ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 10-10-2020

ನಿತ್ಯಭವಿಷ್ಯ : 10-10-2020

- Advertisement -

ಮೇಷರಾಶಿ
ಆರ್ಥಿಕ ಅನುಕೂಲ, ತಂದೆಯಿಂದ ಸಹಾಯ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಪ್ರಯಾಣದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ಬಂಧುಗಳಿಂದ ಮಾನಹಾನಿ. ಗೃಹೋಪಕರಣ ಹಾಗೂ ಗೃಹಾಲಂಕಾರ ಮುಂತಾದ ವಿಲಾಸೀ ಸಾಮಗ್ರಿಗಳ ಖರೀದಿ ಗಾಗಿ ಧನವ್ಯಯ ತಂದೀತು. ಮನೆಯಲ್ಲಿ ಹಳೇ ಮಾದರಿಯ ಸಾಮಗ್ರಿಗಳ ಬದಲಾವಣೆಯ ಸಾಧ್ಯತೆ ಇರುತ್ತದೆ.

ವೃಷಭರಾಶಿ
ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಬಾಂಧ‌ವ್ಯ ಗಟ್ಟಿಯಾಗಲಿದೆ. ಅನಿರೀಕ್ಷಿತವಾಗಿ ಸಾಲ ಮಾಡುವಿರಿ, ಸ್ತ್ರೀಯರಿಂದ ಗೌರವಕ್ಕೆ ಧಕ್ಕೆ, ಆರೋಗ್ಯ ವ್ಯತ್ಯಾಸಗಳು, ಮಿತ್ರರಿಂದ ನಷ್ಟ,ಧನಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ವೃತ್ತಿಯಲ್ಲಿ ಹೊಣೆಗಾರಿಕೆ ಹೆಚ್ಚಿದ್ದು ಅದನ್ನು ಸರಿಯಾಗಿ ನಿಭಾಯಿಸುವಿರಿ. ಮನೆಯಲ್ಲಿ ಮಕ್ಕಳೊಂದಿಗಿನ ಸಂಬಂಧ ಗಟ್ಟಿಯಾಗಲಿದೆ.

ಮಿಥುನರಾಶಿ
ಉತ್ಸಾಹದ ಚಿಲುಮೆಯಂತಿದ್ದ ನಿಮಗೆ ಸಂತಸದ ದಿನಗಳಿವು. ಶುಭಕಾರ್ಯಗಳ ಯೋಚನೆ, ಮಕ್ಕಳ ಭವಿಷ್ಯದ ಚಿಂತೆ, ವ್ಯಾಪಾರ-ವ್ಯವಹಾರದ ಮುನ್ಸೂಚನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಕಾರ್ಯಜಯ, ಉದ್ಯೋಗ ಪ್ರಗತಿ. ಹಳೇ ದಿನಗಳಲ್ಲಿ ಬಾಕಿಯಾದ ಕೆಲಸಗಳು ಒಂದೊಂದಾಗಿ ಪೂರ್ಣಗೊಂಡೀತು. ಪ್ರಯತ್ನ ಶ್ರಮದ ಅಗತ್ಯವಿದೆ. ಸಾಂಸಾರಿಕವಾಗಿ ಸಂತಸ.

ಕಟಕರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ, ತಾಯಿಂದ ಅನುಕೂಲ, ಆಸ್ತಿ ಸಮಸ್ಯೆ ಬಗೆಹರಿಯುವುದು, ಮಧ್ಯಸ್ಥಿಕೆ ಯಿಂದ ಸಮಸ್ಯೆಗೆ ಪರಿಹಾರ. ಸಮಾಧಾನ ಹಾಗೂ ತಾಳ್ಮೆಯು ನಿಮ್ಮ ಪ್ರತಿರೂಪವಾಗಿದೆ. ನಿಮಗೆ ವೃತ್ತಿರಂಗ ಹಾಗೂ ಆರ್ಥಿಕ ರಂಗ ದಲ್ಲೂ ಬುದ್ಧಿವಂತಿಕೆಯಿಂದ ಕೆಲಸ ನಿಭಾಯಿಸುವ ಅಗತ್ಯ ಕಂಡು ಬಂದೀತು. ಶುಭವಿದೆ.

