ಮೇಷರಾಶಿ
ಕಾರ್ಯರಂಗದಲ್ಲಿ ಕಠಿಣ ಸವಾಲುಗಳಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನೂತನ ವಸ್ತುಗಳ ಖರೀದಿ, ಪ್ರಯತ್ನದಿಂದ ಕಾರ್ಯ ಸಿದ್ಧಿ, ಮನಸ್ಸಿಗೆ ನೆಮ್ಮದಿ, ಯಂತ್ರೋಪಕರಣಗಳಿಂದ ಲಾಭ, ಮಿತ್ರರ ಭೇಟಿ, ಗಣ್ಯ ವ್ಯಕ್ತಿಗಳ ಪರಿಚಯ. ಗೃಹದಲ್ಲಿ ಮಡದಿಯ ಸಹಕಾರ ಪ್ರೀತಿ, ವಿಶ್ವಾಸ ನಿಮಗೆ ನೆಮ್ಮದಿಯನ್ನು ತರಲಿದೆ. ಆರ್ಥಿಕವಾಗಿ ವ್ಯವಹಾರದಲ್ಲಿ ಚೇತರಿಕೆ ಇರುತ್ತದೆ.
ವೃಷಭರಾಶಿ
ಕೌಟುಂಬಿಕವಾಗಿ ಆಗಾಗ ಖರ್ಚುವೆಚ್ಚಗಳು ಅಧಿಕವಾದಾವು. ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ರಿಯಾಯಿತಿ ವಸ್ತುಗಳಿಗೆ ಬೇಡಿಕೆ, ಅಧಿಕ ಖರ್ಚು, ಷೇರು ವ್ಯವಹಾರದಲ್ಲಿ ಲಾಭ, ದುಷ್ಟರಿಂದ ತೊಂದರೆ. ಕಂಕಣಬಲಕ್ಕಾಗಿ ಯುವಕರು ಹೆಚ್ಚಿನ ಪ್ರಯತ್ನ ಮಾಡಬೇಕಾದೀತು. ಆರೋಗ್ಯದ ಬಗ್ಗೆ ಸುಧಾರಣೆ ತೋರಿಬರಲಿದೆ. ನ್ಯಾಯಾಲಯದ ಕಾರ್ಯ ಮುನ್ನಡೆ ತರಲಿದೆ.
ಮಿಥುನರಾಶಿ
ಸ್ವತಂತ್ರ ವ್ಯವಹಾರಗಳಿಗೆ ಸಕಾಲವಿದು. ದಾಂಪತ್ಯದಲ್ಲಿ ಕೆಲವೊಮ್ಮೆ ಸಮಸ್ಯೆಗಳು ತೋರಿಬಂದಾವು. ಮಕ್ಕಳಿಂದ ಶುಭ ಸುದ್ದಿ, ವಾಹನದಿಂದ ಅಧಿಕ ಖರ್ಚು, ಶತ್ರು ಬಾಧೆ, ವ್ಯಾಪಾರದಲ್ಲಿ ಅನುಕೂಲ, ಕೃಷಿಕರಿಗೆ ಅಲ್ಪ ಲಾಭ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಸ್ತ್ರೀಯರಿಗೆ ಉತ್ತಮ ಫಲ. ವೃತ್ತಿರಂಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ ಇದೆ. ನಿರುದ್ಯೋಗಿಗಳು ಉದ್ಯೋಗವನ್ನು ಹೊಂದಿಯಾರು.

ಕಟಕರಾಶಿ
ನಿರುದ್ಯೋಗಿಗಳು ಕರ್ತವ್ಯದ ಕಡೆಗೆ ಗಮನವಿಟ್ಟು ಉದ್ಯೋಗಕ್ಕಾಗಿ ಪ್ರಯತ್ನಿಸಬೇಕು. ಹಣಕಾಸು ವಿಚಾರದಲ್ಲಿ ನಷ್ಟ, ಶುಭ ಕಾರ್ಯಗಳಲ್ಲಿ ಭಾಗಿ, ಕುಟುಂಬ ಸೌಖ್ಯ, ಅನಾವಶ್ಯಕ ಖರ್ಚು, ಪರಸ್ಥಳ ವಾಸ, ನಾನಾ ರೀತಿಯ ಚಿಂತೆ, ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಸಂಭ್ರಮವಿದೆ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗಕ್ಕೆ ಮುಂಭಡ್ತಿ ತಂದೀತು.
