ ಸಾಧ್ಯತೆಯಿದ್ದು, ಇನ್ನಷ್ಟು ಮಂದಿಯ ಹೆಸರು ಬಹಿರಂಗವಾಗುವ ಸಾಧ್ಯತೆಯಿದೆ. ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು, ರಾಜಕಾರಣಿಗಳ ಮಕ್ಕಳು, ಸ್ಟಾರ್ ನಿರ್ದೇಶಕರು, ನಿರ್ಮಾಪಕರು ಕೂಡ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿಯೇ ಸಿಸಿಬಿ ಅಧಿಕಾರಿಗಳು ಸ್ಟಾರ್ ದಂಪತಿಗಳನ್ನು ಸುದೀರ್ಘ ಅವಧಿಯವರೆಗೂ ವಿಚಾರಣೆಗೆ ಒಳಪಡಿಸುವುದರ ಜೊತೆಗೆ ಇಬ್ಬರನ್ನೂ ಕೂಡ ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ

Leave A Reply

Your email address will not be published.