ಸಂಪಾದಕಿಯಾದ ರಶ್ಮಿಕಾ ಮಂದಣ್ಣ…! ಕಿತ್ತಲೆಹಣ್ಣಿಗೆ ಮುತ್ತಿಟ್ಟು ಸುದ್ದಿ ಹಂಚಿಕೊಂಡ ಕೊಡಗಿನ ಬೆಡಗಿ…!!

ಸಾಲು-ಸಾಲು ಚಿತ್ರಗಳಲ್ಲಿ  ಬ್ಯುಸಿಯಾಗಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇದೀಗ ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ಹೌದು ನಟನೆಯ ಜೊತೆಗೆ ರಶ್ಮಿಕಾ ಸಂಪಾದಕಿಯಾಗಲು ಹೊರಟಿದ್ದಾರೆ. ಇಷ್ಟಕ್ಕೂ ರಶ್ಮಿಕಾ ಎಡಿಟರ್ ಆಗ್ತಿರೋದು ನ್ಯೂಸ್ ವೆಬ್ ಗೆ ಅಂದ್ಕೊಂಡ್ರಾ ಖಂಡಿತಾ ಅಲ್ಲ…. ಮತ್ಯಾವುದಕ್ಕೆ ಇಲ್ಲಿದೆ ಡಿಟೇಲ್ಸ್…!

ಮೆಗಾಸ್ಟಾರ್ ಚಿರಂಜೀವಿ ಸೊಸೆ ಹಾಗೂ ರಾಮಚರಣ್ ಪತ್ನಿ ಉಪಾಸನಾ ಆರೋಗ್ಯ,ಲೈಫ್ ಸ್ಟೈಲ್ ಗೆ ಸಂಬಂಧಿಸಿದಂತೆ ವೆಬ್ ಸೈಟ್ ವೊಂದನ್ನು ಆರಂಭಿಸಿದ್ದಾರೆ. ಉಪಸನಾ ಈ ಸಾಹಸಕ್ಕೆ ರಶ್ಮಿಕಾ ಮಂದಣ್ಣ ಕೈಜೋಡಿಸಿದ್ದು ಈ ವೆಬ್ ಸೈಟ್ ಗೆ ಕೊಡಗಿನ ಬೆಡಗಿ ರಶ್ಮಿಕಾ ಅತಿಥಿ ಸಂಪಾದಕಿಯಾಗಿದ್ದಾರೆ.

ಇದಕ್ಕಾಗಿ ರಶ್ಮಿಕಾ ಮಂದಣ್ಣ ಹೊಸ ಪೋಟೋಶೂಟ್ ಕೂಡ ಮಾಡಿಸಿದ್ದು, ಅರೇಂಜ್ ಕೈಯಲ್ಲಿ ಹಿಡಿದು ಹಾಟ್ ಹಾಟ್ ಪೋಟೋಗಳಿಗೆ ಪೋಸ್ ನೀಡಿದ್ದಾರೆ. ಉಪಾಸನಾ ಈ ವೆಬ್ ಸೈಟ್ ಮೂಲಕ ಆರೋಗ್ಯ, ಲೈಫ್ ಸ್ಟೈಲ್, ಮಾನಸಿಕ ದೈಹಿಕ ಸ್ವಾಸ್ಥ್ಯದ ಬಗ್ಗೆ ಟಿಪ್ಸ್ ಹಾಗೂ ಆರ್ಟಿಕಲ್ಸ್ ಶೇರ್ ಮಾಡಲು ಹೊರಟಿದ್ದು, ಈ ವಿಚಾರಗಳಿಗೆ ಸಖತ್ ಸರಿಹೊಂದುವ ಕಾರಣಕ್ಕೆ ರಶ್ಮಿಕಾ ಅತಿಥಿ ಸಂಪಾದಕಿಯಾಗಿ ಆಯ್ಕೆಯಾದಂತಿದೆ.

ರಶ್ಮಿಕಾ ಸದಾ ನಗುಮೊಗದಿಂದಲೇ ಎಲ್ಲವನ್ನು ಹ್ಯಾಂಡಲ್ ಮಾಡುವ ಸಖತ್ ಪಾಸಿಟಿವ್ ವೈಬ್ಸ್ ಇರುವ ಹುಡುಗಿ. ಇದನ್ನು ಹಲವಾರು ಸಂದರ್ಭದಲ್ಲಿ ರಶ್ಮಿಕಾ ಸಾಬೀತುಪಡಿಸಿದ್ದಾರೆ. ಇದೇ ವಿಚಾರಧಾರೆ ವೆಬ್ ಸೈಟ್ ನಲ್ಲೂ ಮುಂದುವರೆಯಲಿದೆ. ಇದಲ್ಲದೇ ರಶ್ಮಿಕಾಗೆ ಇನ್ಸಸ್ಟಾಗ್ರಾಂನಲ್ಲಿ ಸಾಕಷ್ಟು ಪಾಲೋವರ್ಸ್ ಕೂಡ ಇದ್ದು, ಈ ಸಂಖ್ಯೆ 10 ಮಿಲಿಯನ್ ದಾಟಿದೆ.  ಇದು ಕೂಡ ವೆಬ್ ಸೈಟ್ ಬೆಳವಣಿಗೆಗೆ ಸಹಾಯವಾಗಲಿದೆ ಅನ್ನೋದು ಉಪಾಸನಾ ಲೆಕ್ಕಾಚಾರ.

ಮೊನ್ನೆಯಷ್ಟೇ ತಮ್ಮ ಪುಷ್ಪ ಸಿನಿಮಾಗಾಗಿ ಗ್ರಾಮೀಣ ಸೊಗಡಿನ ತೆಲುಗು ಕಲಿಯಲು ಮುಂದಾಗಿದ್ದ ರಶ್ಮಿಕಾ ಈಗ ಈ ನಿಂಬೆಹಣ್ಣಿನಂತ ಹುಡುಗು ನೋಡು ಎಂಬಂತೆ ಹೊಸ ಪೋಟೋಶೂಟ್ ನಲ್ಲಿ ಮಿಂಚಿದ್ದು, ಅಭಿಮಾನಿಗಳಂತೂ ಸಖತ್ ಖುಷಿಯಾಗಿದ್ದಾರೆ.

Comments are closed.