ಸಿಂಹರಾಶಿ
ಕಾರ್ಯರಂಗದಲ್ಲಿ ಹೊಂದಾಣಿಕೆ ಅತೀ ಅಗತ್ಯವಿದೆ. ಗೆಳೆಯರಿಂದ ದುರ್ಘಟನೆ, ಕೆಲಸ ಕಾರ್ಯಗಳಲ್ಲಿ ಜಯ, ಮನಃಕ್ಲೇಷ, ಯತ್ನ ಕಾರ್ಯದಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಚೇತರಿಕೆ. ದೇವತಾಕಾರ್ಯಗಳಿಗಾಗಿ ಸಂಚಾರವಿದೆ. ವೃತ್ತಿರಂಗದಲ್ಲಿ ಕಾರ್ಯ ಒತ್ತಡಗಳು ಸಮಸ್ಯೆ ತರಲಿವೆ. ಅದನ್ನು ಆತ್ಮವಿಶ್ವಾಸದಿಂದ ಎದುರಿಸುವುದು.
ಕನ್ಯಾರಾಶಿ
ಭೂ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ನಂಬಿಕಸ್ಥರಿಂದ ಮೋಸ, ಆಲಸ್ಯ ಮನೋಭಾವ, ಅಕಾಲ ಭೋಜನ, ಅಧಿಕಾರಿಗಳಲ್ಲಿ ಕಲಹ, ಸಾಮಾನ್ಯ ನೆಮ್ಮದಿಗೆ ಭಂಗ. ಹಿರಿಯರ ಅಪಸ್ವರವಿದ್ದರೂ ನಿಮ್ಮ ಕಾರ್ಯದ ಬಗ್ಗೆ ನೀವೇ ಯೋಚಿಸಿ ಮುನ್ನಡೆಯುವುದು ಅತೀ ಅಗತ್ಯವಿದೆ. ಆರ್ಥಿಕವಾಗಿ ಆಗಾಗ ಧನಾಗಮನದಿಂದ ಕೊಂಚ ಸಮಾಧಾನವು ಮೂಡಿಬಂದೀತು.

ತುಲಾರಾಶಿ
ಮುಖ್ಯವಾಗಿ ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ವಿಶ್ರಾಂತಿಯನ್ನು ಪಡೆಯುವುದು ಅಗತ್ಯವಿದೆ. ಹೊಸ ವ್ಯವಹಾರಗಳಲ್ಲಿ ಆಸಕ್ತಿ, ಆರೋಗ್ಯದಲ್ಲಿ ಚೇತರಿಕೆ, ತೀರ್ಥಯಾತ್ರೆ ದರ್ಶನ, ಧನ ನಷ್ಟ, ಉನ್ನತ ವಿದ್ಯಾಭ್ಯಾಸ, ವಿದೇಶ ಪ್ರಯಾಣ, ಮಾನಸಿಕ ನೆಮ್ಮದಿ. ಅವಿವಾಹಿತರಿಗೆ ಅನಿರೀಕ್ಷಿತ ಬೆಳವಣಿಗೆಗಳು ಕಂಡುಬರಲಿವೆ. ಸಾಮಾಜಿಕ ರಂಗದಲ್ಲಿ ಜಾಗ್ರತೆ ಮಾಡಿರಿ.
ವೃಶ್ಚಿಕರಾಶಿ
ಆರ್ಥಿಕವಾಗಿ ಆಗಾಗ ಸಂಕಷ್ಟಗಳು ಎದುರಾದರೂ ಅನಿರೀಕ್ಷಿತ ರೂಪದಲ್ಲಿ ಧನಾಗಮನವಿರುತ್ತದೆ. ಕಾರ್ಯ ಸಾಧನೆ, ಪ್ರಯಾಣದಲ್ಲಿ ಅಡೆತಡೆ, ಮಾನಸಿಕ ವ್ಯಥೆ, ಅಲ್ಪ ಪ್ರಗತಿ, ಶೀತ ಸಂಬಂಧಿತ ರೋಗ, ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯ, ಅತಿಯಾದ ನಿದ್ರೆ, ಋಣ ಬಾಧೆ. ಬಂಧುಮಿತ್ರರ ಆಗಮನ ಸಂತಸ ತರಲಿದೆ. ಆಗಾಗ ವ್ಯಾಪಾರ, ವ್ಯವಹಾರಗಳಲ್ಲಿ ಸಮಸ್ಯೆಗಳು ತೋರಿಬಂದು ಬೇಸರವಾದೀತು.
