ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (11-11-2020)

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಏಕಾದಶಿ ತಿಥಿ, ಉತ್ತರಫಾಲ್ಗುಣಿ  ನಕ್ಷತ್ರ,  ವೈಧೃತಿ  ಯೋಗ ,  ಭವ ಕರಣ, ನವೆಂಬರ್ 11 , ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ರಾತ್ರಿ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

ಲಕ್ಷ್ಮೀ ಅನುಷ್ಠಾನ ಪ್ರಿಯೆ,  ಶುದ್ಧ ಪ್ರಿಯೆ, ಶುದ್ಧ ಎಂದರೆ  ಪರಬ್ರಹ್ಮ ಸ್ವರೂಪ, ಅದನ್ನು ಬಿಟ್ಟರೆ ಶುದ್ಧವಾದುದು ಬೆಂಕಿ, ಎಲ್ಲಾ ವಸ್ತುಗಳು ಎಲ್ಲಾ ಜೀವಿಗಳಲ್ಲೂ ಪೂರ್ಣಶುದ್ಧತೆ ಇರುವುದಿಲ್ಲ, ಒಂದಲ್ಲ ಒಂದು ರೀತಿಯ ಅಶುದ್ಧತೆ ಇದ್ದೇ ಇರುತ್ತದೆ. ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ನೀವು  ಮಾಡುತ್ತಿರುವ ಕೆಲವು ತಪ್ಪುಗಳಿಂದ ಲಕ್ಷ್ಮಿ ಮನೆಯಲ್ಲಿ ನೆಲೆಸುವುದಿಲ್ಲ. ಅದರಲ್ಲೂ ಅತಿ ಮುಖ್ಯವಾಗಿ  ಸಂಧ್ಯಾ ಕಾಲದಲ್ಲಿ ಸ್ತ್ರೀ ತಲೆಗೆ ಎಣ್ಣೆಯನ್ನು ಹಾಕಿಕೊಂಡರೆ  ಅಲ್ಲಿ ರಾಹು ಕೇತು, ದುಷ್ಟಶಕ್ತಿ, ದುಷ್ಟ ವ್ಯಕ್ತಿಗಳ ಪ್ರವೇಶವಾಗುತ್ತದೆ. ಆದ್ದರಿಂದ ಸಂಧ್ಯಾಕಾಲದಲ್ಲಿ ತಲೆಗೆ ಎಣ್ಣೆಯನ್ನು  ಆಕಿ ಕೊಳ್ಳಬಾರದು ಜೊತೆಗೆ ತಲೆಯನ್ನು ಬಾಚಬಾರದು.

