ಬುಧವಾರ, ಏಪ್ರಿಲ್ 30, 2025
Homehoroscopeನಿತ್ಯಭವಿಷ್ಯ : ಶ್ರೀ ರವಿಶಂಕರ ಗುರೂಜಿ (10-11-2020)

ನಿತ್ಯಭವಿಷ್ಯ : ಶ್ರೀ ರವಿಶಂಕರ ಗುರೂಜಿ (10-11-2020)

- Advertisement -

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ದಶಮಿ ತಿಥಿ, ಪೂರ್ವಫಾಲ್ಗುಣಿ  ನಕ್ಷತ್ರ,  ಐಂದ್ರ ಯೋಗ , ವನಿಜ ಕರಣ, ನವೆಂಬರ್ 10 , ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

ಲಕ್ಷ್ಮಿ ಸಂಕಲ್ಪದ ಬಗ್ಗೆ ಬಹಳ ವಿಶೇಷವಾದ ಮಾಹಿತಿಯನ್ನು  ಗುರೂಜಿ ರವರು ಇಂದು ತಿಳಿಸಿಕೊಟ್ಟಿದ್ದಾರೆ. ಈ ಒಂದು ವಸ್ತುವನ್ನ ಮನೆಯ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ, ನೀವು ಅಲಕ್ಷ್ಮಿಯ ದೋಷವನ್ನು ಮಾಡದಿದ್ದರೆ, ಆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಸದಾ ಧರ್ಮಮಾರ್ಗದಲ್ಲಿ  ನ್ಯಾಯಬದ್ಧವಾಗಿ ಯಾವುದೇ ರೀತಿಯ ತಪ್ಪನ್ನು ಮಾಡದೆ ಜೊತೆಗೆ ನಿಮ್ಮ ಪ್ರಯತ್ನವನ್ನು ಮಾಡಿ ಆಗ ಮಾತ್ರ ಅಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕೆಡುಕನ್ನು ಮಾಡಿ ಪೂಜೆ ಮಾಡಿದರೆ ಅದರಿಂದ ಯಾವುದೇ ರೀತಿಯ ಪ್ರತಿಫಲ ದೊರೆಯುವುದಿಲ್ಲ. ಸಣ್ಣಪುಟ್ಟ ಲೋಪದೋಷಗಳು ಎಲ್ಲರಲ್ಲೂ ಇರುತ್ತದೆ, ಅಶುದ್ಧ  ಆಲೋಚನೆಗಳು ಕೆಲವೊಮ್ಮೆ ಬರುತ್ತದೆ.

ಆದರೆ ಯಾವಾಗಲು ಅಶುದ್ಧತೆಯಿಂದ ಇರಬಾರದು. ಈ ಒಂದು ವಸ್ತುವನ್ನ ಲಕ್ಷ್ಮಿ ಪೂಜೆಗೆ  ನ್ಯಾಯಬದ್ಧವಾಗಿ, ಧರ್ಮ ಬದ್ಧವಾಗಿ’ ಜ್ಞಾನ ಬದ್ಧವಾಗಿ, ಸುಜ್ಞಾನ ಬದ್ಧವಾಗಿ, ನಡೆದುಕೊಳ್ಳುತ್ತಿದ್ದರು ಒಂದು ಬೊಗಸೆ ನವಿಲುಗರಿಯನ್ನು ತೆಗೆದುಕೊಂಡು ಬನ್ನಿ. ಅತಿ ಮುಖ್ಯವಾಗಿ ಆಗ್ನೇಯ ದಿಕ್ಕು ಅಥವಾ ಯಮದಿಕ್ಕಿನಲ್ಲಿ ಎಷ್ಟು ತಂದರೂ ಮನೆಯಲ್ಲಿ ಅನ್ನ  ನಿಲ್ಲುತ್ತಿಲ್ಲ ಎನ್ನುವುದಾದರೆ ಶುದ್ಧವಾದ ಪಂಚಲೋಹದ  ಬಟ್ಟಲಿನಲ್ಲಿ ನವಿಲುಗರಿಯನ್ನು ಇಟ್ಟು ಅದರಲ್ಲಿ ಸುಗಂಧ ದ್ರವ್ಯದ ಧೂಪವನ್ನು ಇಡಿ. ನವಿಲುಗರಿಯು  ಲಕ್ಷ್ಮಿಯ ದ್ಯೋತಕ ಆದ್ದರಿಂದಲೇ ಶ್ರೀಕೃಷ್ಣ ನವಿಲುಗರಿಯನ್ನು ತನ್ನ  ತಲೆಯಲ್ಲಿ  ಇಟ್ಟುಕೊಂಡಿರುವುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ನೋಡಿ      

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷರಾಶಿ : ಚೆನ್ನಾಗಿದೆ ಚಂದ್ರ ಶುಕ್ರನ ಸಾರದಲ್ಲಿದ್ದು ಶುಕ್ರ ಚಂದ್ರನ ಸಾರದಲ್ಲಿರುವುದರಿಂದ ಪರಿವರ್ತನಾಯೋಗ. ಅಂದುಕೊಂಡಿರುವ ಕೆಲಸ ಕಾರ್ಯಗಳಲ್ಲಿ ಪ್ರಗತಿ ಆದರೆ ಸಂಗಾತಿ ಜೊತೆ  ಮನಶ್ಯಾಂತಿ ಕದಲಿಕೆ. 

ವೃಷಭ ರಾಶಿ : ಇರುವಾಗ ಎಲ್ಲರೂ ನೆಂಟರು ಜಾಗ್ರತೆ, ಕುಜ ವಕ್ರವಾಗಿರುವುದರಿಂದ ಕುಟುಂಬ, ದಾಂಪತ್ಯ, ಮನಸ್ಸು, ಅಧಿಕಾರದಲ್ಲಿ ತಳಮಳ. ಲಕ್ಷ್ಮಿ ಪೂಜೆಯನ್ನು ಬದ್ಧತೆಯಿಂದ ಮಾಡಿಕೊಳ್ಳಿ ನೆರವಾಗುವುದು ಗೆಲ್ಲುತ್ತೀರ.

ಮಿಥುನ ರಾಶಿ : ಚೆನ್ನಾಗಿದೆ ಆದರೆ ಶುಕ್ರ ನೀಚ, ಸಂಗಾತಿಯ ವಿಚಾರದಲ್ಲಿ, ಸಂಗಾತಿಯ ಅನಾರೋಗ್ಯ, ಸೋದರಿ ಆರೋಗ್ಯದ ವಿಚಾರದಲ್ಲಿ ಏರುಪೇರು. ಲಕ್ಷಿ ಹಬ್ಬದಂದು 6ಜನ ಮುತ್ತೈದೆಯರಿಗೆ ಶುದ್ಧವಾದ ರೇಷ್ಮೆ ಸೀರೆ  ಅಥವಾ ಶುದ್ಧವಾದ ಕಾಟನ್ ಸೀರೆಯನ್ನು ಕೊಡಿ. ತುಂಬಾ ಒಳ್ಳೆಯದಾಗುತ್ತದೆ ಮನೆಯಲ್ಲೊಂದು ಶುಭ ನಡೆಯುತ್ತದೆ.  

ಕರ್ಕಾಟಕ ರಾಶಿ : ಒಡಹುಟ್ಟಿದ ಸೋದರಿ ವರ್ಗದಿಂದ ಸಣ್ಣ ತೊಳಲಾಟ ಆದರೂ ಶುಕ್ರನ ಛಾಯೆಯಲ್ಲಿ ಚಂದ್ರನಿರುವುದರಿಂದ ನಿಮ್ಮ ಗತ್ತು ತೂಕ  ಪ್ರಾಮಾಣಿಕತೆಯನ್ನು ಎಲ್ಲರೂ ನೋಡುವಂತಹ ದಿನ ಇಂದು. 