ಧನುರಾಶಿ
ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಫಲಿತಾಂಶವನ್ನು ಉತ್ತಮ ರೀತಿಯಲ್ಲಿ ಪಡೆಯಲಿದ್ದಾರೆ. ಸ್ಥಿರಾಸ್ತಿ ಖರೀದಿ, ಅನ್ಯರಲ್ಲಿ ವೈಮನಸ್ಸು, ಅಧಿಕ ಖರ್ಚು, ಸ್ತ್ರೀಯರಿಗೆ ಲಾಭ, ಪರರ ಧನ ಪ್ರಾಪ್ತಿ, ಕುಲದೇವರ ದರ್ಶನ ಮಾಡಿ, ದಾಯಾದಿಗಳ ಕಲಹ, ವಿವಾಹಕ್ಕೆ ಅಡೆತಡೆ. ಶುಭಮಂಗಲ ಕಾರ್ಯಕ್ಕಾಗಿ ಓಡಾಟವಿರುತ್ತದೆ. ಆರ್ಥಿಕವಾಗಿ ಹೆಚ್ಚಿನ ಕಷ್ಟವು ಇರಲಾರದು. ಸಮಾಧಾನದಿಂದ ಇರುವುದು.

ಮಕರರಾಶಿ
ದೂರ ಸಂಚಾರದ ಅವಕಾಶಗಳು ಇದ್ದರೂ ಕಾರ್ಯಭಂಗವಾಗಲಿದೆ. ಮಾಡಿದ ಕಾರ್ಯಗಳಲ್ಲಿ ಪ್ರಗತಿ, ರೋಗ ಬಾಧೆ, ದ್ರವ್ಯ ಲಾಭ, ವಿದೇಶ ಪ್ರಯಾಣ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು. ಕುಟುಂಬಿಕರ ಮಂಗಲಕಾರ್ಯಕ್ಕೆ ಕರೆ ಬಂದೀತು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ದೇವತಾ ಕಾರ್ಯಗಳಿಗಾಗಿ ಖರ್ಚು ತೋರಿಬಂದೀತು.
ಕುಂಭರಾಶಿ
ಬಂದ ಅವಕಾಶಗಳನ್ನು ನಿರುದ್ಯೋಗಿಗಳು ಒಪ್ಪಿಕೊಳ್ಳುವುದು ಉತ್ತಮ. ಅನಿರೀಕ್ಷಿತ ದ್ರವ್ಯ ಲಾಭ, ಕೃಷಿಯಲ್ಲಿ ಲಾಭ, ವ್ಯಾಸಂಗಕ್ಕೆ ತೊಂದರೆ, ಮಾತಿನ ಚಕಮಕಿ, ಆಹಾರ ಸೇವನೆಯಲ್ಲಿ ಎಚ್ಚರಿಕೆ, ಉದರ ಬಾಧೆ, ಅತಿಯಾದ ಪ್ರಯಾಣ, ಬಾಕಿ ವಸೂಲಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಅನಾವಶ್ಯಕ ನಿಷ್ಠುರವಾದೀತು. ನಿಮ್ಮಿಷ್ಟದಂತೆ ಚಿಂತಿತ ಕಾರ್ಯವು ಕಾರ್ಯಗತವಾಗಲಿದೆ.
ಮೀನರಾಶಿ
ಸಾಂಸಾರಿಕವಾಗಿ ಮಡದಿಯ ಸಹಕಾರ ಫಲಕಾರಿಯಾಗಲಿದೆ. ಪ್ರೀತಿ ಸಮಾಗಮ, ಮಾತೃವಿನಿಂದ ಲಾಭ, ಚಿನ್ನಾಭರಣ ಪ್ರಾಪ್ತಿ, ಧನ ಲಾಭ, ಹಿತ ಶತ್ರುಗಳಿಂದ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು. ವಿದ್ಯಾರ್ಥಿಗಳಿಗೆ ಸಹಕಾರದಿಂದ ಉನ್ನತ ವ್ಯಾಸಂಗಕ್ಕೆ ಪೂರಕವಾದೀತು. ಆರೋಗ್ಯಕ್ಕಾಗಿ ಆಗಾಗ ತಪಾಸಣೆ ಅಗತ್ಯವಿದೆ. ಜಾಗ್ರತೆ ವಹಿಸುವುದು.