ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ನವಮಿ ತಿಥಿ, ಮಖಾ ನಕ್ಷತ್ರ, ಬ್ರಹ್ಮ ಯೋಗ , ತೈತುಲ ಕರಣ, ನವೆಂಬರ್ 09, ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳಗ್ಗೆ 7 ಗಂಟೆ 6 ನಿಮಿಷದಿಂದ 8 ಗಂಟೆ 42 ನಿಮಿಷದ ವರೆಗೆ ಇದೆ.

ನಮಗೆ ಗೊತ್ತೋ ಗೊತ್ತಿಲ್ಲದೆಯೋ ನಮ್ಮನ್ನು ಕರ್ಮಸಿದ್ಧಾಂತ ಆಳುತ್ತಿದೆ. ಪ್ರಾರಬ್ಧ ಕರ್ಮ ನಮ್ಮನ್ನು ಬಿಡುವುದಿಲ್ಲ. ನಾವು ಹಾಗೆಯೇ ಹೋಗುತ್ತೇವೆ. ಲಕ್ಷ್ಮಿ ಮನೆಯಲ್ಲಿ ನಿಲ್ಲುತ್ತಿಲ್ಲ ಎಂದರೆ ಅದಕ್ಕೆ ಪ್ರಾರಬ್ದ ಕರ್ಮವೇ ಕಾರಣ. ಇಂದಿನ ಕಲಿಯುಗದಲ್ಲಿ ಸ್ತ್ರೀಯರು ಹಣೆಗೆ ಕುಂಕುಮ, ಬೈತಲೆಯಲ್ಲಿ ಕುಂಕುಮ, ಕೆನ್ನೆಯಲ್ಲಿ ಅರಶಿನ ಇರುವುದಿಲ್ಲ. ಸ್ತ್ರೀಯರು ಕುಂಕುಮ ವಿಡದೆ ಬೇರೆಯವರಿಗೆ ಮುಖ ತೋರಿಸಬಾರದು. ಸ್ತ್ರೀ ತನಗೆ ಗೊತ್ತಿಲ್ಲದ ಆಗೆ ಮನೆಗೆ ಕಂಟಕವಾಗುತ್ತಾಳೆ, ನಿರಾಶ್ರಿತವಾಗಿ ನಿಲ್ಲುತ್ತಾಳೆ. ಲಕ್ಷ್ಮಿ ಗಿಂತ ಪತಿವ್ರತೆ ಇಲ್ಲ, ಆಕೆಗೆ ವಿಷ್ಣು ಇಲ್ಲದ ಲೋಕವೆಲ್ಲ. ತಂದೆಯ ಸಮಾನರಾದವರೇ ವಿಷ್ಣುವಿಗೆ ಅವಮಾನ ಮಾಡಿದಾಗ ಅದನ್ನು ಸಹಿಸಿಕೊಳ್ಳದೆ ವೈಕುಂಠವನ್ನೇ ತೊರೆಯುತ್ತಾಳೆ ಲಕ್ಷ್ಮಿ. ಯಾರದೇ ಮನೆಯಲ್ಲಿ ಲಕ್ಷ್ಮಿ ನಿಂತಿದ್ದಾಳೆ ಎಂದರೆ ಅದಕ್ಕೆ ಕುಂಕುಮವೇ ಕಾರಣ.

ಪತಿ ಮಾಡುವ ಯಾವುದೇ ಪುಣ್ಯ ಕೆಲಸದ ಅರ್ಧ ಭಾಗ ಪತ್ನಿಯ ಖಾತೆಗೆ ಭಗವಂತ ಆಕುತ್ತಾನೆ. ಮನೆಯಲ್ಲಿ ಎಷ್ಟೇ ಕಷ್ಟಗಳು ಬಂದರೂ ಕೂಡ ಸ್ತ್ರೀಯರ ಮೇಲೆ ಕುಂಕುಮವಿರದ್ದರೆ ಆ ಕಷ್ಟಗಳು ತಾತ್ಕಾಲಿಕವಾಗಿ ಮಾತ್ರ ಇರುತ್ತದೆ. ಲಕ್ಷ್ಮಿ ಮನೆಯಲ್ಲಿ ಸದಾ ನೆಲಸಿರಬೇಕಾದರೆ ನಿತ್ಯ ಸುಮಂಗಲಿಯಾಗಿ ಗೌರವ ಜೀವನ ನೆಡಸಬೇಕು. ಅಗೌರವ ತಟ್ಟಬಾರದು, ಅಪವಾದಗಳು ಆಗಬಾರದು, ಯಾರು ನಿಮ್ಮ ಕಡೆ ಬೆರಳು ತೋರಿಸಬಾರದು, ಎಲ್ಲವನ್ನು ಸಹಿಸುವಂತಹ ಭೂದೇವಿಯ ಶಕ್ತಿ ನಿಮಗೆ ಬರಬೇಕೆಂದರೆ ಸದಾ ತ್ರಿಕಾಲದಲ್ಲಿಯೂ ಕುಂಕುಮ ಅರಶಿನ ಇರಲೇಬೇಕು. ಬೈತಲೆಯಲ್ಲಿ ಕುಂಕುಮ ವಿಟ್ಟಂತಹ ಮುತ್ತೈದೆಯರು ಗಂಡನಿಗೆ ತಂದೆ ತಾಯಿಗಳಿಗೆ ಮಾತ್ರ ನಮಸ್ಕರಿಸಬಹುದು. ದೇವರಿಗೂ ಕೂಡ ನಮಸ್ಕರಿಸುವಂತಿಲ್ಲ.
ಮುತ್ತೈದೆ ಸ್ತ್ರೀಯರ ತಲೆ ಭೂ ದೇವಿಗೆ ಮುಟ್ಟಬಾರದು ಶಿವ ಶಾಸನ. ಇದನ್ನು ಮೀರಿದರೆ ಶಿವನ ಪೂಜೆಗೆ ಧಕ್ಕೆ ತಂದಂತೆ. ಸ್ತ್ರೀಯರ ಮಾಂಗಲ್ಯ ನೆಲಕ್ಕೆ ತಾಗಬಾರದು ತಾಕಿದರೆ ಆಯಸ್ಸು ಕಡಿಮೆಯಾದಂತೆ ಇದನ್ನು ಶಿವನೇ ಲಕ್ಷ್ಮಿಗೆ ಹೇಳಿರುವುದು. ಮದುವೆಯಾದವರು ಸದಾ ಅರಿಸಿಣ ಸಿಂಧೂರವನ್ನು ಇಟ್ಟುಕೊಳ್ಳಿ, ಎಂಥ ಕಷ್ಟವಾದರೂ ದಾಟಿ ಮುಂದೆ ಬರುತ್ತೀರ. ಸಿರಿವಂತಿಕೆ ಕೂಡ ಬರುತ್ತದೆ ಲಕ್ಷ್ಮಿ ನೆಲೆಸುತ್ತಾಳೆ.
ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :
ಮೇಷರಾಶಿ : ಚಂದ್ರ ಕೇತು ನಕ್ಷತ್ರದಲ್ಲಿ ದ್ದಾನೆ ಇದರಿಂದ ಪರಿಶ್ರಮಕ್ಕೆ ತಕ್ಕಂತೆ ಫಲ ಕಡಿಮೆಯಾಯಿತು ಎಂದೆನಿಸುತ್ತದೆ. ಎಲ್ಲವನ್ನೂ ಆ ಭಗವಂತ ನೆಡೆಸಿಕೊಂಡು ಹೋಗುತ್ತಾನೆ ನಿರಾಳವಾಗಿರಿ.
ವೃಷಭ ರಾಶಿ : ಸ್ವಲ್ಪ ವಿದ್ಯಾರ್ಥಿಗಳಿಗೆ ತಳಮಳ ಮಕ್ಕಳ ಕಡೆ ಗಮನ ಕೊಡಿ. ವಿದ್ಯಾ ಸ್ಥಾನದಲ್ಲಿ ಕುಟುಂಬ ಸ್ಥಾನದಲ್ಲಿ ಕೇತು ಕುಳಿತಿರುವುದರಿಂದ ಮೂಲ ತ್ರಿಕೋನದಲ್ಲಿ ಚಂದ್ರನಿರುವುದರಿಂದ ಸ್ವಲ್ಪ ಹುಳಿ ಇರುತ್ತದೆ. ಮಕ್ಕಳಿಗೆ ಬ್ರಹ್ಮ ಶಂಕರವನ್ನ ತಿನ್ನಿಸಿ ಒಳ್ಳೆಯದಾಗುತ್ತದೆ.
ಮಿಥುನ ರಾಶಿ : ಒಡಹುಟ್ಟಿದವರ ವಿಚಾರದಲ್ಲೊಂದು ಅಪಶ್ರುತಿ. ತೀರಾ ತಲೆಗೆ ಹಾಕಿಕೊಳ್ಳಬೇಡಿ ಬಿಟ್ಟುಕೊಡಿ.
ಕರ್ಕಾಟಕ ರಾಶಿ : ಕುಟುಂಬ ವಿಚಾರದಲ್ಲಿ ಉದ್ಯೋಗದ ವಿಚಾರದಲ್ಲಿ ಒಂದು ಕಹಿಯಾದ ಪ್ರಸಂಗ. ಹೊರಗಡೆ ಹೋಗುವಾಗ 1ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಕುಜನರ ತತ್ವ ಕಡಿಮೆಯಾಗುತ್ತದೆ.
ಸಿಂಹ ರಾಶಿ : ನಿಭಾಯಿಸುತ್ತೇನೆ ಎಂಬ ಅಳುಕು ಭಾವವಿರುತ್ತದೆ. ನೀವು ಆತಂಕಪಡುವ ಅವಶ್ಯಕತೆಯಿಲ್ಲ ಏನಾಗಬೇಕು ಎಲ್ಲವನ್ನೂ ಮೊದಲೇ ದೇವರು ನಿರ್ಧರಿಸುತ್ತಾನೆ.
ಕನ್ಯಾ ರಾಶಿ : ವೈರಾಗ್ಯ ಜ್ಞಾನ ಭಾವ ದೇವಾಲಯ ಪೂಜೆ ಸಂಕಲ್ಪದ ದಾರಿ ತೋರಿಸುತ್ತದೆ, ಒಳ್ಳೆಯದಾಗುತ್ತದೆ. ಧರ್ಮ ದಾರಿ ತೋರಿಸುತ್ತದೆ, ನಾವು ಮಾಡಿರುವ ಧರ್ಮ ಒಂದಲ್ಲ ಒಂದು ದಿನ ಇಂದೇ ದಾರಿ ತೋರಿಸುತ್ತದೆ.
ತುಲಾ ರಾಶಿ : ಧರ್ಮ ಮಾರ್ಗದಲ್ಲಿ ನಡೆದರೆ ಒಳ್ಳೆಯದಾಗುತ್ತದೆ. ಹಾಗಾಗಿ ಸಂಪಾದನೆ ಮಾಡಿದರೆ ಗೆಲುವು ನಿಮ್ಮದೆ.
ವೃಶ್ಚಿಕ ರಾಶಿ : ಆಕಸ್ಮಿಕವಾಗಿ ದೈವದರ್ಶನ, ಗುರುದರ್ಶನ, ಜ್ಞಾನದರ್ಶನ, ನದಿ ಸ್ನಾನ, ಸಮುದ್ರ ಸ್ನಾನ, ವಿನಾಯಕ ದರ್ಶನ್,ದೇವಿ ದರ್ಶನದ ಸುಯೋಗವುಂಟು ಒಳ್ಳೇದಾಗಲಿ.
ಧನಸ್ಸು ರಾಶಿ : ತಂದೆ ತಾಯಿಯ ಆರೋಗ್ಯದ ಕಡೆ ಗಮನಕೊಡಿ ಆರೋಗ್ಯದಲ್ಲಿ ಸ್ವಲ್ಪ ಎಳೆದಾಟ ಆಗುತ್ತದೆ. ವಯಸ್ಸಾದ ಹಿರಿಯರವರೆಗೆ ಶಂಕರಾಮೃತವನ್ನು ಕೊಡಿ.
ಮಕರ ರಾಶಿ : ದೂರದಿಂದ ಶುಭ ಸುದ್ದಿಯೊಂದನ್ನು ಪಡೆಯುತ್ತೀರಾ ಆಚಾರ್ಯರಾಗಿದ್ದರೆ, ಗುರುಗಳಾಗಿದ್ದರೆ, ಪರಿಶ್ರಮದಿಂದ ಒಂದು ಗತ್ತು.
ಕುಂಭ ರಾಶಿ : ನಂಬಿಕೆ ದ್ರೋಹ ಉಂಟು ಯಾರನ್ನೂ ನಂಬಬೇಡಿ. ಕಲಿಯುಗದಲ್ಲಿ ಎಲ್ಲವೂ ಲೆಕ್ಕಾಚಾರ ಎಲ್ಲವೂ ದ್ರೋಹ ನಂಬಲು ಹೋಗಬೇಡಿ ಎಚ್ಚರಿಕೆ.
ಮೀನ ರಾಶಿ : ಪರಿಶ್ರಮದಿಂದ ವಿಶೇಷವಾದ ಗೌರವ, ಸಂಪಾದನೆ, ಕೀರ್ತಿ, ಹೆಸರು ಪಡೆಯುವಂತಹ ದಿನ ಚೆನ್ನಾಗಿದೆ. ಒಳ್ಳೆಯ ಪುಷ್ಕಳಸ್ತ ಭೋಜನ, ನಗು ತಂದುಕೊಡುವಂತಹ ದಿನ.