ಸೂರ್ಯಾಸ್ತಕ್ಕೂ ಮೊದಲು ತಲೆ ಬಾಚಿ ಮುಖ ತೊಳೆದು ಬೊಟ್ಟು ಇಟ್ಟುಕೊಳ್ಳುವುದು ಅತ್ಯುತ್ತಮ. ಸಂಧ್ಯಾ ಕಾಲದಲ್ಲಿ ಎಣ್ಣೆಯನ್ನು ಹಚ್ಚಿಕೊಂಡು ಹಾಗೆ ಮಲಗುತ್ತಾರೋ ಆ ಮನೆಯಲ್ಲಿ ಪಾಪಗ್ರಹ ಸಂಹಿತೆ ಆಗುತ್ತದೆ ಅಲ್ಲಿ ಸದಾ ಕಲಹ ಜಗಳ ನಷ್ಟ, ನಿರಾಶೆ  ವೈರಾಗ್ಯ ಮನೋವ್ಯಾಧಿ, ದೈಹಿಕ ವ್ಯಾಧಿಗೆ ಒಳಗಾಗುತ್ತೀರಿ, ಆದರೆ ಅದು ತಕ್ಷಣವೇ ಆಗೋದಿಲ್ಲ ನಿಧಾನವಾಗಿ ಆಗುತ್ತದೆ. ದೇಹ ಭಾರವೆನಿಸುತ್ತದೆ, ಮನಸ್ಸು ಚುರುಕುತನವನ್ನು ಕಳೆದುಕೊಳ್ಳುತ್ತದೆ, ಗಂಡನ ಮೇಲೆ, ಅಪ್ಪ ಅಮ್ಮನ ಮೇಲೆ, ಮಕ್ಕಳ ಮೇಲೆ, ವೈರಾಗ್ಯ ಬರುತ್ತದೆ. ಇಲ್ಲದ ಅಸಹನೆ ಶುರುವಾಗುತ್ತದೆ, ಚಿಕ್ಕಪುಟ್ಟ ವಿಚಾರ, ಮಾತುಕತೆಗಳಿಗೆ ಜಗಳವಾಗುತ್ತದೆ, ನೀವು ಹೇಳಿದ್ದು ಅವರಿಗೆ ಅರ್ಥವಾಗುವುದಿಲ್ಲ ಅವರು ಹೇಳಿದ್ದು ನಿಮಗೆ ಅರ್ಥವಾಗುವುದಿಲ್ಲ, ಕಲಹ ಪೂರ್ಣ ಕುಟುಂಬವಾಗಿ ನಿಮ್ಮ ಕುಟುಂಬವಾಗುತ್ತದೆ.

ಮನೆಯಲ್ಲಿ ಲಕ್ಷ್ಮಿ ನೆಲಸಬೇಕು ಎನ್ನುವವರು ಯಾವುದೇ ಕಾರಣಕ್ಕೂ ಸಂಧ್ಯಾಕಾಲದಲ್ಲಿ ಮೈ ಗಾಗಲೇ, ತಲೆಗಾಗಲಿ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡಬಾರದು. ಅದೊಂದು ಅಪಭ್ರಂಶವಾಗಿ ಭೂತಪ್ರೇತಗಳ ಮನೆಯಾಗಿಬಿಡುತ್ತದೆ. ಇಷ್ಟೇ ಅಷ್ಟೈಶ್ವರ್ಯಗಳಿದ್ದರೂ ಈ ತಪ್ಪನ್ನು ಮಾಡಿದರೆ ಎಲ್ಲವೂ ನಾಶವಾಗುತ್ತದೆ. ಅಪಮಾನ ಅಪವಾದಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಮನೆಯಲ್ಲಿ ಮೊದಲು ಗಂಡನ ಮೋಹವನ್ನು ಕಳೆದುಕೊಳ್ಳುತ್ತೀರಿ. ಗಂಡನ ಪ್ರೀತಿಯನ್ನು ಕಳೆದುಕೊಳ್ಳುತ್ತೀರಿ. ಇದರಿಂದ ಗಂಡ ದುಷ್ಟನಾಗಿ ಬದಲಾಗುತ್ತಾರೆ. ಅಪ್ಪಿ ತಪ್ಪಿಯೂ ಕೂಡ ಇಂತಹದ್ದೊಂದು ತಪ್ಪು ಮಾಡಿದರೆ ಖಂಡಿತ ಸರ್ವನಾಶ.

ಸಂಧ್ಯಾಕಾಲದಲ್ಲಿ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದು ಮನೆಗೆ ಮಾರಿಯನ್ನು ಕರೆತಂದ ಹಾಗೆ, ನಿಮ್ಮ ದೇಹದಲ್ಲಿ ದುರ್ಗಂಧ ಬೀರಲು ಶುರುವಾಗುತ್ತದೆ, ಮನಸ್ಸು ವಿಚಿನ್ನವಾಗುತ್ತದೆ, ಮುಖ್ಯವಾಗಿ ಹೆಂಗಸರು  ಸೌಂದರ್ಯವನ್ನು ಕಳೆದುಕೊಳ್ಳುತ್ತೀರಿ. ಸ್ತ್ರೀಗೆ ಸೌಂದರ್ಯವೇ ಪ್ರದಾನ ಆದ್ದರಿಂದ ಈ ತಪ್ಪನ್ನು ಯಾರೂ ಕೂಡ ಮಾಡಲು ಹೋಗಬೇಡಿ. ಈ ತಪ್ಪುಗಳನ್ನ ಮಾಡಿದವರು  ಆ ಮನೆಯಲ್ಲಿನ ದುಷ್ಟಶಕ್ತಿಗಳನ್ನು ದೂರ ಓಡಿಸಲು ಮನೆಗೆ ಅಷ್ಟ ದಿಗ್ಬಂಧನ ಹಾಕಿ. ಸೂರ್ಯಾಸ್ತದ ಮೊದಲು ನಲವತ್ತ್ ನಾಲ್ಕು ನಿಮಿಷಗಳು ಸೂರ್ಯಾಸ್ತಮವಾದ ನಂತರ ನಲವತ್ತ್ ನಾಲ್ಕು ನಿಮಿಷಗಳು  ಅಸುರ ಸಂಧ್ಯಾ ಗಳಿಗೆ ಈ ಕಾಲದಲ್ಲಿ ಮನೆಯ ದೇವರಿಗೆ ದೀಪ ಹಚ್ಚಿ ನೈವೇದ್ಯ ಇಟ್ಟು, ಆರತಿ ಮಾಡಿ ,ಧೂಪ ಹಚ್ಚಿ ಹೊಸಿಲಬಳಿ ತುಳಸಿ ಕಟ್ಟೆಯ ಬಳಿ ದೀಪ ಹಚ್ಚಿ ಗೊತ್ತೋ ಗೊತ್ತಿಲ್ಲದೆಯೋ ಮಾಡಿರುವ ತಪ್ಪಿಗಾಗಿ ದೇವರಲ್ಲಿ ಬೇಡಿಕೊಳ್ಳಿ ದೇವಿಗೆ ಕುಂಕುಮಾರ್ಚನೆ ಯನ್ನ ಮಾಡಿಕೊಳ್ಳಿ ಇದರಿಂದ ಎಪ್ಪತ್ತರಷ್ಟು ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತವೆ.

ಇದರಿಂದ ಅದ್ಬುತವಾದ ಪ್ರಮೇಯ ವಾಗುತ್ತದೆ. ತಪ್ಪದೇ ನೂರ 8ದಿನಗಳ ಕಾಲ ನಿಯಮಬದ್ಧವಾಗಿ ಪೂಜೆ ಮಾಡಿ ಅಷ್ಟ ದಿಗ್ಬಂಧನಕ್ಕೆ ಧೂಪ ತೋರಿಸಿ. ಮನೆಯಲ್ಲಿ ದೇವಿಭಾಗವತ ಸುಂದರಕಾಂಡವನ್ನು ಸಂಧ್ಯಾಕಾಲ ದಲ್ಲಿ ಓದಿ ಇದರಿಂದ ದುಷ್ಟಶಕ್ತಿಗಳ ಪ್ರಭಾವ ಎಲ್ಲಾ  ತೊಲಗಿ ಹೋಗಿ  ಅದ್ಭುತವಾದ ದೈವಿಕ ಶಕ್ತಿಗಳು ನಮ್ಮ ಮನೆಗೆ ಬರುತ್ತವೆ. ಯಾವುದಾದರೂ ದೇವಿಯ ದೇವಸ್ಥಾನದಿಂದ ಅಭಿಷೇಕ ಮಾಡಿದ ಅರಿಶಿನವನ್ನು ತೆಗೆದು ಕೊಂಡು ಬನ್ನಿ ಆ ಅರಶಿನವನ್ನು ನಿತ್ಯ ಹಚ್ಚಿಕೊಳ್ಳಿ.  ನಿಮಗಿರುವ ತಡೆಗೋಡೆಗಳನ್ನು ನಿವಾರಿಸಿಕೊಂಡು ನೆಮ್ಮದಿಯ ತಾಣವನ್ನು ಕಾಣುತ್ತೀರ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ನೋಡಿ. ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವೀಡಿಯೊವನ್ನು ನೋಡಿ.