ಸಿಂಹರಾಶಿ
ಮಕ್ಕಳಲ್ಲಿ ಪ್ರಗತಿ, ಬಂಧುಗಳಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಧನಸಹಾಯ, ದುಃಸ್ವಪ್ನಗಳು, ಉದ್ಯೋಗ ಬದಲಾವಣೆ ಆಲೋಚನೆ. ಎಲ್ಲಾ ನೀವು ಕೈಗೊಂಡ ಕೆಲಸ ಕಾರ್ಯದಲ್ಲಿ ಅಡ್ಡಿ ಆತಂಕಗಳು ಎದುರಾದೀತು. ಆದರೂ ಧೈರ್ಯದಿಂದ ಮುನ್ನಡೆವ ಆವಶ್ಯಕತೆ ಇದೆ. ಮಿತ್ರರ ಜೊತೆಗೆ ಭೇಟಿಯು ನೀರಸವಾದೀತು

ಕನ್ಯಾರಾಶಿ
ಕಾರ್ಯರಂಗದಲ್ಲಿ
ಹಲವು ಸವಾಲುಗಳನ್ನು ಎದುರಿಸುವ ಆವಶ್ಯಕತೆಯು ನಿಮಗೆಂದು ಕೂಡಿ ಬಂದೀತು. ಮಾತಿನಿಂದ ಕುಟುಂಬದಲ್ಲಿ ಕಲಹ, ಉದ್ಯೋಗ ಸಮಸ್ಯೆಗೆ ಮುಕ್ತಿ, ಶುಭಕಾರ್ಯದ ಯೋಚನೆ, ಹೊಸ ವಾಹನ ಖರೀದಿ, ಸಮಯ ಮುಂದೂಡುವುದು, ಮಹಿಳೆಯರಿಂದ ನಿಂದನೆ. ಆದರೆ ದಿಟ್ಟರಾದ ನೀವು ಸಮರ್ಥರಾಗಿ ಎದುರಿಸುವಿರಿ. ಕಿರು ಸಂಚಾರವಿದೆ.

ತುಲಾರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ಶತ್ರು ಮತ್ತು ಸಾಲಭಾದೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ತಂದೆಯಿಂದ ಅಪವಾದ, ಪ್ರಯಾಣದಲ್ಲಿ ಮೋಸ, ಬಂಧುಗಳ ಆಗಮನ. ಸಾಂಸಾರಿಕ ಜೀವನ ಹಾಗೂ ವೃತ್ತಿರಂಗದಲ್ಲಿ ನಿಮಗೆ ಜವಾಬ್ದಾರಿಯು ಬಂದು ಬೀಳಲಿದೆ. ಮನೆಯ ಹಿರಿಯ ಜೀವಿಗಳಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸೀತು. ಕೋರ್ಟಿನಲ್ಲಿ ಏರುಪೇರು.

ವೃಶ್ಚಿಕರಾಶಿ
ಅನಾವಶ್ಯಕವಾಗಿ ಚಿಂತೆ ಮಾಡಿ ಜೀವ ಹಾಳು ಗೈಯುವಿರಿ. ಧನ ನಷ್ಟಗಳು, ಅದೃಷ್ಟ ಕೈ ತಪ್ಪುವುದು, ಧನಾಗಮನ, ಮಕ್ಕಳಿಗಾಗಿ ಅಧಿಕ ಖರ್ಚು, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ, ಭವಿಷ್ಯ ಮಂಕು, ದುಷ್ಟ ವ್ಯಕ್ತಿಗಳ ಸಹವಾಸ. ನಿಮ್ಮತನವನ್ನು ನೀವಿಟ್ಟುಕೊಳ್ಳಿರಿ. ತೂಕದ ಮಾತನ್ನು ಆಡುವುದು ಉತ್ತಮ. ಮನೆಮಂದಿಯೆಲ್ಲಾ ವಿಹಾರಾರ್ಥ ಹೊರಟಾರು.

ಧನಸ್ಸುರಾಶಿ
ಖಾಸಗಿ ಜೀವನ ಹಾಗೂ ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳನ್ನು ಕಂಡು ಸಹೋದ್ಯೋಗಿಗಳು ಸಂತೋಷಪಟ್ಟಾರು. ಆರ್ಥಿಕ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಸಂಕಷ್ಟಗಳಿಂದ ಮುಕ್ತಿ, ಉದ್ಯೋಗ ಬದಲಾವಣೆಯಿಂದ ತೊಂದರೆ, ಸಂಗಾತಿಯಿಂದ ನೆರವು, ಶುಭ ಕಾರ್ಯಗಳ ಚರ್ಚೆ, ದುಷ್ಟ ಆಲೋಚನೆ, ಆರೋಗ್ಯದಲ್ಲಿ ಏರುಪೇರು. ಆದರೂ ಮನಸ್ಸಿನಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ನಿಶ್ಚಿಂತರಾಗಿರಿ.

ಮಕರರಾಶಿ
ಪ್ರೀತಿ-ಪ್ರೇಮದ ಆಯ್ಕೆಯಲ್ಲಿ ತಪ್ಪು ನಿರ್ಧಾರ, ದೈವ ಚಿಂತನೆ, ಸಂಗಾತಿಯಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ, ಸಹೋದ್ಯೋಗಿಗಳಿಂದ ಗೌರವಕ್ಕೆ ಚ್ಯುತಿ, ಪ್ರಯಾಣ ಮಾಡುವ ಸನ್ನಿವೇಶ. ಗೃಹ ಖರೀದಿಯ ಜಾಗ ಖರೀದಿಯ ವಿಷಯದಲ್ಲಿ ಸ್ವಲ್ಪ ವಿಳಂಬ ತಂದೀತು. ಆದರೂ ಕೆಲಸವು ಪೂರ್ಣಗೊಳ್ಳಲಿದೆ. ನಿಧಾನಗತಿಯು ಸಲ್ಲದು. ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿರಿ.

ಕುಂಭರಾಶಿ
ತಂದೆಯಿಂದ ಆರ್ಥಿಕ ಸಹಾಯ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಉತ್ತಮ ಅವಕಾಶಗಳು ಪ್ರಾಪ್ತಿ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಎಲ್ಲರೊಂದಿಗೆ ಸ್ನೇಹಪರವಾಗಿ ಇರುವ ನಿಮ್ಮ ಗುಣವು ಅಚ್ಚುಮೆಚ್ಚು. ನೀವು ಇದನ್ನೇ ಪಾಲಿಸುವುದು ಅಗತ್ಯವಿದೆ. ನಿಮ್ಮ ಪತ್ನಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಶುಭವಿದೆ.

ಮೀನರಾಶಿ
ಕೌಟುಂಬಿಕವಾಗಿ ಮಂಗಲಕಾರ್ಯದ ಆಗಮನ ಬಗ್ಗೆ ಸಂತಸ ಪಡುವಿರಿ. ಅನಿರೀಕ್ಷಿತವಾಗಿ ಅವಕಾಶಗಳು ಕೈ ತಪ್ಪುವುದು, ಉದ್ಯೋಗದಲ್ಲಿ ಒತ್ತಡ, ಸಂಗಾತಿಯಿಂದ ಕಿರಿಕಿರಿ ಮತ್ತು ಬೇಸರ, ತಾಯಿಯೊಂದಿಗೆ ವಾಗ್ವಾದ, ವಿದ್ಯಾಭ್ಯಾಸದಲ್ಲಿ ಅನುಕೂಲ, ಅನಿರೀಕ್ಷಿತವಾಗಿ ಧನ ಸಂಪಾದನೆ. ಎಷ್ಟೋ ಸಮಯದಿಂದ ನಿರೀಕ್ಷಿಸುತ್ತಿದ್ದ ಆ ದಿನವು ಹತ್ತಿರ ಬರಲಿದೆ. ನಿರಾಶರಾಗದಿರಿ. ಪ್ರಯತ್ನಿಸುವುದು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular