ನಿತ್ಯಭವಿಷ್ಯ : 08-12-2020

ಮೇಷರಾಶಿ
ಶುಭಮಂಗಲ ಕಾರ್ಯಗಳಿಗಾಗಿ ಸಂಚಾರ, ಆರೋಗ್ಯ ವೃದ್ದಿಯಾಗಲಿದೆ, ಮಕ್ಕಳ ವಿಚಾರದಲ್ಲಿ ಕಾರ್ಯಪ್ರವೃತ್ತರಾಗುವ ಸಂಭವ, ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ, ಧನ ಸಂಗ್ರಹ ಉತ್ತಮ, ಅಧಿಕ ಖರ್ಚಿನಿಂದ ಆತಂಕ, ಸರಕಾರಿ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿದೆ.

ವೃಷಭರಾಶಿ
ಸಾಂಸಾರಿಕವಾಗಿ ಸಮಸ್ಯೆಗಳು ತಲೆದೋರಲಿದೆ, ಆಕಸ್ಮಿಕವಾಗಿ ದೂರ ಸಂಚಾರಕ್ಕೆ ಹೊರಡುವ ಸಾಧ್ಯತೆ, ಆರೋಗ್ಯದಲ್ಲಿ ಸುಧಾರಣೆ, ಯಾವುದೇ ಕಾರಣಕ್ಕೂ ಉದಾಸೀನತೆ ಬೇಡ, ವೃತ್ತಿ ರಂಗದಲ್ಲಿ ಮುನ್ನಡೆ ಕಂಡು ಬರಲಿದೆ, ಧನಾಗಮನಕ್ಕೆ ಕೊರತೆಯಿರದು.

ಮಿಥುನರಾಶಿ
ಯಾವುದೇ ರೀತಿಯ ಅಡೆತಡೆಗಳಿದ್ದರೂ ಕೂಡ ಮೇಲುಗೈ ಸಾಧಿಸುವಿರಿ, ವ್ಯಾಪಾರ, ವ್ಯವಹಾರಸ್ಥರಿಗೆ ಲಾಭ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಏಳಿಗೆ ಕಂಡುಬರಲಿದೆ, ಗುಡಿ ಹಾಗೂ ಕರಕುಶಲ ಕರ್ಮಿಗಳಿಗೆ ಲಾಭ, ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ಕರ್ಕಾಟಕರಾಶಿ
ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗಳಿಸುವಿರಿ, ಇಚ್ಚಿತ ಕಾರ್ಯಗಳಲ್ಲಿ ಯಶಸ್ಸು, ರಾಜಕಾರಣಿಗಳಿಗೆ ಉತ್ತಮ ಬೆಂಬಲ ವ್ಯಕ್ತವಾಗಲಿದೆ, ಹೊಸ ಕಾರ್ಯದ ಆರಂಭ ಸಾಧ್ಯತೆ, ಸ್ವ ಉದ್ಯೋಗಸ್ಥರಿಗೆ ನಿರೀಕ್ಷೆಗೂ ಮೀರಿದ ಲಾಭ ಕಂಡು ಬರಲಿದೆ, ಮನೆಯಲ್ಲಿ ನೆಮ್ಮದಿಯ ವಾತಾವರಣ.

ಸಿಂಹರಾಶಿ
ರಾಹುಬಲ ಉತ್ತಮವಿದ್ದು ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಗೋಚರಕ್ಕೆ ಬರಲಿದೆ, ಆರ್ಥಿಕವಾಗಿ ಖರ್ಚು ವೆಚ್ಚಗಳಿದ್ದರೂ ಕೂಡ ಹಣಕಾಸಿನ ಪರಿಸ್ಥಿತಿ ನಿರಾಳವೆನಿಸಲಿದೆ, ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ, ಹಲವು ಭಿನ್ನಾಭಿಪ್ರಾಯಗಳು ಹಂತ ಹಂತವಾಗಿ ಕರಗಿಹೋಗಲಿದೆ.

ಕನ್ಯಾರಾಶಿ
ಸಮಚ್ಚಿತದಿಂದ ವ್ಯವಹರಿಸಿದ್ರೆ ಎಲ್ಲಾ ವಿಚಾರಗಳಲ್ಲಿಯೂ ನಿಮ್ಮ ಹಾದಿ ಸುಗಮವೆನಿಸಲಿದೆ, ಆತ್ಮವಿಶ್ವಾಸದಿಂದ ಕಾರ್ಯರಂಗದಲ್ಲಿ ಧುಮುಕಿದ್ರೆ ಯಶಸ್ಸು, ನಿಶ್ಚಿತ ರೂಪದಲ್ಲಿ ಮುಂದುವರಿದ್ರೆ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ, ಗೃಹ ನಿರ್ಮಾಣದ ಕಾರ್ಯಗಳು ಅಡೆಗಳಿಂದ ನಡೆಯಲಿದೆ, ಶುಭ ಕಾರ್ಯದ ಕುರಿತು ಹಿರಿಯರೊಂದಿಗೆ ಮಾತುಕತೆ.

ತುಲಾರಾಶಿ
ಸಾಕಷ್ಟು ಅವಕಾಶಗಳು ಒದಗಿ ಬರಲಿದೆ, ಸದುಪಯೋಗ ಪಡಿಸಿಕೊಂಡ್ರೆ ಯಶಸ್ಸು ಖಚಿತ, ಪ್ರಮಾಣಿಕತೆಗೆ ತಕ್ಕ ಫಲ ಲಭಿಸಲಿದೆ, ಕೆಲಸ ಕಾರ್ಯಗಳಲ್ಲಿ ಯಶಸ್ಸಿಯಾಗುತ್ತೀರಿ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ, ವ್ಯವಹಾರಗಳಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವಿರಿ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದ ಅಗತ್ಯವಿದೆ.

ವೃಶ್ಚಿಕರಾಶಿ
ಆರ್ಥಿಕ ಸ್ಥಿತಿ ಏರುಪೇರಾಗಿದ್ದರೂ ದೈವಾನುಗ್ರಹದಿಂದ ಆದಾಯ ವೃದ್ದಿಸಲಿದೆ, ಆತ್ಮೀಯರ ಸಹಕಾರದಿಂದ ಕಾರ್ಯಸಿದ್ದಿಯಾಗಲಿದೆ, ಅವಿವಾಹಿತರಿಗೆ ವಿವಾಹ ಭಾಗ್ಯ, ವೃತ್ತಿರಂಗದಲ್ಲಿ ಯಶಸ್ಸು, ಸಾಮಾಜಿಕ ಕ್ಷೇತ್ರಗಳಲ್ಲಿ ಜನಾನುರಾಗದ ಅನುಭವ ಗೋಚರಕ್ಕೆ ಬರಲಿದೆ.

ಧನುರಾಶಿ
ಪ್ರೀತಿ, ಪ್ರೇಮಕ್ಕೆ ಪೂರಕವಾದ ಸಮಯ, ವಿದ್ಯಾರ್ಥಿಗಳು ಅಭ್ಯಾಸ ಬಲವನ್ನು ಹೆಚ್ಚಿಸಿಕೊಳ್ಳಬೇಕು, ಜೀವನ ಶೈಲಿ, ವಿಚಾರ ಚಿಂತೆಗಳನ್ನು ಬದಲಾಯಿಸಿಕೊಳ್ಳಲು ಸಕಾಲ, ದೈವಾನುಗ್ರಹದಿಂದ ಕೈಗೊಳ್ಳುವ ನಿರ್ಧಾರಗಳಲ್ಲಿ ಯಶಸ್ಸು, ಆತ್ಮವಿಶ್ವಾಸದಿಂದ ಮುನ್ನಡೆಯಿರಿ.

ಮಕರರಾಶಿ
ನಿಮ್ಮ ಕರ್ತವ್ಯ ಹೊಣೆಗಾರಿಕೆಯನ್ನು ಮರೆಯದಿರಿ, ಅಧಿಕ ರೀತಿಯಲ್ಲಿ ಖರ್ಚು ವೆಚ್ಚಗಳಿಂದ ಆತಂಕ, ಧನಾಗಮನ ಚೇತರಿಕೆಯನ್ನು ಕಾಣಲಿದೆ, ಕೆಲಸ ಕಾರ್ಯಗಳಲ್ಲಿ ವಿಘ್ನಗಳಿದ್ದರೂ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು, ಅವಿವಾಹಿತರಿಗೆ ಕಂಕಣ ಬಲ.

ಕುಂಭರಾಶಿ
ವಾಹನ ಖರೀದಿ ಯೋಗ, ಕೋರ್ಟ್ ಕಚೇರಿಗಳಲ್ಲಿನ ಕೇಸುಗಳಲ್ಲಿ ಯಶಸ್ಸು ನಿಮ್ಮದಾಗಲಿದೆ, ವೈವಾಹಿಕ ಸಂಬಂಧಗಳಲ್ಲಿ ಅಡೆತಡೆಗಳಿರುತ್ತದೆ, ಆರ್ಥಿಕವಾಗಿ ತುಸು ಚೇತರಿಕೆ ಕಂಡು ಬರಲಿದೆ, ಕೆಲಸ ಕಾರ್ಯಗಳಿಗೋಸ್ಕರ ಅಲೆದಾಟ, ನಿಶ್ಚಿತ ಚಿಂತನೆಗಳು ಹಂತ ಹಂತವಾಗಿ ನೆರವೇರಲಿದೆ.

ಮೀನರಾಶಿ
ಪ್ರಯತ್ನಬಲದಿಂದ ಕಾರ್ಯಸಾಧನೆಗೆ ಅನುಕೂಲವಾಗಲಿದೆ, ವೃತ್ತಿರಂಗದಲ್ಲಿ ನಿರೀಕ್ಷಿತ ಉನ್ನತ ಸ್ಥಾನ ಪ್ರಾಪ್ತಿಯಾಗಲಿದೆ, ಗುತ್ತಿಗೆದಾರ ವೃತ್ತಿಯರಿಗೆ ಹೆಚ್ಚು ಲಾಭದಾಯಕ, ಸಾಹಸ, ಕ್ರೀಡಾಪಟುಗಳಿಗೆ ಮನ್ನಣೆ ಲಭಿಸಲಿದೆ, ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರಲಿದೆ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಹೊಸ ಉತ್ಸಾಹ ವೃದ್ದಿಸಲಿದೆ, ವಾಹನ ಖರೀದಿ ಯೋಗ. ದಿನಾಂತ್ಯಕ್ಕೆ ಶುಭವಾರ್ತೆಯನ್ನು ಕೇಳುವಿರಿ.

Comments are closed.