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷರಾಶಿ : ಅತ್ಯದ್ಭುತವಾಗಿರುವ ದಿನ, ಚಂದ್ರ ಗುರು ಮೂಲ ತ್ರಿಕೋನದಲ್ಲಿದ್ದಾರೆ. ಸೂರ್ಯ ಗುರು ಸಾರದಲ್ಲಿ ಇರುವುದರಿಂದ ಗುರು ದೃಷ್ಟಿಯಿಂದ ಅಂದುಕೊಂಡಿರುವ ಕೆಲಸ ಕಾರ್ಯಗಳಲ್ಲಿ ಗೌರವ ಸನ್ಮಾನ ಹೆಸರು ಪ್ರಗತಿಯನ್ನು ಕಾಣುತ್ತೀರ.

ವೃಷಭ ರಾಶಿ : ಮಕ್ಕಳು ಮನೆಯ ಚಿಂತೆಯಿಂದ ಒದ್ದಾಡುತ್ತೀರ, ಏಕಾದಶಿಯಾಗಿರುವುದರಿಂದ ರಾಮರ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ, ಮುನ್ನೂರು ಗ್ರಾಂ ನಷ್ಟಾದರು ಕಾಬೂಲ್ ಚೆನ್ನಾ ವನ್ನ ದಾನ ಮಾಡಿ ಒಳ್ಳೇದಾಗತ್ತೆ. 

ಮಿಥುನ ರಾಶಿ :  ಮಕ್ಕಳಿರುವವರಿಗೆ ಮಕ್ಕಳ ಚಿಂತೆ, ಮಕ್ಕಳಾಗದವರಿಗೆ ಮಕ್ಕಳಾಗಲಿಲ್ಲವೆಂಬ ಚಿಂತೆ. ಎಂಬ ಬಾಧೆಯ ಬೇಗುದಿಯಲ್ಲಿ ಬೇಯುತ್ತೀರ. ಇಂದು ಶಿವನ ದೇವಸ್ಥಾನಕ್ಕೆ ಹೋಗಿ ಬಿಲ್ವಾರ್ಚನೆ ಮಾಡಿಸಿ ಮನಸ್ಸಿಗೆ ಶಾಂತಿ ಸಿಗುತ್ತದೆ ಶುಭ ಸುದ್ದಿಯೊಂದನ್ನು ಕೇಳುತ್ತೀರ.

ಕರ್ಕಾಟಕ ರಾಶಿ : ಚಂದ್ರ ಸೂರ್ಯನ ಸಾರದಲ್ಲಿರೋದರಿಂದ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ವಿಶೇಷ ಪ್ರಗತಿ. ಗುರು ಸ್ವರೂಪದ ವ್ಯಕ್ತಿಯಿಂದ ಸಹಕಾರ.

ಸಿಂಹ ರಾಶಿ : ವಿಶೇಷ ಅನುಕೂಲವನ್ನು ನೋಡುವಂತಹಅದ್ಭುತವಾದ ದಿನ.  ಚಂದ್ರ ಸೂರ್ಯನ ಸಾರದಲ್ಲಿ ಇರುವುದರಿಂದ ತೊಂದರೆ ಏನೂ ಇಲ್ಲ ಆದರೆ ಅಳುಕಿನ ಭಾವವಿರುತ್ತದೆ. ಜಗನ್ಮಾತೆಯ ದರ್ಶನ ಮಾಡಿ ಧೈರ್ಯವನ್ನು ತಟ್ಟಿ ಎಬ್ಬಿಸುತ್ತದೆ.

ಕನ್ಯಾ ರಾಶಿ :  ಖರ್ಚು ಜಾಸ್ತಿ ದೊಡ್ಡವರ ವಿಚಾರ, ದೊಡ್ಡ ಕಾರ್ಯ, ದೊಡ್ಡ ಜವಾಬ್ದಾರಿಯ ಸ್ಥಾನದಲ್ಲಿದ್ದರೆ ದೊಡ್ಡದಾದ ಖರ್ಚಾಗುತ್ತದೆ ಒಳ್ಳೆಯದೇ ಆಗುತ್ತದೆ. 

ತುಲಾ ರಾಶಿ : ಲಾಭಕರ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಲಾಭ ಬರುತ್ತದೆ ಜೊತೆಗೆ ಖರ್ಚು ಕೂಡ ಆಗುತ್ತದೆ. ಕೋರ್ಟಿನ  ಸಮಸ್ಯೆಗಳೇನಾದರೂ ಇದ್ದರೆ ಒದ್ದಾಡುತ್ತೀರ.

ವೃಶ್ಚಿಕ ರಾಶಿ : ದಳಪತಿ ದಂಡನಾಯಕನಾಗಿ ಮುಂದಕ್ಕೆ ಹೆಜ್ಜೆ ಹಾಕಿ ಸ್ವಲ್ಪ ಅಭದ್ರತಾ ಭಾವನೆ ಇರುತ್ತದೆ ವಿನಾಯಕನ ಪೂಜೆ ಮಾಡಿ ಮುಂದಕ್ಕೆ ಹೆಜ್ಜೆ ಹಾಕಿ.

ಧನಸ್ಸು ರಾಶಿ : ಅದೃಷ್ಟ ಕೆಲಸಕಾರ್ಯ ನ್ಯಾಯಬದ್ಧವಾಗಿ ಸತತ ಪ್ರಯತ್ನದಿಂದ ಮುಂದಕ್ಕೆ ಹೆಜ್ಜೆ ಇಟ್ಟರೆ ಗೆಲುವು ಕಟ್ಟಿಟ್ಟ ಬುತ್ತಿ.

ಮಕರ ರಾಶಿ : ತಂದೆ ತಾಯಿ ಹಿರಿಯರ ಜೊತೆ ವಾದ ವಿವಾದಕ್ಕೆ ಇಳಿದು ಬಿಡುತ್ತೀರಾ ಅವರ ಆರೋಗ್ಯದ ಕಡೆ ಗಮನ ಕೊಡಿ, ವಾದ ಮಾಡಲು ಹೋಗಬೇಡಿ. 

ಕುಂಭ ರಾಶಿ : ತಿಳಿದವರ ಜೊತೆ ಚರ್ಚೆ ಮಾಡುವುದು ಒಳ್ಳೆಯದು ಆದರೆ ಅವರ ವಿಚಾರಗಳನ್ನು ತೆಗೆದು ಕೊಳ್ಳದೆ ನಿಮಗೆ ನೀವೇ ದೊಡ್ಡವರು ಎಂದುಕೊಳ್ಳುವುದು ತಪ್ಪು. ದೊಡ್ಡವರ ಹಿರಿಯರ ಮಾತುಗಳನ್ನು ಕೇಳಿ ಅದಕ್ಕೆ ತಕ್ಕಂತೆಯೇ ಹೆಜ್ಜೆ ಹಾಕಿ ಒಳ್ಳೆಯದು. 

ಮೀನ ರಾಶಿ : ಹೊಟ್ಟೆ ನೋವಿನ ಸಮಸ್ಯೆಯಿಂದ ಒದ್ದಾಡುತ್ತೀರ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಒದ್ದಾಡುತ್ತೀರ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ 1 ಚಿಟಿಕೆಯಷ್ಟು ಶುದ್ಧ ಬೇವಿನ ಎಣ್ಣೆಯನ್ನು ಸೇವಿಸಿ. 

Comments are closed.