ಸಿಂಹ ರಾಶಿ : ಸೊಂಟನೋವಿನಿಂದ ಬಳಲುವಿರಿ. ಒಂದು  ಸಣ್ಣ ವಕ್ರ ಬುದ್ಧಿ ಮಾತು ಆಲೋಚನೆ ಇರುತ್ತದೆ. ಬಂಗಾರದ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಿ.

ಕನ್ಯಾ ರಾಶಿ : ಏನೋ ಒಂದು ರೀತಿಯ ತಳಮಳ, ಏನೂ ಆಗುವುದಿಲ್ಲ, ಮನೆಯಲ್ಲಿ  ಸ್ತ್ರೀ ಅಳುತ್ತಿದ್ದರೆ ಅಂದರೆ ಗೃಹಲಕ್ಷ್ಮಿ ಅಳುತ್ತಿದ್ದರೆ  ಅಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಜಾಗ್ರತೆ.

ತುಲಾ ರಾಶಿ :  ಚೆನ್ನಾಗಿದೆ ಆದರೆ ಸ್ವಲ್ಪ ಖರ್ಚು ವೆಚ್ಚಗಳು ಜಾಸ್ತಿ, ಭಗವಂತ ಕೊಡುವ ಶಕ್ತಿ ಕೊಟ್ಟಿದ್ದಾಗ ಕೊಡಿ, ಇದ್ದಾಗ ಯುಗಾದಿ ಇರದಿದ್ದಾಗ ಶಿವರಾತ್ರಿ.  

ವೃಶ್ಚಿಕ ರಾಶಿ : ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿ, ನಯ ನಾಜೂಕು ಇಂದು ನೀವು ಬಾಡಿ ಬಿಲ್ಡರ್ಸೆ.

ಧನಸ್ಸು ರಾಶಿ : ಸಂಗಾತಿಯ ವಿಚಾರದಲ್ಲಿ ಅಪಶ್ರುತಿ ಡೈವರ್ಸ್,  ಅನುಮಾನ ಇಂತಹ ವಿಷಯಗಳು ತಾರಕಕ್ಕೇರಿ ಬಿಡುತ್ತವೆ ಎಚ್ಚರಿಕೆ.

ಮಕರ ರಾಶಿ : ಸಂಗಾತಿ ಮನೆಯಿಂದ, ಸೋದರಿ ವರ್ಗದಿಂದ  ಒಂದು ಸಹಾಯ, ಕಲಾವಿದರಿಗೆ ಪರಿಶ್ರಮ  ಆದರೂ ಕೂಡ  ಒಂದು ಒಳ್ಳೆ ಹೆಸರು ಬರುತ್ತದೆ.

ಕುಂಭ ರಾಶಿ : ತುಂಬಾ ತುಂಟರಾಗಿರುತ್ತೀರ, ತುಂಬಾ ಹುಳಿ, ತುಂಬಾ ಸಿಹಿ, ತುಂಬಾ ಖಾರ, ಒಳ್ಳೆಯದಲ್ಲ ಅದರ ಬಗ್ಗೆ ಸ್ವಲ್ಪ ಗಮನ ಕೊಡಿ. ಮಿಕ್ಕಂತೆ ತೊಂದರೆಯೇನೂ ಇಲ್ಲ ಒಳ್ಳೆಯದಾಗುತ್ತದೆ.  

ಮೀನ ರಾಶಿ : ನಿಮಗೂ ಶುಕ್ರನಿಗೂ ಅಷ್ಟಕ್ಕಷ್ಟೆ ಆದರೂ ಚಂದ್ರ ವಿಶೇಷವಾಗಿರುವುದರಿಂದ ಬ್ಯೂಟಿಪಾರ್ಲರ್, ಅಲಂಕಾರ, ದೀಪಗಳು, ಹಣ್ಣು, ತರಕಾರಿ, ಈ ರೀತಿಯ ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಅದ್ಭುತವಾದ ಫಲ ದೊರೆಯುತ್ತದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular