ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 26-08-2020

ನಿತ್ಯಭವಿಷ್ಯ : 26-08-2020

- Advertisement -

ಮೇಷರಾಶಿ
ತಾಳ್ಮೆಯಿಂದ ವರ್ತಿಸಿ, ಸಾಂಸಾರಿಕವಾಗಿ ಉತ್ತಮ ಕೆಲಸವಾಗಲಿದೆ. ಕಾರ್ಯರಂಗದಲ್ಲಿ ನಿಮ್ಮ ವಿರೋಧಿಗಳನ್ನು ನೀವು ಸಮರ್ಥವಾಗಿ ಎದುರಿಸಲು ಈ ಕಾಲದಲ್ಲಿ ಶಕ್ತರಾಗುವಿರಿ. ವಾಸ ಸ್ಥಳದ ಬದಲಾವಣೆ ಇರುತ್ತದೆ. ನ್ಯಾಯಾಲಯದ ತೀರ್ಪಿಗಾಗಿ ಪರದಾಟ, ಉದರ ಬಾಧೆ, ಮನಸ್ತಾಪ, ಅನಾರೋಗ್ಯ.

ವೃಷಭರಾಶಿ
ಮಾತಿನ ಮೇಲೆ ಹಿಡಿತವಿರಲಿ, ಅಧೀನ ನೌಕರರಿಂದ ಅಡಚಣೆಗಳು ಕಂಡು ಬರಲಿವೆ. ವ್ಯವಹಾರಗಳು ಉತ್ತಮಗೊಳ್ಳಲಿವೆ. ದುರ್ಜನರ ಸಂಪರ್ಕದಿಂದ ಕಷ್ಟನಷ್ಟಗಳಿವೆ. ರೋಗ ನಿವೃತ್ತಿಯಾಗುತ್ತಾ ಆತ್ಮಸ್ಥೈರ್ಯವು ವೃದ್ಧಿಸಲಿದೆ. ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ.

ಮಿಥುನರಾಶಿ
ಆರ್ಥಿಕವಾಗಿ ಉನ್ನತಿ ತೋರಿ ಬರಲಿದೆ. ವ್ಯವಹಾರದಲ್ಲಿ ಜಯ ಸಿಗಲಿದೆ, ಪಾಲುದಾರಿಕೆ ವ್ಯವಹಾರ ಸದ್ಯಕ್ಕೆ ಬೇಡ, ವಿವಾಹ ಯೋಗ, ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು, ನೌಕರ ವರ್ಗದವರಿಗೆ ಪ್ರಗತಿಯು ಲಭಿಸುವುದು. ಮಕ್ಕಳ ಅನಾರೋಗ್ಯ, ವಿಪರೀತ ಖರ್ಚು.

ಕಟಕರಾಶಿ
ಸಾಂಸಾರಿಕವಾಗಿ ಉತ್ತಮ ಅಭಿವೃದ್ಧಿ ಇರುವುದು, ಮಾರ್ಗ ಸಂಚಾರದಲ್ಲಿ ದುಃಖವನ್ನು ಅನುಭವಿಸುವಿರಿ. ಅವಿವಾಹಿತರಾಗಿದ್ದಲ್ಲಿ ಶೀಘ್ರವೇ ವಿವಾಹಯೋಗ ಕಂಡು ಬರಲಿದೆ. ಸಂತಾನಪೇಕ್ಷಿಗಳಿಗೆ ಸಂತಾನಭಾಗ್ಯ , ಉತ್ತಮ ಬುದ್ಧಿಶಕ್ತಿ, ಆತ್ಮವಿಶ್ವಾಸ ಹೆಚ್ಚಾಗುವುದು, ಮನಃಶಾಂತಿ, ವೈವಾಹಿಕ ಜೀವನದಲ್ಲಿ ನೆಮ್ಮದಿ.

ಸಿಂಹರಾಶಿ
ಕಾರ್ಯಕ್ಷೇತ್ರದಲ್ಲಿ ಒತ್ತಡ, ಪ್ರೀತಿ ಪಾತ್ರರು ಅಥವಾ ಸಮೀಪದ ಬಂಧುಗಳು ನಿಮಗೆ ಸಹಕಾರ ನೀಡಲಿದ್ದಾರೆ ಪತ್ನಿ ಹಾಗೂ ಮಕ್ಕಳ ಸುಖವು ಸಮಾಧಾನಕರವಾದೀತು. ವಿವಿಧ ಮೂಲಗಳಿಂದ ಧನಪ್ರಾಪ್ತಿಯಾಗಿ ಸಮಾಧಾನವಾದೀತು. ಮಹಿಳೆಯರಿಗೆ ಶುಭ, ಕೃಷಿಯಲ್ಲಿ ಲಾಭ, ಇಷ್ಟಾರ್ಥ ಸಿದ್ಧಿ, ವಾಹನ ಯೋಗ.

ಕನ್ಯಾರಾಶಿ
ಅಹಂಕಾರದಿಂದ ನಾನಾ ರೀತಿಯ ಅನರ್ಥಗಳು ಎದುರಾದಾವು, ಮಾನಸಿಕ ತೊಂದರೆ, ವ್ಯಾಪಾರ ವ್ಯವಹಾರಗಳಲ್ಲಿ ತಾಳ್ಮೆ ಅಗತ್ಯ, ಭೂ ಸಂಬಂಧಿ ವ್ಯವಹಾರಗಳು ಈಗ ಸುಲಭದಲ್ಲಿ ನಡೆಯಲಿವೆ. ಧನ ವಿವಿಧ ರೀತಿಯಲ್ಲಿ ಖರ್ಚಾದೀತು. ಶನಿಯ ಪ್ರತಿಕೂಲತೆ ಕಂಡು ಬಂದೀತು. ಮಾತಿನ ಮೇಲೆ ಹಿಡಿತವಿರಲಿ, ಶತ್ರು ಬಾಧೆ.

ತುಲಾರಾಶಿ
ದೈಹಿಕವಾಗಿ ಆರೋಗ್ಯ ಭಾಗ್ಯವು ಉತ್ತಮಗೊಳ್ಳಲಿದೆ, ಹಣಕಾಸಿನ ವಿಚಾರದಲ್ಲಿ ಎಚ್ಚರ, ಕಾರ್ಯ ವೈಖರಿಯಲ್ಲಿ ಸ್ವಲ್ಪ ವಿಳಂಬ, ಶುಭಕಾರ್ಯಗಳಿಗೆ ಇತರರಿಂದ ಪ್ರಶಂಸೆ ಹಾಗೂ ನಿಮ್ಮ ಬಗ್ಗೆ ಅಭಿಮಾನವು ಮೂಡಲಿದೆ.ನಿಮ್ಮಲ್ಲಿ ಅಂತರಿಕ ಧೈರ್ಯ ಹಾಗೂ ಪ್ರಚೋದನೆ ಉಂಟಾಗಲಿದೆ. ಮಾನಹಾನಿ, ಗೆಳೆಯರಿಂದ ಅನರ್ಥ.

ವೃಶ್ಚಿಕರಾಶಿ
ಹೊಸ ಪ್ರಯತ್ನದಿಂದ ವ್ಯಾಪಾರದಲ್ಲಿ ಚೇತರಿಕೆ, ಆಹಾರ ಸೇವನೆಯಲ್ಲಿ ಎಚ್ಚರ. ಕುಟುಂಬ ವರ್ಗದವರಿಂದ ಸ್ಫೂರ್ತಿ ಸಿಗಲಿದೆ. ಸಂಬಂಧಿಕರೊಳಗೆ ಶುಭ, ಶೋಭಾನಾದಿ ಕೆಲಸವು ನಡೆಯಲಿದೆ, ದೈವಬಲ ಉತ್ತಮವಿದ್ದು ಪತಿ ಪತ್ನಿಯರಲ್ಲಿ ಹೆಚ್ಚಿನ ಅನ್ಯೋನ್ಯತೆ ಅನುಭವಕ್ಕೆ ಬರಲಿದೆ. ಬಂಧುಗಳಿಂದ ನಿಂದನೆ.

ಧನಸ್ಸುರಾಶಿ
ನೀರಿನಿಂದ ವ್ಯತ್ಯಾಸ ವಾಗುವುದರಿಂದ ದೇಹಾರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದೀತು. ಯಾವುದೇ ಕೆಲಸವನ್ನು ಮಾಡುವುದಾದರೂ ಅತೀ ಜಾಗ್ರತೆ ವಹಿಸಿರಿ. ನೀವು ಗ್ರಹಿಸಿದ ಕೆಲಸವು ನಿಧಾನಗತಿ ಕಾಣಬಹುದು. ಭೂ ವ್ಯವಹಾರಗಳಲ್ಲಿ ಲಾಭ, ದಾಂಪತ್ಯದಲ್ಲಿ ಪ್ರೀತಿ, ಮನಸ್ತಾಪ, ಕುಲದೇವರ ಅನುಗ್ರಹದಿಂದ ಕಾರ್ಯಸಿದ್ಧಿ.

ಮಕರರಾಶಿ
ಸಾಲಬಾಧೆ, ಪಾಪ ಬುದ್ಧಿ, ಚರ್ಮವ್ಯಾಧಿ, ಕುಟುಂಬ ವರ್ಗದವರಿಂದ ಸಹಕಾರ ಸಿಗಲಿದೆ. ಉದ್ಯೋಗ ವ್ಯವಹಾರದಲ್ಲಿ ಬದಲಾವಣೆಯು ತೋರಿ ಬಂದೀತು. ಶಿಸ್ತು, ಸಂಯಮವಿದ್ದಲ್ಲಿ, ಕಷ್ಟನಷ್ಟಗಳ ಅನುಭವವು ಕಡಿಮೆಯಾಗಿ ಬರುವುದು. ಕುಟುಂಬದಲ್ಲಿ ಪ್ರೀತಿ, ಅಮೂಲ್ಯ ವಸ್ತು ಖರೀದಿ.

ಕುಂಭರಾಶಿ
ಮನೆಗೆ ಹಿರಿಯರ ಆಗಮನ, ಸ್ತ್ರೀಯರಿಗೆ ಶುಭ, ಋಣಭಾದೆ, ರಾತ್ರಿ ಕಾಲದಲ್ಲಿ ಸಂಚಾರ ಉತ್ತಮವಲ್ಲಾ. ಅನ್ಯರೊಂದಿಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಧೀರ್ಘ‌ಕಾಲದ ಸಮಸ್ಯೆಗೆ ಹಂತ ಹಂತವಾಗಿ ಪರಿಹಾರ ಸಿಗಲಿದೆ. ಉನ್ನತ ಸ್ಥಾನಮಾನವು ದೊರಕಲಿದೆ. ಶುಭವಿರುವುದು. ಸುಖ ಭೋಜನ, ಆದರೂ ಮಾನಸಿಕ ಚಿಂತೆ.

ಮೀನರಾಶಿ
ಯಾರನ್ನು ಹೆಚ್ಚಾಗಿ ನಂಬಬೇಡಿ , ಶನಿ ಗ್ರಹದ ಅನುಕೂಲವು ಉತ್ತಮವಿದ್ದು ಮುನ್ನಡೆಯ ಸಾಧ್ಯತೆ ಇದೆ. ಅಧೀನ ನೌಕರರಿಂದ ಅಡಚಣೆಗಳು ಕಂಡು ಬಂದಾವು. ಹಿರಿಯ ಸೋದರರೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಳ್ಳುವಿರಿ, ಅನಗತ್ಯ ಸುತ್ತಾಟ, ಮನಃ ಕ್ಲೇಷ, ಮನಸ್ಸಿನಲ್ಲಿ ಭಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular